Friday, April 4, 2025
Google search engine

Homeರಾಜ್ಯಸುದ್ದಿಜಾಲಶ್ರದ್ಧಾಭಕ್ತಿಯಿಂದ ಹನುಮ ಜಯಂತಿ ಆಚರಣೆ

ಶ್ರದ್ಧಾಭಕ್ತಿಯಿಂದ ಹನುಮ ಜಯಂತಿ ಆಚರಣೆ

ವರದಿ: ವಿನಯ್ ದೊಡ್ಡಕೊಪ್ಪಲು

ಕೆ ಆರ್ ನಗರ : ಪಟ್ಟಣದ ವಿವಿ ರಸ್ತೆಯ ಒಂದನೇ ತಿರುವಿನ ಬಾಲಾಜಿ ಪ್ಯಾಲೆಸ್ ರಸ್ತೆಯ ಕೋಳಿ ಅಂಗಡಿ ಮಾಲೀಕ, ಕೆಲಸಗಾರರು ಹಾಗೂ ಇತರೆ ಅಂಗಡಿ ವರ್ತಕರು, ಸರ್ವಧರ್ಮದ ಜನರು ಸೇರಿ ಅದ್ದೂರಿಯಾಗಿ ಎರಡನೇ ವರ್ಷದ ಹನುಮ ಜಯಂತಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

ಆಂಜನೇಯ ಮೂರ್ತಿಗೆ ಹೋಮ-ಹವನ, ವಿವಿಧ ಅಭಿಷೇಕ ನಡೆದವು. ವಿಶೇಷವಾಗಿ ಅಲಂಕಾರ ಮಾಡಿ ಮಹಾಮಂಗಳಾರತಿ ಬೆಳಗಲಾಯಿತು. ನೂರಾರು ಭಕ್ತರು ದೇವಸ್ಥಾನಕ್ಕೆ ಆಗಮಿಸಿ ಪೂಜೆ ಸಲ್ಲಿಸಿ ಆಂಜನೇಯನ ದರ್ಶನ ಪಡೆದು ಸರತಿ ಸಾಲಿನಲ್ಲಿ ನಿಂತು ಪ್ರಸಾದವನ್ನು ಸ್ವೀಕರಿಸಿದರು.

ಈ ಕಾರ್ಯಕ್ರಮದಲ್ಲಿ ಕೋಳಿ ಅಂಗಡಿ ಮಾಲೀಕ ಎಸ್ ಶ್ರೀನಿವಾಸ್, ಪುರಸಭಾ ಸದಸ್ಯ ಕೋಳಿ ಪ್ರಕಾಶ್., ಮುಖಂಡರಾದ ರಾಮಕೃಷ್ಣ,,ಪ್ರವೀಣ, ಕಂಠೀರಾವ್, ದುರ್ಗಪ್ಪ, ಕುಮಾರ್, ಸಾಗರ್, ಬಾಲಾಜಿ ಫಾಸ್ಟ್ ಫುಡ್ ವೆಂಕಟೇಶ,ವೀರಭದ್ರೇಶ್ವರ ಪ್ರಾವಿಷನ್ ಸ್ಟೋರ್ ಮಾಲೀಕರಾದ ಗಣೇಶ ಟಿ.ಜಿ, ಲೋಕೇಶ್ ಎನ್ ಆರ್, ಟೈಲರ್ ಅನಂತು, ಪುರಸಭೆ ಲೋಕೇಶ್,ಲಿಖಿತ್ ಗೌಡ, ಕಾರ್ಮಿಕರಾದ ನಾಗೇಗೌಡ, ಆನಂದ, ಮಹದೇವ್, ಫೋಟೋ ಯೋಗೇಶ್, ಮೆಕಾನಿಕ್ ನವೀನ್. ಲಾಡ್ಜ್ ರವಿ, ಮೆಕಾನಿಕ್ ಚಂದ್ರು ಹಾಗೂ ಇತರರು ಭಾಗವಹಿಸಿದ್ದರು.

RELATED ARTICLES
- Advertisment -
Google search engine

Most Popular