Sunday, April 20, 2025
Google search engine

Homeಸ್ಥಳೀಯವಿಶ್ವ ದಾಖಲೆಯ ಮೂಲಕ 78ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮಾಚರಣೆ

ವಿಶ್ವ ದಾಖಲೆಯ ಮೂಲಕ 78ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮಾಚರಣೆ

  • ಕಣ್ಣಿಗೆ ಬಟ್ಟೆ ಕಟ್ಟಿ, ಐದು ನಿಮಿಷಗಳ ಕವಾಯತು-ಪುನರ್ ಬಳಕೆಯ ಒರಿಗಾಮಿ ಮೂಲಕ ಅತಿ ದೊಡ್ಡ ರಾಷ್ಟ್ರ ಧ್ವಜ ತಯಾರು

ಮೈಸೂರು: ೭೮ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮಾಚರಣೆ ನಮ್ಮ ಹೆಮ್ಮೆಯ ಮೈಸೂರಿನಲ್ಲಿ ಮಂಗಳವಾರವೇ ( ಆಗಸ್ಟ್ ೧೩ರಂದು ) ಆರಂಭವಾಗಲಿದೆ. ನಗರದ ಎಚ್ ಡಿ ಕೋಟೆ ರಸ್ತೆಯ ಪೂರ್ಣ ಚೇತನ ಶಾಲೆಯ ವಿದ್ಯಾರ್ಥಿಗಳು, ಪುನರ್ ಬಳಕೆಯ ಒರಿಗಾಮಿ ಮೂಲಕ ಅತಿ ದೊಡ್ಡ ರಾಷ್ಟ್ರ ಧ್ವಜ ತಯಾರಿಸಿ, ಕಣ್ಣಿಗೆ ಬಟ್ಟೆ ಕಟ್ಟಿಕೊಂಡು (ಬ್ಲೈಂಡ್ ಫೋಲ್ಡ್) ಮೂಲಕ ಐದು ನಿಮಿಷಗಳ ಕವಾಯತು ನಡೆಸಿ, ರಾಷ್ಟ್ರ ಧ್ವಜಕ್ಕೆ ಗೌರವ ವಂದನೆ ಸಲ್ಲಿಸಿ, ಇನ್ನೊಂದು ವಿಶ್ವ ದಾಖಲೆ ನಿರ್ಮಿಸಲಿದ್ದಾರೆ. ಈ ಮೂಲಕ ನಗರದಲ್ಲಿ ಸ್ವಾತಂತ್ರ್ಯ ಸಂಭ್ರಮಾಚರಣೆಗೆ ಶ್ರೀಕಾರ ಹಾಡಲಿದ್ದಾರೆ.

ಶಾಲೆಯ ಪೂರ್ವ ಪ್ರಾಥಮಿಕದಿಂದಿಡಿದು, ಹತ್ತನೇ ತರಗತಿವರೆಗಿನ, ಸುಮಾರು ೫೩೦ ವಿದ್ಯಾರ್ಥಿಗಳು ಈ ಸಂಭ್ರಮಾಚರಣೆಯ ಕೇಂದ್ರ ಬಿಂದುಗಳು. ಮಂಗಳವಾರ ಬೆಳಗ್ಗೆ ೧೦ ಗಂಟೆಗೆ ನಡೆಯಲಿರುವ ಈ ಕವಾಯತು ಹಾಗು ರಾಷ್ಟ್ರ ಧ್ವಜ ತಯಾರಿಕೆಯ ಪ್ರಯತ್ನಕ್ಕಾಗಿ ಕಳೆದ ಒಂದೂವರೆ ತಿಂಗಳಿನಿಂದ, ಶಾಲೆಯ ವಿದ್ಯಾರ್ಥಿಗಳು ಅಭ್ಯಾಸ ನಡೆಸುತ್ತಿದ್ದಾರೆ. ಈ ಸಮಾರಂಭಕ್ಕೆ ಪೋಷಕರು, ಸಾರ್ವಜನಿಕರು ಸೇರಿದಂತೆ ಸಾವಿರಾರು ಮಂದಿ ಸಾಕ್ಷಿಯಾಗಲಿದ್ದಾರೆ. ಈ ಮೂಲಕ, ಮೈಸೂರಿನಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ಆರಂಭವಾಗಲಿದೆ.

ಈ ಸಮಾರಂಭದ ಇನ್ನೊಂದು ವೈಶಿಷ್ಟ್ಯವೆಂದರೆ, ಪುನರ್ ಬಳಕೆಯ ಒರಿಗಾಮಿ ಚೆಂಡುಗಳ ಮೂಲಕ ರಾಷ್ಟ್ರ ಧ್ವಜ ತಯಾರಿ. ಇದರ ಹಿಂದಿರುವುದು ಪರಿಸರ ಸಂರಕ್ಷಣೆಯ ಪಾಠ. ಜೊತೆಗೆ ಸ್ವಚ್ಛ ಮೈಸೂರು-ಸ್ವಚ್ಛ ಭಾರತ ನಿರ್ಮಾಣದ ಸಂದೇಶ.

ಶಾಲೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದರ್ಶನ್ ರಾಜ್ ಪ್ರಕಾರ, ಬ್ಲೈಂಡ್ ಫೋಲ್ಡ್ ಮೂಲಕ, ನೂರಾರು ಶಾಲಾ ವಿದ್ಯಾರ್ಥಿಗಳು ಏಕ ಕಾಲದಲ್ಲಿ ಡ್ರಮ್ ನ ಸದ್ದಿಗೆ ಹೆಜ್ಜೆ ಮೇಲೆ ಹೆಜ್ಜೆ ಇಡುತ್ತಾ ಸೃಷ್ಟಿಸುವ ಕವಾಯತಿನ ಮಾಯಾಲೋಕ ಅಲ್ಲೊಂದು ದೇಶಭಕ್ತಿಯ ಒರತೆಯನ್ನು ಚಿಮ್ಮಿಸಲಿದೆ. “ಇಂತಹ ಒಂದು ಪ್ರಯತ್ನ ಅತಿ ಕ್ಲಿಷ್ಟಕರ ಹಾಗು ಸೂಕ್ಷ್ಮವಾದದ್ದು. ಇಲ್ಲಿ ಪ್ರತಿ ವಿದ್ಯಾರ್ಥಿಯ ಪ್ರತಿ ಹೆಜ್ಜೆಯೂ ಅತ್ಯಂತ ಮಹತ್ವ ಪೂರ್ಣವಾದದ್ದು. ಈ ಪ್ರಯತ್ನದ ಮೂಲ ಉದ್ದೇಶವೆಂದರೆ, ಈ ನೆಲದ ಪ್ರತಿ ವ್ಯಕ್ತಿಯಲ್ಲಿಯೂ ದೇಶಭಕ್ತಿಯನ್ನು ಪ್ರಜ್ವಲನಗೊಳಿಸಿ, ಭಾರತವನ್ನು ವಿಶ್ವಗುರುವನ್ನಾಗಿಸುವುದೇ ಆಗಿದೆ,” ಎಂದು ಅವರು ತಿಳಿಸಿದರು.

ಪೂರ್ಣ ಚೇತನ ಶಾಲೆಯ ಅಧ್ಯಕ್ಷ ಡಾ. ವಿದ್ಯಾಸಾಗರ್ ಪ್ರಕಾರ ಈ ಪ್ರಯತ್ನ ಹಿಂದಿರುವುದು, ಶಾಲೆಯ ವಿದ್ಯಾರ್ಥಿಗಳನ್ನು ದೇಶಭಕ್ತ ಪ್ರಜೆಗಳನ್ನಾಗಿ ರೂಪಿಸಿ, ದೇಶ ಸೇವೆಗೆ ಅವರನ್ನು ಸಜ್ಜುಗೊಳಿಸುವುದು.
ಶಾಲೆಯ ಮುಖ್ಯ ಆಡಳಿತಾಧಿಕಾರಿ ಮಾಧುರ್ಯ ರಾಮಸ್ವಾಮಿ ಮಾತನಾಡಿ, ಪೂರ್ಣ ಚೇತನ ಶಾಲೆಯ ವಿದ್ಯಾರ್ಥಿಗಳು ಈ ಪ್ರಯತ್ನದ ಮೂಲಕ, ೭೮ನೇ ಸ್ವಾತಂತ್ರ್ಯ ದಿನಾಚರಣೆಯ ಮಹತ್ವವನ್ನು, ಸ್ವಾತಂತ್ರ್ಯ ಹೋರಾಟದ ಹಿಂದಿನ ಉದ್ದೇಶ, ಗುರಿಗಳನ್ನು ಸಮಾಜಕ್ಕೆ ನೀಡಲಿದ್ದಾರೆ.

ಹೆಚ್ಚಿನ ಮಾಹಿತಿಗೆ ಸಂಪರ್ಕ ದರ್ಶನ್ ರಾಜ್, ಶಾಲೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ೯೯೦೧೦೧೦೯೯೦.

RELATED ARTICLES
- Advertisment -
Google search engine

Most Popular