ಚಾಮರಾಜನಗರ: ಜೈ ಹಿಂದ್ ಪ್ರತಿಷ್ಠಾನ ಮತ್ತು ಋಗ್ವೇದಿ ಯೂತ್ ಕ್ಲಬ್ ವತಿಯಿಂದ ಅಂತರಾಷ್ಟ್ರೀಯ ಕಲಾವಿದರ ದಿನವನ್ನು ಜೈಹಿಂದ್ ಕಟ್ಟೆಯಲ್ಲಿ ಕಲಾಚಿತ್ರಗಳನ್ನು ಪ್ರದರ್ಶಿಸುವ ಮೂಲಕ ಆಚರಿಸಲಾಯಿತು.
ಸಂಸ್ಕೃತಿ ಮತ್ತು ಇತಿಹಾಸ ರಚನೆಗೆ ಕಲೆ ಆಧಾರ .ಕಲೆ ಇಲ್ಲದೆ ಸಂಸ್ಕೃತಿ ಮತ್ತು ಇತಿಹಾಸವಿಲ್ಲ. ಮನುಷ್ಯನ ಮೊದಲ ಅಭಿವ್ಯಕ್ತಿಯೇ ಕಲೆ. ಮಾನವನ ಸೃಜನಶೀಲತೆಗೆ ಕಲೆ ಮೂಲವೆಂದು ಜೈ ಹಿಂದ್ ಪ್ರತಿಷ್ಠಾನದ ಅಧ್ಯಕ್ಷರು ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತ ಸುರೇಶ್ ಎನ್ ಋಗ್ವೇದಿ ತಿಳಿಸಿದರು.
ಮನುಷ್ಯನ ಕಷ್ಟ ,ಸುಖ ,ನೋವು, ನಲಿವು ,ಭಾವನೆ ,ಚಿಂತನೆ, ಪ್ರಕೃತಿ, ಬೆಟ್ಟಗುಡ್ಡ ,ನದಿ, ಸರೋವರ ಪ್ರಾಣಿಗಳು ಹಾಗೂ ಸೌಂದರ್ಯದ ಪ್ರತೀಕವೇ ಕಲೆಯಾಗಿದೆ .
ಕಲೆಯ ಮೂಲಕ ಜೀವಂತಿಕೆಯನ್ನು ತುಂಬುವ ಕಲಾವಿದರಿಗೆ ರಾಜ ಮಹಾರಾಜರ ಕಾಲದಿಂದಲೂ ಅಪಾರ ಗೌರವ ಮತ್ತು ಪ್ರೋತ್ಸಾಹ ನೀಡುತ್ತಿದೆ. ಇಂದಿಗೂ ಸರ್ಕಾರ ಹಾಗೂ ಸಂಘ ಸಂಸ್ಥೆಗಳು ಸಮಾಜ ಕಲಾವಿದರಿಗೆ ಅತ್ಯುನ್ನತ ಗೌರವವನ್ನು ತುಂಬುತ್ತಿದೆ. ಶಿಲ್ಪ ಕಲೆ, ಛಾಯಾಗ್ರಹಣ ,ವಾಸ್ತು ಶಿಲ್ಪ, ಸಂಗೀತ ,ವರ್ಣ ಚಿತ್ರಗಳು, ಚಿತ್ರಕಲೆ ಮನುಷ್ಯನ ಅಂತರಂಗದ ಭಾವನೆ ಮತ್ತು ಕೌಶಲ್ಯ ಶಕ್ತಿ ,ಭಾವವನ್ನು ಹೆಚ್ಚಿಸುತ್ತದೆ .
ಕಲಾವಿದರ ಮೂಲಕ ನೂರಾರು ಕ್ರಾಂತಿಗಳು, ದಂಗೆಗಳು, ಯುದ್ಧಗಳು, ಹೋರಾಟಗಳನ್ನು, ಕಲೆ ವಾಸ್ತು ಶಿಲ್ಪ , ದೇವಾಲಯಗಳು ಮತ್ತು ಮಾನವನ ವಿಕಾಸದ ಬೆಳವಣಿಗೆಯನ್ನು ಕಲಾವಿದರ ಮೂಲಕ ಬೆಳಕಿಗೆ ಬಂದಿರುವುದನ್ನು ನಾವು ನೋಡಬಹುದಾಗಿದೆ. ಕಲಾವಿದರಿಗೆ ಪ್ರೋತ್ಸಾಹ ಮತ್ತು ಸ್ಪೂರ್ತಿ ಅವಶ್ಯಕತೆ ಇದೆ ಎಂದು ಋಗ್ವೇದಿ ತಿಳಿಸಿದರು. ಝಾನ್ಸಿ ಮಕ್ಕಳ ಪರಿಷತ್ತಿನ ಅಧ್ಯಕ್ಷರಾದ ಶ್ರಾವ್ಯ ರಚಿತ ಚಿತ್ರಕಲೆಯ ಪಟಗಳನ್ನು ಪ್ರದರ್ಶಿಸಲಾಯಿತು. ಜೈ ಹಿಂದ್ ಪ್ರತಿಷ್ಠಾನದ ಕುಸುಮ, ಮಾಲಾ, ಸ್ಪೂರ್ತಿ ,ಲಕ್ಷ್ಮಿ ,ಮಾಲತಿ, ಸಾನಿಕ ಮುಂತಾದವರು ಉಪಸ್ಥಿತರಿದ್ದರು.
