Monday, April 21, 2025
Google search engine

Homeರಾಜ್ಯಸುದ್ದಿಜಾಲಬಳ್ಳಾರಿಯಲ್ಲಿ ಸಂಭ್ರಮದ ಈದ್ ಮಿಲಾದ್ ಆಚರಣೆ

ಬಳ್ಳಾರಿಯಲ್ಲಿ ಸಂಭ್ರಮದ ಈದ್ ಮಿಲಾದ್ ಆಚರಣೆ

ಬಳ್ಳಾರಿ : ನಗರ ಸೇರಿದಂತೆ ವಿವಿಧೆಡೆ ಮುಸ್ಲಿಂ ಬಾಂಧವರು ಸಂಭ್ರಮ ಮತ್ತು ಸಡಗರದಿಂದ ಈದ್ ಮಿಲಾದ್ ಆಚರಿಸಿದರು. ಹಬ್ಬದ ನಿಮಿತ್ತ ನಗರದಲ್ಲಿ ಮುಹಮ್ಮದ್ ಪೈಗಂಬರ್ ಅವರ ಜನ್ಮಸ್ಥಳ ಮೆಕ್ಕಾ ಹಾಗೂ ಮದೀನಾದ ಸ್ತಬ್ಧ ಚಿತ್ರದ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಮೆರವಣಿಗೆಯುದ್ದಕ್ಕೂ ಪೈಗಂಬರ್ ಕುರಿತಾದ ಕವ್ವಾಲಿ ಹಾಡಲಾಯಿತು.

ಮೆರವಣಿಗೆಯಲ್ಲಿ ರಾಜಕೀಯದ ಮುಖಂಡರು ಸಹ ಪಾಲ್ಗೊಂಡು ಹಬ್ಬದ ಶುಭಾಶಯಗಳನ್ನು ಹೇಳಿದರು. ಮುಸ್ಲಿಂ ಬಾಂಧವರು ಕೂಡ ಶುಭಾಶಯ ವಿನಿಮಯ ಮಾಡಿಕೊಂಡರು. ವಿವಿಧೆಡೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸ್ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು.

ಇಸ್ಲಾಂ ಧರ್ಮದ ಪ್ರವಾದಿ ಮುಹಮ್ಮದ್ ಅವರ ಜನ್ಮದಿನವನ್ನು ಸೂಫಿ ಅಥವಾ ಬರೇಲ್ವಿ ಪಂಥದ ಮುಸ್ಲಿಮರು ಈದ್ ಮಿಲಾದ್ ಉನ್ ನಬಿ ಅಥವಾ ಈದ್ ಎ ಮಿಲಾದ್ ಎಂದು ಆಚರಿಸುತ್ತಾರೆ. ಇದನ್ನು ಆಡು ಮಾತಿನಲ್ಲಿ ನಬಿದ್ ಮತ್ತು ಮೌಲಿದ್ ಎಂದೂ ಸಹ ಕರೆಯಲಾಗುತ್ತದೆ. ಇಸ್ಲಾಮಿಕ್ ಕ್ಯಾಲೆಂಡರ್‌ನ ೩ನೇ ತಿಂಗಳಾದ ರಬಿ ಅಲ್ ಅವ್ವಲ್ ಸಮಯದಲ್ಲಿ ಹಬ್ಬವನ್ನು ಆಚರಿಸಲಾಗುತ್ತದೆ.

RELATED ARTICLES
- Advertisment -
Google search engine

Most Popular