ಮೈಸೂರು:ಮೈಸೂರು ರೈಲ್ವೆ ಹಾಗೂ ಚಾಲಕರ ಹಾಗೂ ಪಾಲಕರ ಬಳಗದಿಂದ ಕನ್ನಡ ರಾಜ್ಯೋತ್ಸವವನ್ನು ಮೈಸೂರು ರೈಲ್ವೆ ನಿಲ್ದಾಣದ ಸಂಯುಕ್ತ ಚಾಲಕ ದಳದಲ್ಲಿ ಆಚರಿಸಲಾಯಿತು.
ರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣ ಮಾಡಲಾಯಿತು ಇದೇ ಸಂದರ್ಭದಲ್ಲಿ ಸಂಯುಕ್ತ ಚಾಲಕದಳದಲ್ಲಿ ಕಿರು ಗ್ರಂಥಾಲಯದ ಉದ್ಘಾಟನೆ ಮಾಡಲಾಯಿತು. ಹಿರಿಯ ಹಿರಿಯ ರೈಲ್ವೆ ನಿರೀಕ್ಷೆಕರು ಹಾಗೂ ಚಾಲಕರಿಗೆ ಸನ್ಮಾನಿಸಲಾಯಿತು.

ತಿಲಕ್ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡಕ್ಕೆ ಬಣ್ಣ ಮಾಡಿಸಲಾಯಿತು ಹಾಗೂ ಶಾಲಾ ಮಕ್ಕಳಿಗೆ ಕುರ್ಚಿಗಳು ಕ್ರೀಡಾ ಸಾಮಗ್ರಿಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ವಿಷ್ಣು ಗೌಡ ಎಸ್ ಹಿರಿಯ ವಿಭಾಗೀಯ ಕಾರ್ಮಿಕ ಅಧಿಕಾರಿಗಳು ವಹಿಸಿದರು ,ಎಸ್ ಡಬ್ಲ್ಯೂ ಆರ್ ಎಂ ನ ವಿಭಾಗಿಯ ಕಾರ್ಯದರ್ಶಿಗಳಾದ ಶ್ರೀ ಪಿ ಶಿವಪ್ರಕಾಶ್ ಉಪಸ್ಥಿತರಿದ್ದರು.
