Thursday, April 3, 2025
Google search engine

Homeರಾಜ್ಯಸುದ್ದಿಜಾಲರಾಷ್ಟ್ರದ ಹೆಮ್ಮೆಯ ಸಂತ ಸಿದ್ದಗಂಗಾ ಮಠದಶ್ರೀ ಶಿವಕುಮಾರ ಸ್ವಾಮಿ ಜಯಂತಿ, ದಾಸೋಹ ದಿನಾಚರಣೆ

ರಾಷ್ಟ್ರದ ಹೆಮ್ಮೆಯ ಸಂತ ಸಿದ್ದಗಂಗಾ ಮಠದಶ್ರೀ ಶಿವಕುಮಾರ ಸ್ವಾಮಿ ಜಯಂತಿ, ದಾಸೋಹ ದಿನಾಚರಣೆ

ಚಾಮರಾಜನಗರ: ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ರಾಷ್ಟ್ರದ ಹೆಮ್ಮೆಯ ಸಂತ ಸಿದ್ದಗಂಗಾ ಮಠದಶ್ರೀ ಶಿವಕುಮಾರ ಸ್ವಾಮಿಯವರ ಜಯಂತಿ ಹಾಗೂ ದಾಸೋಹ ದಿನವನ್ನು ಆಚರಿಸಲಾಯಿತು.

ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಶಿವಕುಮಾರ ಸ್ವಾಮಿ ಅವರ ಭಾವಚಿತ್ರಕ್ಕೆ ಪುಷ್ಪವನ್ನು ಅರ್ಪಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯ , ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರಾದ ಬಿ ಕೆ ರವಿಕುಮಾರ್ ಶಿವಕುಮಾರ ಸ್ವಾಮಿಯವರು ಮಾನವ ಜನಾಂಗಕ್ಕೆ ಆದರ್ಶ. ಅವರ ಇಡೀ ಜೀವನವನ್ನು ಅಭಿವೃದ್ಧಿ ,ಶಿಕ್ಷಣ ,ದಾಸೋಹ, ವಸತಿಗಾಗಿ ಮೀಸಲಿಟ್ಟು ಲಕ್ಷಾಂತರ ವಿದ್ಯಾರ್ಥಿಗಳ ಸಮಗ್ರ ವಿಕಾಸಕ್ಕೆ ಅಡಿಪಾಯ ಹಾಕಿ ಧರ್ಮದ ನೆಲೆಗಟ್ಟಿನಲ್ಲಿ ಶ್ರೇಷ್ಠ ಬದುಕನ್ನು ನಡೆಸಿದವರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ದಾಸೋಹ ದಿನದ ಮೂಲಕ ಶಿವಕುಮಾರ ಸ್ವಾಮಿಯವರ ಜಯಂತಿಯನ್ನು ಆಚರಿಸುತ್ತಿರುವುದು ಸಂತೋಷವಾದದ್ದು. ಅವರ ಜೀವನ ನಮಗೆಲ್ಲರಿಗೂ ಆದರ್ಶವಾಗಲಿ. ಅವರ ಸೇವಾ ಗುಣ ನಮ್ಮಲ್ಲೂ ಮೂಡಲಿ ಎಂದು ಪ್ರಾರ್ಥಿಸೋಣ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಜಿಲ್ಲಾ ಅಧ್ಯಕ್ಷರಾದ ಎಎಂ ನಾಗಮಲ್ಲಪ್ಪನವರು ಶಿವಕುಮಾರ ಸ್ವಾಮಿಯವರ ಜೀವನವನ್ನು ಮತ್ತು ಬದುಕು ವಿವರಿಸಿ ಶಿವಕುಮಾರ ಸ್ವಾಮಿಯವರು ರಾಷ್ಟ್ರದ ಹೆಮ್ಮೆಯ ಸತ್ಪುರುಷರು . ಭಾರತೀಯ ಧರ್ಮದ ಸೇವೆ ಮತ್ತು ದಾಸೋಹಕ್ಕೆ ಮತ್ತೊಂದು ಹೆಸರು ಶಿವಕುಮಾರ ಸ್ವಾಮಿಯವರು. ಇಡೀ ನಾಡು ಅವರ ಸೇವೆಯನ್ನು ಸ್ಮರಿಸುವ ಮೂಲಕ ಮಾನವನ ಆತ್ಮ ಕಲ್ಯಾಣವನ್ನು ಮಾಡುತ್ತಿರುವುದು ಹೆಮ್ಮೆಯ ವಿಷಯ .ಎಲ್ಲಾ ಕಡೆ ಆಹಾರ ವಿತರಣೆ ,ರಕ್ತದಾನ, ವಸ್ತ್ರ ವಿತರಣೆ ಹಾಗು ವಿವಿಧ ಕಾರ್ಯಕ್ರಮಗಳ ಮೂಲಕ ಸಮಾಜಮುಖಿ ಆರೋಗ್ಯ ಪೂರ್ಣ ಕಾರ್ಯಗಳನ್ನು ಮಾಡುತ್ತಿರುವುದು ಹೆಮ್ಮೆಯಾಗಿದೆ ಎಂದರು.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಉಪಾಧ್ಯಕ್ಷರಾದ ಯೋಗಾಪ್ರಕಾಶ್ ರವರು ಮಾತನಾಡಿ ಶಿವಕುಮಾರ ಸ್ವಾಮಿಯವರು ಓರ್ವ ಸಂತ ರಾಗಿ ಮಹಾತ್ಮರಾಗಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ಶಿಕ್ಷಣ, ದಾಸೋಹ ವಸತಿ ನೀಡಿ ಧರ್ಮ, ಶಿಸ್ತು ,ಪ್ರೀತಿ, ವಿಶ್ವಾಸ ಸಹಕಾರ ಗುಣಗಳನ್ನುಪ್ರೋತ್ಸಾಹಿಸಿದ ಮಹಾನ್ ವ್ಯಕ್ತಿ .ಸಿದ್ದಗಂಗಾ ಮಠವನ್ನು ರಾಷ್ಟ್ರಮಟ್ಟದಲ್ಲಿ ಸೇವೆಯ ಮೂಲಕ ಬೆಳಗಿಸಿದ ಮಹಾನ್ ಜ್ಯೋತಿ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಋಗ್ವೇದಿಯವರು ದಾಸೋಹ ದಿನವನ್ನು ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಮಾಡಿರುವುದು ಮಾದರಿಯಾದದ್ದು. ಸಮಾಜಕ್ಕಾಗಿ ಸೇವಿಸಲ್ಲಿಸಿರುವ ವ್ಯಕ್ತಿಗಳನ್ನು ಸ್ಮರಿಸಿಕೊಳ್ಳುವುದು ನಮ್ಮ ಸಂಸ್ಕೃತಿಯ ಭಾಗವಾಗಿದೆ ಎಂದರು.ಕನ್ನಡ ಸಾಹಿತ್ಯ ಪರಿಷತ್ತಿನ ಪದ್ಮಾಕ್ಷಿ ಸ್ವ ರಚಿತ ಕವನವನ್ನು ಓದಿ ಅವರ ಇತಿಹಾಸವನ್ನು ತಿಳಿಸಿದರು.

ಸಭೆಯ ಅಧ್ಯಕ್ಷತೆಯನ್ನು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸುರೇಶ್ ಎನ್ ಋಗ್ವೇದಿ ಮಾತನಾಡಿ ಶಿವಕುಮಾರ ಸ್ವಾಮಿಯವರು ರಾಷ್ಟ್ರದ ದಿವ್ಯ ಪುರುಷರು. ಕರ್ನಾಟಕ ದಾಸೋಹದ ಪ್ರತೀಕ. ಎಲ್ಲಾ ಮಠಮಾನ್ಯಗಳು ದೇವಾಲಯಗಳು ನೂರಾರು ವರ್ಷಗಳಿಂದ ನಿರಂತರವಾಗಿ ಸಮಾಜಮುಖಿ ಅರ್ಥಗರ್ಭಿತ ಮೇಲು ಕೀಳು ಎಂಬ ಭಾವವಿಲ್ಲದೆ ಸರ್ವರಿಗೂ ಶಿಕ್ಷಣ ಆರೋಗ್ಯ ಹಾಗೂ ವಸತಿ ಮತ್ತು ಆಹಾರವನ್ನು ನೀಡುತ್ತಿರುವುದು ಇದೇ ವಿಶ್ವಕ್ಕೆ ಮಾದರಿಯಾದದ್ದು. ಭಾರತೀಯ ಸನಾತನ ಧರ್ಮದ ಮೂಲತತ್ವವೇ ದಾಸೋಹವಾಗಿದೆ ದಾಸೋಹಕ್ಕೆ ಅರ್ಥ ಶಿವಕುಮಾರ ಸ್ವಾಮಿಯವರು ಎಂದರು.

ಕಾರ್ಯಕ್ರಮದಲ್ಲಿ ಚಾಮರಾಜನಗರ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಬಸವಣ್ಣ , ಲಕ್ಷ್ಮಿ ನರಸಿಂಹ, ಕನ್ನಡ ಸಾಹಿತ್ಯ ಪರಿಷತ್ತಿನ ಸರಸ್ವತಿ, ಶಿವಲಿಂಗ ಮೂರ್ತಿ, ಬಿಕೆ ಆರಾಧ್ಯ ಹಾಗೂ ಮಹದೇವಪ್ಪನವರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular