ಭೋಪಾಲ್: ಸಿಮೆಂಟ್ ಬಲ್ಕರ್ ವಾಹನ ಜೀಪ್ ಮೇಲೆ ಉರುಳಿ ಬಿದ್ದು 7 ಮಂದಿ ಮೃತಪಟ್ಟ ಘಟನೆ ಸಿಧಿ ಜಿಲ್ಲೆಯ ಮದ್ವಾಸ್ ಪ್ರದೇಶದ ಡೋಲ್ ಗ್ರಾಮದಲ್ಲಿ ಈ ಘಟನೆ ನಡೆದಿರುವುದು ವರದಿಯಾಗಿದೆ.
ಗುರುವಾರ ಮುಂಜಾನೆ ಈ ಘಟನೆ ನಡೆದಿದ್ದು, ಸಿಮೆಂಟ್ ಬಲ್ಕರ್ ವಾಹನ ನಿಯಂತ್ರಣ ತಪ್ಪಿ ಜೀಪ್ ನ ಮೇಲೆ ಬಿದ್ದಿದೆ. ಪರಿಣಾಮ 7 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಧಾವಿಸಿದ್ದಾರೆ. ಘಟನೆ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.