Saturday, April 19, 2025
Google search engine

Homeರಾಜ್ಯಕೇಂದ್ರದಿಂದ ಕೋವಿಡ್ ಗೈಡ್‌ಲೈನ್ಸ್ ಬಿಡುಗಡೆ: ಕಟ್ಟುನಿಟ್ಟಾಗಿ ಪಾಲಿಸುವಂತೆ ರಾಜ್ಯಗಳಿಗೆ ಸೂಚನೆ

ಕೇಂದ್ರದಿಂದ ಕೋವಿಡ್ ಗೈಡ್‌ಲೈನ್ಸ್ ಬಿಡುಗಡೆ: ಕಟ್ಟುನಿಟ್ಟಾಗಿ ಪಾಲಿಸುವಂತೆ ರಾಜ್ಯಗಳಿಗೆ ಸೂಚನೆ

ಬೆಂಗಳೂರು: ನೆರೆಯ ರಾಜ್ಯ ಕೇರಳದಲ್ಲಿ ಕೊರೊನಾ ವೈರಸ್ ರೂಪಾಂತರಿ ಜೆಎನ್​.1 ಪ್ರಕರಣಗಳಲ್ಲಿ ಹೆಚ್ಚಳ ಕಂಡುಬಂದ ಹಿನ್ನೆಲೆ ಕೇಂದ್ರ ಸರ್ಕಾರ ಕೊವಿಡ್ ಗೈಡ್‌ಲೈನ್ಸ್ ಬಿಡುಗಡೆ ಮಾಡಿದ್ದು, ಕಟ್ಟುನಿಟ್ಟಾಗಿ ಪಾಲಿಸುವಂತೆ ರಾಜ್ಯಗಳಿಗೆ ಸೂಚನೆ ನೀಡಲಾಗಿದೆ. ಮುಂಬರುವ ಹಬ್ಬಗಳ ಮೇಲೆ ನಿಗಾ ವಹಿಸಬೇಕು. ಪ್ರತಿ ಜಿಲ್ಲೆ ಮತ್ತು ನಗರಗಳಲ್ಲಿ ಆರ್ಟಿಪಿಸಿಆರ್, ರ‍್ಯಾಪಿಡ್ ಆಂಟಿಜೆನ್ ಟೆಸ್ಟ್ ಮಾಡಲು ಸೂಚನೆ ನೀಡಲಾಗಿದೆ.

ಐಎಲ್​ಐ, ಸ್ಯಾರಿ ಕೇಸ್​ಗಳ ಮೇಲೆ ನಿಗಾ ಇಡಲು ಚಿಕಿತ್ಸೆ ಬೇಕಾದ ಮೂಲ ಸೌಕರ್ಯ ಕ್ರೋಢೀಕರಣ. ಆರ್ಟಿಪಿಸಿಆರ್ ಪಾಸಿಟಿವ್ ಬಂದರೆ ಜೆನೆಮಿಕ್ ಸೀಕ್ವೆನ್ಸ್​ಗೆ ಸ್ಯಾಂಪಲ್ ಕಳಿಸಬೇಕು. ಆ ಮೂಲಕ ಕೋವಿಡ್ ರೂಲ್ಸ್ ನಿರ್ಧಾರ ರಾಜ್ಯಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯ ಹೊಣೆ ನೀಡಿದೆ.

ಹೆಚ್ಚಿನ ಸಂಖ್ಯೆಯ RT-PCR ಪರೀಕ್ಷೆ ಮಾಡುವುದು ಮತ್ತು ಜೀನೋಮ್ ಅನುಕ್ರಮಕ್ಕಾಗಿ ಧನಾತ್ಮಕ ಮಾದರಿಗಳನ್ನು ಭಾರತೀಯ SARS COV-2 ಜೀನೋಮಿಕ್ಸ್ ಕನ್ಸೋರ್ಟಿಯಮ್ ಪ್ರಯೋಗಾಲಯಗಳಿಗೆ ಕಳುಹಿಸಿ, ಇದರಿಂದಾಗಿ ದೇಶದಲ್ಲಿ ಯಾವುದಾದರೂ ಹೊಸ ರೂಪಾಂತರಗಳನ್ನು ಸಮಯೋಚಿತವಾಗಿ ಪತ್ತೆಹಚ್ಚಲು ಸಾಧ್ಯವಾಗುತ್ತದೆ.

ಸಚಿವಾಲಯವು ನಡೆಸುತ್ತಿರುವ ಡ್ರಿಲ್‌ನಲ್ಲಿ ಎಲ್ಲಾ ಸಾರ್ವಜನಿಕ ಮತ್ತು ಖಾಸಗಿ ಆರೋಗ್ಯ ಸೌಲಭ್ಯಗಳ ಸಕ್ರಿಯ ಭಾಗವಹಿಸುವಿಕೆಯನ್ನು ಖಾತ್ರಿಪಡಿಸಿಕೊಳ್ಳುವುದು. ಅವುಗಳ ಸನ್ನದ್ಧತೆ ಮತ್ತು ಪ್ರತಿಕ್ರಿಯೆ ಸಾಮರ್ಥ್ಯಗಳನ್ನು ಪರಿಶೀಲಿಸುವುದು.

ಉಸಿರಾಟದ ನೈರ್ಮಲ್ಯವನ್ನು ಅನುಸರಿಸುವುದು ಸೇರಿದಂತೆ ಕೋವಿಡ್​ ನಿಯಂತ್ರಿಸುವಲ್ಲಿ ನಿರಂತರ ಬೆಂಬಲದೊಂದಿಗೆ ಸಮುದಾಯದ ಜಾಗೃತಿಯನ್ನು ಉತ್ತೇಜಿಸುವುದು.

RELATED ARTICLES
- Advertisment -
Google search engine

Most Popular