Wednesday, April 1, 2026
Google search engine

Homeರಾಜಕೀಯಕೇಂದ್ರದ ಕಟ್ಟುನಿಟ್ಟಿನ ಕ್ರಮ : 21 ಲಕ್ಷಕ್ಕೂ ಹೆಚ್ಚು ಜನರಿಗೆ ಅನ್ನಭಾಗ್ಯ ಕಡಿತ ಸಾಧ್ಯತೆ

ಕೇಂದ್ರದ ಕಟ್ಟುನಿಟ್ಟಿನ ಕ್ರಮ : 21 ಲಕ್ಷಕ್ಕೂ ಹೆಚ್ಚು ಜನರಿಗೆ ಅನ್ನಭಾಗ್ಯ ಕಡಿತ ಸಾಧ್ಯತೆ

ಬೆಂಗಳೂರು : ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಕೇಂದ್ರ ಸರ್ಕಾರ ಬಿಗ್ ಶಾಕ್ ನೀಡಿದ್ದು, ಯೋಜನೆಯಲ್ಲಿ ಸರ್ಕಾರದ ಕಣ್ತಪ್ಪಿಸಿ ಸವಲತ್ತು ಅನುಭವಿಸುತ್ತಿದ್ದ ಮಂದಿಗೆ ಬಿಸಿ ಮುಟ್ಟಿಸೋಕೆ ಸಜ್ಜಾಗಿದೆ. ‘ಅನ್ನಭಾಗ್ಯ’ ಯೋಜನೆಯ 4.54 ಕೋಟಿ ಫಲಾನುಭವಿಗಳ ಪೈಕಿ 21.63 ಲಕ್ಷ ಫಲಾನುಭವಿಗಳು ಹೊರಗುಳಿಯುವ ಸಾಧ್ಯತೆಗಳಿದ್ದು, ಇದರಿಂದ ಸರ್ಕಾರದ ಬೊಕ್ಕಸಕ್ಕೂ ಮಾಸಿಕ 25 ಕೋಟಿ ರೂ. ಉಳಿತಾಯ ಆಗುವ ಅಂದಾಜಿದೆ.

ಇನ್ನೂ ಬರೋಬ್ಬರಿ 7.76 ಲಕ್ಷ ಅನರ್ಹ ಬಿಪಿಎಲ್ ಫಲಾನುಭವಿಗಳನ್ನು ಕೇಂದ್ರ ಸರ್ಕಾರ ಗುರುತಿಸಿದ್ದು, ಜತೆಗೆ ರಾಜ್ಯದ ‘ಕುಟುಂಬ’ ತಂತ್ರಾಂಶದಡಿ 13.87 ಲಕ್ಷ ಶಂಕಾಸ್ಪದ ಫಲಾನುಭವಿಗಳು ಕಂಡು ಬಂದಿದ್ದಾರೆ ಎಂದು ವರದಿಯಾಗಿದೆ.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಂಕಿ-ಅಂಶಗಳ ಪ್ರಕಾರ ಕೇಂದ್ರ ಸರ್ಕಾರ ಗುರುತಿಸಿದ್ದ 7.76 ಲಕ್ಷ ಸಂಶಯಾಸ್ಪದ ಅನರ್ಹ ಫಲಾನುಭವಿಗಳ ಪೈಕಿ 4.72 ಲಕ್ಷ ಫಲಾನುಭವಿಗಳ ಕಾರ್ಡ್‌ಗಳನ್ನು ರದ್ದು ಮಾಡಲಾಗಿದ್ದು, ಇನ್ನುಳಿದ 3.03 ಲಕ್ಷ ಫಲಾನುಭವಿಗಳ ವಿಚಾರದಲ್ಲಿ ಪರಿಶೀಲನಾ ಕ್ರಮ ಚಾಲ್ತಿಯಲ್ಲಿದೆ. ಇಷ್ಟು 4.72 ಲಕ್ಷ ಫಲಾನುಭವಿಗಳು ಅನ್ನಭಾಗ್ಯ ಯೋಜನೆಯಿಂದ ಹೊರಗುಳಿದಿರುವುದರಿಂದ 8 ಕೋಟಿ ರೂ. ಸರ್ಕಾರದ ಬೊಕ್ಕಸಕ್ಕೆ ಉಳಿತಾಯ ಆದಂತಾಗಿದೆ.

ಪ್ರಸ್ತುತ ಬಿಪಿಎಲ್ ಕಾರ್ಡ್ ಪಡೆಯಲು ಇರುವ ವಾರ್ಷಿಕ ಆದಾಯ ಮಿತಿಯನ್ನು 1.20 ಲಕ್ಷ ರೂ.ಗಳಿಂದ 3 ಲಕ್ಷ ರೂ.ಗೆ ಏರಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದ್ದು ಇದಕ್ಕೆ ಕೇಂದ್ರ ಸರ್ಕಾರದ ಅನುಮೋದನೆಯೂ ಬೇಕಾಗುತ್ತದೆ. ಇಲ್ಲದಿದ್ದರೆ, ರಾಜ್ಯ ಸರ್ಕಾರ ನೀಡಿರುವ ಕೆಲವೇ ಫಲಾನುಭವಿಗಳಿಗೆ ಇದರ ಪ್ರಯೋಜನ ಸಿಗುವ ಆತಂಕವಿದ್ದು, ಇನ್ನಷ್ಟು ಫಲಾನುಭವಿಗಳು ಅನ್ನಭಾಗ್ಯ ಯೋಜನೆಯಿಂದ ಹೊರಗುಳಿಯುವ ಸಾಧ್ಯತೆಗಳಿದೆ.

RELATED ARTICLES
- Advertisment -
Google search engine

Most Popular