ಮೈಸೂರು: ಕೇಂದ್ರ ಮತ್ತುರಾಜ್ಯ ಸರ್ಕಾರಗಳು ಶಿಷಣ ಕ್ಷೇತ್ರಕ್ಕೆ ಹೆಚ್ಚಿನಅನುಧಾನ ನೀಡಬೇಕೆಂದು ವಿಧಾನಪರಿಷತ್ ಸದಸ್ಯಡಾ.ಯತೀಂದ್ರ ಸಿದ್ದರಾಮಯ್ಯ ಸರ್ಕಾರವನ್ನು ಒತ್ತಾಯಿಸಿದರು.
ವರುಣಾಕ್ಷೇತ್ರದ ಲಲಿತಾದ್ರಿಪುರದಲ್ಲಿ ಸರ್ಕಾರಿ ಪ್ರೌಢ ಶಾಲಾಕಟ್ಟಡದ ಉದ್ಘಾಟನೆ ಹಾಗೂ ೯ನೇ ತರಗತಿ ಪ್ರಾರಂಭೋತ್ಸವದಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದಅವರು ಲಲಿತಾದ್ರಿಪುರದಲ್ಲಿಸುಮಾರು ೪ಸಾವಿರಕ್ಕೂ ಹೆಚ್ಚುಜನಸಂಖ್ಯೆಯಿದ್ದು, ಇಲ್ಲಿನ ಮಕ್ಕಳು ಪ್ರೌಢಶಾಲೆಗೆ ಬೇರೆಕಡೆಗೆ ಹೋಗಬೇಕಾಗಿತ್ತು. ನಾನು ಶಾಸಕನಾಗಿದ್ದಾಗಬಿ.ಜೆ.ಪಿ. ಸರ್ಕಾರಕ್ಕೆ ಪ್ರೌಢಶಾಲೆಮಂಜೂರುಮಾಡಬೇಕೆಂದುಮನವಿಮಾಡಿದ್ದರೂ ಆಗಲಿಲ್ಲ. ಈಗ ನಮ್ಮದೇಸರ್ಕಾರವಿದ್ದು ಸಿದ್ದರಾಮಯ್ಯರವರೇ ಮುಖ್ಯಮಂತ್ರಿಯಾಗಿರುವುದರಿಂದ ಪ್ರೌಢಶಾಲೆಯನ್ನು ಮಂಜೂರು ಮಾಡಿಕೋಟಿದ್ದಾರೆ. ೯ನೇ ತರಗತಿಗೆ ೨೭ ಮಕ್ಕಳು ದಾಖಲಾಗಿದ್ದಾರೆ ೧೪ಲಕ್ಷರೂ ವೆಚ್ಚಮಾಡಿ ಈ ಕಟ್ಟಡವನ್ನು ನಿರ್ಮಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯರವರು ವರುಣಾಕ್ಷೇತ್ರದ ಶಾಲೆಗಳ ಅಭಿವೃದ್ದಿಗೆ ೩೦ಕೋಟಿ ನೀಡಿದ್ದರುಅದನ್ನೆಲ್ಲಾ ಶಾಲೆಗಳರಿಪೇರಿ, ಹೊಸಕಟ್ಟಡ ನಿರ್ಮಾಣಕ್ಕೆಖರ್ಚು ಮಾಡಲಾಗಿದೆ. ಯಾವುದೇದೇಶಅಭಿವೃದ್ದಿ ಹೊಂದಬೇಕಾದರೆ ಶಿಕ್ಷಣದಿಂದ ಮಾತ್ರ ಸಾಧ್ಯವಾಗಿದ್ದುಇಂದು ಭಾರತದಲ್ಲಿ ಶಿಕ್ಷಣಪಡೆದ ಮಕ್ಕಳು ಪ್ರಪಂಚದದ್ಯಾಂತ ಕೆಲಸಮಾಡುತ್ತಿದಾರೆ.ಆದ್ದರಿಂದಯಾವುದೇ ಮಗು ಶಿಕ್ಷಣದಿಂದ ವಂಚಿತರಾಗದಂತೆ ಶಿಕ್ಷಕರು ಗ್ರಾಮಸ್ಥರು ನೋಡಿಕೊಳ್ಳಬೇಕು ಎಂದರು.
ಸಮಾರಂಭದಲ್ಲಿ ಮುಖ್ಯಮಂತ್ರಿಗಳ ವಿಶೇಷ ಅಧಿಕಾರಿಕೆ.ಎನ್. ವಿಜಯ್,ಡಿ.ಡಿ.ಪಿ.ಐ.ಜವರೇಗೌಡ, ಬಿ.ಇ.ಓ. ವಿವೇಕಾಂದ, ಎಸ್.ಡಿ.ಎಂ.ಸಿ.ಅಧಕ್ಷ ನಾಗೇಂದ್ರ, ಮುಖ್ಯ ಶಿಕ್ಷಕಿ ಕಮಲಾಕ್ಷಿ, ಶಿಕ್ಷಕಿ ಪವಿತ್ರ ಮುಖಂಡರಾದ ಸಕಳ್ಳಿ ಬಸವರಾಜು, ಎ.ಪಿ.ಎಂ.ಸಿ. ಮಾಜಿಅಧ್ಯಕ್ಷ ಬಂಡಿಪಾಳ್ಯ ಬಸವರಾಜು,ರಮೇಶ್ ಮುದ್ದೇಗೌಡ, ಮಂಜುಳ ಮಂಜುನಾಥ್, ತಾ,ಪಂ. ಮಾಜಿ ಸದಸ್ಯರಾದಎಂ.ಟಿರವಿಕುಮಾರ್,ಜಿ.ಕೆ. ಬಸವಣ್ಣ, ಸಿದ್ದಯ್ಯ, ಶಾಂತಮ್ಮ,ದಕ್ಷಿಣಾಮೂರ್ತಿ, ಅಭಿಆಪ್ತಸಹಾಯಕರಾದ ಶಿವಸ್ವಾಮಿ, ಪ್ರದೀಪ್‌ಕುಮಾರ್, ನಾಗರಾಜ್‌ಹಾಜರಿದ್ದರು.