Saturday, April 19, 2025
Google search engine

Homeಸ್ಥಳೀಯಕೇಂದ್ರ ಬಿಜೆಪಿಯದ್ದು ಸೇಡಿನ ರಾಜಕಾರಣ: ಗಿರೀಶ್ ಆರ್.ಲಕ್ಕೂರು

ಕೇಂದ್ರ ಬಿಜೆಪಿಯದ್ದು ಸೇಡಿನ ರಾಜಕಾರಣ: ಗಿರೀಶ್ ಆರ್.ಲಕ್ಕೂರು

ಗುಂಡ್ಲುಪೇಟೆ: ಕೇಂದ್ರ ಬಿಜೆಪಿ ಸರ್ಕಾರ ಸೇಡಿನ ರಾಜಕಾರಣ ಬಿಟ್ಟು ದೇಶದ ಅಭಿವೃದ್ಧಿ ಕಡೆ ಗಮನ ಹರಿಸಲಿ ಎಂದು ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಗಿರೀಶ್ ಆರ್.ಲಕ್ಕೂರು ತಿಳಿಸಿದರು.

ರಾಹುಲ್ ಗಾಂಧಿ ದೇಶ ವ್ಯಾಪ್ತಿ ಪ್ರೀತಿ, ಕರುಣೆ, ಶಾಂತಿ  ಅಂಚಲು ಭಾರತ ಜೋಡೋ ಮೂಲಕ ಜನ ಮನ್ನಣೆ ಪಡೆದಿರುವುದನ್ನು ಸಹಿಸಲಾರದೆ ಬಿಜೆಪಿ ನರೇಂದ್ರ ಮೋದಿ ಸರ್ಕಾರ ರಾಹುಲ್ ಗಾಂಧಿ ಅವರ ಲೋಕಸಭೆ ಸದಸ್ಯತ್ವವನ್ನು ಅನರ್ಹತೆ ಗೊಳಿಸಲು ಹಿಂಭಾಗಿಲಿನ ಮೂಲಕ ಹುನ್ನಾರ ನಡೆಸುತ್ತಿರುವುದು ಖಂಡನೀಯ ಎಂದು ಕಿಡಿಕಾರಿದರು.

ರಾಹುಲ್ ಗಾಂಧಿಯವರದ್ದು ಭಾರತ ಜೋಡೋ ಕಾರ್ಯಕ್ರಮವಾದರೆ ಬಿಜೆಪಿ ನಾಯಕರದು ಭಾರತ ತೋಡೋ ತೋಡೋ ಕಾರ್ಯಕ್ರಮ. ಇದು ಬಿಜೆಪಿ ಕಾಂಗ್ರೆಸ್ ಪಕ್ಷಕ್ಕೆ ನಡುವಿನ ವ್ಯತ್ಯಾಸ ಎಂದು ತಿಳಿಸಿದರು.

ಬಿಜೆಪಿ ನಾಯಕರು ದ್ವೇಷ, ಸೇಡಿನಾ ರಾಜಕೀಯ ಮಾಡುತ್ತಿರುವ ಜೊತೆಗೆ ಪ್ರತಿ ಪಕ್ಷಗಳ ನಾಯಕ ಮೇಲೆ ದ್ವೇಷ ರಾಜಕಾರಣ ಮಾಡುತ ಐಟಿ, ಇಡಿ, ಸಿಬಿಐ ಗಳ ಮುಖಾಂತರ ಪ್ರತಿಪಕ್ಷಗಳ ಹತ್ತಿಕ್ಕವ ಹುನ್ನಾರ ನಡೆಸುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದರು.

RELATED ARTICLES
- Advertisment -
Google search engine

Most Popular