Saturday, April 19, 2025
Google search engine

Homeಅಪರಾಧಮೈಸೂರಿನಲ್ಲಿ ಸರಗಳ್ಳತನ ಮಹಿಳೆ ಬಂಧನ: ೨ ಲಕ್ಷ ನಗದು, ೪೪ ಗ್ರಾಂ ಚಿನ್ನದ ಸರ ವಶ

ಮೈಸೂರಿನಲ್ಲಿ ಸರಗಳ್ಳತನ ಮಹಿಳೆ ಬಂಧನ: ೨ ಲಕ್ಷ ನಗದು, ೪೪ ಗ್ರಾಂ ಚಿನ್ನದ ಸರ ವಶ

ಮೈಸೂರು: ಸ್ಕೂಟರ್ ಡಿಕ್ಕಿಯಲ್ಲಿ ಮಾಂಗಲ್ಯ ಸರ ಕಳವು ಮಾಡಿದ್ದ ಮಹಿಳೆಯನ್ನು ನಜರ್‌ಬಾದ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತೆಯಿಂದ ೨ ಲಕ್ಷ ರೂ., ೪೪ ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ ವಶಪಡಿಸಿಕೊಳ್ಳಲಾಗಿದೆ. ಅ.೨೨ರಂದು ಸಿದ್ದಾರ್ಥ ಲೇ ಔಟ್‌ನ ಮನೆ ಮುಂಭಾಗ ನಿಲ್ಲಿಸಿದ್ದ ಸ್ಕೂಟರ್ ಡಿಕ್ಕಿಯಲ್ಲಿ ಸರ ಕಳವು ಮಾಡಲಾಗಿತ್ತು.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಕಾರ್ಯಾಚರಣೆ ನಡೆಸಿದಾಗ ದೂರು ನೀಡಿದ್ದ ಮಹಿಳೆಯ ಪರಿಚಿತ ಮಹಿಳೆಯೇ ಕಳವು ಮಾಡಿರುವುದು ಬೆಳಕಿಗೆ ಬಂದಿದೆ. ಡಿಸಿಪಿ ಎಸ್.ಜಾಹ್ನವಿ ಮಾರ್ಗದರ್ಶನದಲ್ಲಿ ದೇವರಾಜ ವಿಭಾಗದ ಎಸಿಪಿ ಶಾಂತಮಲ್ಲಪ ನೇತೃತ್ವದಲ್ಲಿ ನಜರ್‌ಬಾದ್ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಎಂ.ಮಹದೇವಸ್ವಾಮಿ, ಎಸ್‌ಐ ಶ್ರೀನಿವಾಸ್ ಪಾಟೀಲ್, ಸಿಬ್ಬಂದಿಗಳು ಮತ್ತು ತಾಂತ್ರಿಕ ವಿಭಾಗದ ಕುಮಾರ್.ಪಿ ಮಾಡಿದ್ದಾರೆ.

RELATED ARTICLES
- Advertisment -
Google search engine

Most Popular