Friday, April 18, 2025
Google search engine

HomeUncategorizedರಾಷ್ಟ್ರೀಯಎಸ್ ಬಿ ಐ ನೂತನ ಅಧ್ಯಕ್ಷರಾಗಿ ಚಲ್ಲಾ ಶ್ರೀನಿವಾಸಲು ಶೆಟ್ಟಿ ನೇಮಕ

ಎಸ್ ಬಿ ಐ ನೂತನ ಅಧ್ಯಕ್ಷರಾಗಿ ಚಲ್ಲಾ ಶ್ರೀನಿವಾಸಲು ಶೆಟ್ಟಿ ನೇಮಕ

ನವದೆಹಲಿ: ಚಲ್ಲಾ ಶ್ರೀನಿವಾಸಲು ಶೆಟ್ಟಿ ಅವರನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಧ್ಯಕ್ಷರನ್ನಾಗಿ ನೇಮಿಸಿ ಕೇಂದ್ರ ಸರ್ಕಾರ ಮಂಗಳವಾರ ಆದೇಶಿಸಿದೆ.

ಎಸ್ ಬಿ ಐ ನ ಹಾಲಿ ಅಧ್ಯಕ್ಷ ದಿನೇಶ್ ಕುಮಾರ್ ಖಾರಾ ಅವರ ಅವಧಿ ಇದೇ ಆಗಸ್ಟ್ 28ರಂದು ಕೊನೆಗೊಳ್ಳಲಿದೆ. ಶ್ರೀನಿವಾಸಲು ಶೆಟ್ಟಿ ಅವರ ಅಧಿಕಾರವಧಿ ಮೂರು ವರ್ಷ ಇರಲಿದೆ.

ಪ್ರಸ್ತುತ ಅವರು ಎಸ್ ಬಿ ಐ ನಲ್ಲಿ ಹಿರಿಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. 1988ರಲ್ಲಿ ಎಸ್‌ಬಿಐ ಸೇರಿದ್ದ ಚಲ್ಲಾ ಶ್ರೀನಿವಾಸಲು ಶೆಟ್ಟಿ ಅವರು ಬ್ಯಾಂಕ್ ಡಿಜಿಟಲೀಕರಣ ಕುರಿತಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ.

RELATED ARTICLES
- Advertisment -
Google search engine

Most Popular