Thursday, July 10, 2025
Google search engine

Homeಅಪರಾಧಚಾಮರಾಜನಗರ: ಪಾಠ ಕೇಳುತ್ತಲೇ ಹೃದಯಾಘಾತದಿಂದ 4ನೇ ತರಗತಿಯ ವಿದ್ಯಾರ್ಥಿ ಸಾವು

ಚಾಮರಾಜನಗರ: ಪಾಠ ಕೇಳುತ್ತಲೇ ಹೃದಯಾಘಾತದಿಂದ 4ನೇ ತರಗತಿಯ ವಿದ್ಯಾರ್ಥಿ ಸಾವು

ಚಾಮರಾಜನಗರ: ರಾಜ್ಯದಲ್ಲಿ ಕಳೆದ ಹಲವು ತಿಂಗಳಿನಿಂದ ಹೃದಯಾಘಾತದಿಂದ ಸರಣಿ ಸಾವುಗಳು ಸಂಭವಿಸುತ್ತಿದ್ದು, ಹಾಸನ ಜಿಲ್ಲೆಯ ಒಂದರಲ್ಲಿ ಇದುವರೆಗೂ ನಲವತ್ತಕ್ಕೂ ಹೆಚ್ಚು ಜನರು ಹೃದಯಘಾತಕ್ಕೆ ಬಲಿಯಾಗಿದ್ದಾರೆ. ಅದರಲ್ಲೂ ಯುವಜನತೆ ಹೆಚ್ಚು ಬಲಿಯಾಗಿದ್ದು ಇದೀಗ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ಪಾಠ ಕೇಳುತ್ತಲೇ ಕುಸಿದು ಬಿದ್ದು 4ನೇ ತರಗತಿ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ.

ಪಾಠ ಕೇಳುವಾಗಲೇ ಹೃದಯಾಘಾತದಿಂದ ವಿದ್ಯಾರ್ಥಿ ಸಾವನಪ್ಪಿದ್ದಾನೆ. ಕುರಬಗೇರಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಘಟನೆ ನಡೆದಿದ್ದು, ಚಾಮರಾಜನಗರ ಗುಂಡ್ಲುಪೇಟೆ ತಾಲೂಕಿನ ಕುರಬಗೇರಿ ಎಂಬಲ್ಲಿ ನಾಲ್ಕನೇ ತರಗತಿ ವಿದ್ಯಾರ್ಥಿ 10 ವರ್ಷದ ಮನೋಜ್ ಕುಮಾರ್ ಸಾವನಪ್ಪಿದ್ದಾನೆ. ಪಾಠ ಕೇಳುತ್ತಿದ್ದಾಗ ಕುಸಿದು ಬಿದ್ದು ಮನೋಜ್ ಸಾವನಪ್ಪಿದ್ದಾನೆ. ಈತ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ. ಹೃದಯದಲ್ಲಿ ರಂದ್ರ ಇತ್ತು ಎಂಬ ಮಾಹಿತಿ ತಿಳಿದು ಬಂದಿದೆ.

RELATED ARTICLES
- Advertisment -
Google search engine

Most Popular