Friday, April 4, 2025
Google search engine

Homeರಾಜ್ಯಚಾಮರಾಜನಗರ: ಸೆ.30 ರಂದು ನಿರ್ದೇಶಕ, ನಟ ಶಂಕರ್ ನಾಗ್ ನೆನಪು ಕಾರ್ಯಕ್ರಮ

ಚಾಮರಾಜನಗರ: ಸೆ.30 ರಂದು ನಿರ್ದೇಶಕ, ನಟ ಶಂಕರ್ ನಾಗ್ ನೆನಪು ಕಾರ್ಯಕ್ರಮ

ಚಾಮರಾಜನಗರ: ಶ್ರೀ ಶಂಕರನಾಗ್ ಅಭಿಮಾನಿಗಳ ಒಕ್ಕೂಟ  ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಜಿಲ್ಲಾ ಜಾನಪದ ಪರಿಷತ್ತು ಸಂಯುಕ್ತ ಆಶ್ರಯದಲ್ಲಿ ಸೆಪ್ಟೆಂಬರ್ 30ರ ಶನಿವಾರ ಸಂಜೆ 5  ಗಂಟೆಗೆ ಚಿತ್ರರಂಗದ ಹೆಮ್ಮೆಯ ಶ್ರೇಷ್ಠ ನಿರ್ದೇಶಕ, ನಟ ಶಂಕರ್ ನಾಗ್ ರವರ ನೆನಪು ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ  ಹಮ್ಮಿಕೊಳ್ಳಲಾಗಿದೆ. 

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ರಾಜಯೋಗನಿ ಬಿ ಕೆ ದಾನೇಶ್ವರಿ ರವರು ದಿವ್ಯ ಸಾನಿಧ್ಯ ವಹಿಸುವವರು. 

ಉದ್ಘಾಟನೆಯನ್ನು ಕೇಂದ್ರ ಪರಿಹಾರ ಸಮಿತಿಯ ನಿಕಟ ಪೂರ್ವ ಅಧ್ಯಕ್ಷರಾದ ಎಂ ರಾಮಚಂದ್ರ ರವರು ನೆರವೇರಿಸುವರು.

ಶಂಕರ್ ನಾಗ್  ನುಡಿ ನಮನವನ್ನು ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಸುರೇಶ್ ಎನ್ ಋಗ್ವೇದಿ ನೆರವೇರಿಸುವರು.

ಶಂಕರ್ ನಾಗ್ ಭಾವಚಿತ್ರಕ್ಕೆ ಉದ್ಯಮಿಗಳಾದ ಜಯಸಿಂಹ ರವರು ಪುಷ್ಪಾರ್ಚನೆ ನೆರವೇರಿಸುವರು. ರಾಮಸಮುದ್ರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕರಾದ ಶ್ರೀಕಾಂತ್ ರವರನ್ನು ಗೌರವಿಸಲಾಗುವುದು. ಅಧ್ಯಕ್ಷತೆಯನ್ನು ಶಂಕರ್ ನಾಗ್ ಅಭಿಮಾನಿಗಳ ಒಕ್ಕೂಟದ ಅಧ್ಯಕ್ಷ ಸುರೇಶ್ ನಾಗ್  ವಹಿಸುವರು.

ಮುಖ್ಯ ಅತಿಥಿಗಳಾಗಿ   ಎಸ್ ಪೀ ಬಾಲಸುಬ್ರಹ್ಮಣ್ಯಂ ಕಲಾ ವೇದಿಕೆಯ ಸುರೇಶ್ ಗೌಡ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶೈಲ ಕುಮಾರ್, ಬರಹಗಾರ ಲಕ್ಷ್ಮಿ ನರಸಿಂಹ ಉಪಸ್ಥಿತರಿರುವರು.

RELATED ARTICLES
- Advertisment -
Google search engine

Most Popular