ಅರಣ್ಯ ಸಂರಕ್ಷಣೆ, ಅರಣ್ಯ ವೃದ್ಧಿ ಹಾಗೂ ಪ್ರಾಣಿಗಳ ಸುರಕ್ಷತೆಯ ಬಗ್ಗೆ ಅಪಾರ ಕ್ರಮ ಕೈಗೊಂಡು ಶ್ರಮಿಸುತ್ತಿರುವ ಅರಣ್ಯ ಇಲಾಖೆಯ ಸರ್ವರಿಗೂ ವಿಶೇಷ ಅಭಿನಂದನೆಗಳನ್ನು ಸಲ್ಲಿಸುವುದು ನಾಗರಿಕರ ಜವಾಬ್ದಾರಿ -ಸುರೇಶ್ ಎನ್ ಋಗ್ವೇದಿ
ಚಾಮರಾಜನಗರ: ಗಡಿ ಜಿಲ್ಲೆ ಚಾಮರಾಜನಗರದ ಬಂಡೀಪುರ , ಬಿಳಿಗಿರಿ ರಂಗನ ಬೆಟ್ಟ ಹಾಗೂ ಮಹದೇಶ್ವರ ಬೆಟ್ಟದ ಸರಹದ್ದಿನ ಅರಣ್ಯ ಪ್ರದೇಶವು, ಕರ್ನಾಟಕದಲ್ಲಿ ಅತಿ ಹೆಚ್ಚು ಆನೆಗಳ ವಾಸ ಸ್ಥಾನವಾಗಿರುವುದು ಹೆಮ್ಮೆಯ ವಿಷಯವೆಂದು. ಕಾಡಿನ ಸಂರಕ್ಷಣೆ ಪ್ರಾಣಿಗಳ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಸಂರಕ್ಷಣೆ ಮಾಡುತ್ತಿರುವ ಸರ್ಕಾರ ಹಾಗೂ ಅರಣ್ಯ ಇಲಾಖೆಯ ಸರ್ವರಿಗೂ ಜೈಹಿಂದ್ ಪ್ರತಿಷ್ಠಾನ ದ ಅಧ್ಯಕ್ಷರು, ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತರಾದ ಸುರೇಶ್ ಎನ್ ಋಗ್ವೇದಿ ಅಭಿನಂದಿಸಿದ್ದಾರೆ.
ಗಡಿ ಜಿಲ್ಲೆ ಚಾಮರಾಜನಗರದ ಅರಣ್ಯ ಪ್ರದೇಶದಲ್ಲಿ ಈಗಾಗಲೇ ಹುಲಿಗಳು ಹಾಗೂ ಇತರ ಪ್ರಾಣಿಗಳ ಸಂಖ್ಯೆ ಹೆಚ್ಚಾಗಿರುವುದು ಸಂತಸದ ವಿಷಯ. ಇತ್ತೀಚಿನ ಗಣತಿಯಲ್ಲಿ ಆನೆಗಳ ಸಂಖ್ಯೆ ಅಪಾರವಾಗಿ ವೃದ್ಧಿ ಆಗಿರುವುದು ಕರ್ನಾಟಕದಲ್ಲಿ ಮೊದಲ ಸ್ಥಾನ ಪಡೆದಿರುವುದು ಎಲ್ಲಾ ಪ್ರಾಣಿ ಪ್ರಿಯರಿಗೆ ಹಾಗೂ ನಗರದ ಜನತೆಗೆ ಬಹಳ ಸಂತೋಷಕರವಾದ ವಿಚಾರವಾಗಿದೆ.
ಅರಣ್ಯ ಸಂರಕ್ಷಣೆ, ಅರಣ್ಯ ವೃದ್ಧಿ ಹಾಗೂ ಪ್ರಾಣಿಗಳ ಸುರಕ್ಷತೆಯ ಬಗ್ಗೆ ಅಪಾರ ಕ್ರಮ ಕೈಗೊಂಡು ಶ್ರಮಿಸುತ್ತಿರುವ ಅರಣ್ಯ ಇಲಾಖೆಯ ಸರ್ವರಿಗೂ ವಿಶೇಷ ಅಭಿನಂದನೆಗಳನ್ನು ಸಲ್ಲಿಸುವುದು ನಾಗರಿಕರ ಜವಾಬ್ದಾರಿ ಎಂದು ಋಗ್ವೇದಿ ತಿಳಿಸಿದ್ದಾರೆ.
