ಚಾಮರಾಜನಗರ: ಚಾರ್ಜ್ ಮಾಡಿ ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಅನ್ನು ಸ್ಟಾರ್ಟ್ ಮಾಡಿದ ವೇಳೆ ಧಗಧಗನೇ ಹೊತ್ತಿ ಉರಿದಿರುವ ಘಟನೆ ಚಾಮರಾಜನಗರ ತಾಲೂಕಿನ ಕೊತ್ತಲವಾಡಿ ಗ್ರಾಮದಲ್ಲಿ ನಡೆದಿದೆ. ಕೊತ್ತಲವಾಡಿ ಗ್ರಾಮದ ಬಸವರಾಜಪ್ಪ ಎಂಬುವವರಿಗೆ ಸೇರಿದ ಅಕಿನೋವ ಕಂಪನಿ ಬೈಕ್ ಇದಾಗಿದೆ. ಚಾರ್ಜ್ ಮಾಡಿ ಬೈಕನ್ನು ಸ್ಟಾರ್ಟ್ ಮಾಡಿದ ವೇಳೆ ಹೊಗೆ ಕಾಣಿಸಿಕೊಂಡಿದೆ. ಇದರಿಂದ ಆತಂಕಗೊಂಡು ಹಿಂದೆ ಸರಿದ ವೇಳೆ ದಿಢೀರನೇ ಬೆಂಕಿ ಜ್ವಾಲೆ ಕಾಣಿಸಿಕೊಂಡು ಹೊತ್ತಿ ಉರಿದಿದ್ದು, ಅದೃಷ್ಟವಶಾತ್ ಪಕ್ಕದಲ್ಲಿದ್ದ ಮತ್ತೊಂದು ಬೈಕ್‌ಗೆ ಹಾಗೂ ಮನೆಗೆ ಬೆಂಕಿ ವ್ಯಾಪಿಸಿಲ್ಲ. ಹಾಗೆಯೇ ಯಾವುದೇ ಜೀವಹಾನಿಯಾಗಿಲ್ಲ ಎಂದು ತಿಳಿದುಬಂದಿದೆ.ಕೂಡಲೇ ಕೆಲ ಯುವಕರು ಸೇರಿ ಉರಿಯುತ್ತಿದ್ದ ಬೈಕ್‌ಗೆ ನೀರು ಹಾಯಿಸಿ ಬೆಂಕಿ ನಂದಿಸಿದ್ದಾರೆ. ಈ ಘಟನೆ ಬೆಳ್ಳಂಬೆಳಗ್ಗೆ ನಡೆದಿದ್ದು, ಇದರಿಂದ ಇ-ಬೈಕ್ ಸವಾರ ಭಯಬೀತನಾಗಿದ್ದಾನೆ ಎಂದು ತಿಳಿದುಬಂದಿದೆ.