ಚಾಮರಾಜನಗರ: ಸಿಡಿಮದ್ದು ಸ್ಫೋಟಗೊಂಡು ಎರಡು ಹಸುಗಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಹನೂರು ತಾಲೂಕಿನ ಕೌದಳ್ಳಿ ಗ್ರಾಮದಲ್ಲಿ ನಡೆದಿದೆ. ಕೌದಳ್ಳಿ ಗ್ರಾಮದ ಅಕ್ಕಮ್ಮ ಎಂಬುವರಿಗೆ ಸೇರಿದ ಹಸುಗಳು ಮೇಯಲು ಹುಲ್ಲಿಗೆ ಬಾಯಿ ಹಾಕುತ್ತಿದ್ದಂತೆ ಕಿಡಿಗೇಡಿಗಳು ಇಟ್ಟಿದ್ದ ಸಿಡಿಮದ್ದು ಸ್ಫೋಟಗೊಂಡಿದೆ. ಇದರಿಂದ ಹಸುಗಳ ಮುಖ, ದೇಹದ ಭಾಗಕ್ಕೆ ಗಂಭೀರ ಗಾಯವಾಗಿದೆ.
ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ, ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ರಾಮಾಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಸಿಡಿಮದ್ದು ಇಟ್ಟ ಕಿಡಿಗೇಡಿಗಳ ವಿರುದ್ಧ ಹಸುಗಳ ಒಡತಿ ಅಕ್ಕಮ್ಮ ಹಿಡಿಶಾಪ ಹಾಕಿದ್ದಾರೆ.