Friday, April 18, 2025
Google search engine

Homeರಾಜ್ಯಸುದ್ದಿಜಾಲಚಾಮರಾಜನಗರ: ಶ್ರದ್ದಾ ಭಕ್ತಿಯಿಂದ ನಡೆದ ನವಕನ್ನಿಕಾ ಪೂಜೆ

ಚಾಮರಾಜನಗರ: ಶ್ರದ್ದಾ ಭಕ್ತಿಯಿಂದ ನಡೆದ ನವಕನ್ನಿಕಾ ಪೂಜೆ

ಚಾಮರಾಜನಗರ: ನವರಾತ್ರಿ ಹಬ್ಬದ ವಿಶೇಷ ನವಕನ್ನಿಕಾ ಪೂಜೆಯ ಬಹಳ ಶ್ರದ್ದಾ ಭಕ್ತಿಯಿಂದ ಬ್ರಾಹ್ಮಿ ಮಹಿಳಾ ಸಂಘದ ಆಶ್ರಯದಲ್ಲಿ ಋಗ್ವೇದಿ ಕುಟೀರದಲ್ಲಿ ನಡೆಯಿತು.

ಬ್ರಾಹ್ಮಿ ಮಹಿಳಾ ಸಂಘದ ಕಾರ್ಯದರ್ಶಿ ಶ್ರೀಮತಿ ರೇಖಾ ರಂಗನಾಥ್ ಮಾತನಾಡಿ ನವರಾತ್ರಿಯ ವಿಶೇಷವಾಗಿ ನವ ದುರ್ಗೆಯ ಸ್ವರೂಪದಲ್ಲಿ ಒಂಬತ್ತು ಮಕ್ಕಳಿಗೆ ಪಾದ ತೊಳದು ,ಫಲ ತಾಂಬೂಲಗಳನ್ನು ನೀಡಿ ಪೂಜಿಸಿ ಆಶೀರ್ವಾದ ಪಡೆಯುವ ಪದ್ಧತಿ ನವರಾತ್ರಿ ಸಂದರ್ಭದಲ್ಲಿ ನಡೆಯುತ್ತದೆ. ದೇವಿಯ ಸ್ವರೂಪದಲ್ಲಿ ಮಕ್ಕಳನ್ನು ಕೂರಿಸಿ ಪೂಜಿಸಿ, ಶಕ್ತಿ ಸ್ವರೂಪವನ್ನು ಸ್ವೀಕಾರ ಮಾಡುವ ವಿಶೇಷ ಕಾರ್ಯಕ್ರಮ ನವ ಕನ್ನಿಕಾ ಪೂಜೆಯಾಗಿದೆ ಎಂದು ತಿಳಿಸಿದರು.

ದಸರಾ ಹಾಗೂ ನವರಾತ್ರಿ ಹಬ್ಬದ ವಿಶೇಷ ಉಪನ್ಯಾಸ ನೀಡಿದ ಸಂಸ್ಕೃತಿ ಚಿಂತಕ ಸುರೇಶ್ ಎನ್ ಋಗ್ವೇದಿ ಮಾತನಾಡಿ ಹಲವು ದಶಕಗಳಿಂದ ಬ್ರಾಹ್ಮಿ ಮಹಿಳಾ ಸಂಘ ನವರಾತ್ರಿಯ ಸಂದರ್ಭದಲ್ಲಿ ನವಕನ್ನಿಕಾ ಪೂಜೆಯನ್ನು ನೆರವೇರಿಸಿಕೊಂಡು ಸಂಸ್ಕೃತಿಯನ್ನು ಉಳಿಸುವ ಕಾರ್ಯವನ್ನು ಮಾಡುತ್ತಿದೆ. ಮಕ್ಕಳಲ್ಲಿ ಆಧ್ಯಾತ್ಮಿಕ ಪದ್ಧತಿ ಹಾಗೂ ಅದರ ಮೌಲ್ಯಗಳನ್ನು ತಿಳಿಸುವ ಮೂಲಕ ಸದ್ಭಾವನೆಯನ್ನು ಬೆಳೆಸಬೇಕಾಗಿದೆ. ಆಧ್ಯಾತ್ಮಿಕತೆಯು ಜೀವನದ ಮೌಲ್ಯವನ್ನು ಹೆಚ್ಚಿಸಿ ಶ್ರೇಷ್ಠ ವ್ಯಕ್ತಿತ್ವವನ್ನು ರೂಪಿಸುತ್ತದೆ. ಧಾರ್ಮಿಕ ಪರಂಪರೆಯ ಎಲ್ಲಾ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ಮಾಡಬೇಕಾಗಿದೆ. ಮಕ್ಕಳಲ್ಲಿ ಭಾರತೀಯ ಸಂಸ್ಕೃತಿಯ ವಿಶೇಷ ಅರ್ಥವನ್ನು ತಿಳಿಸಿದಾಗ ಅದರ ಬಗ್ಗೆ ಗೌರವ ಉಂಟಾಗಿ ಅದರಂತೆ ನಡೆಯುವ ಭಾವನೆಯು ಮೂಡುತ್ತದೆ..ದಸರಾ ವೈಭವವನ್ನು ಪೋಷಕರು, ಸಂಘಟನೆಗಳು ತಿಳಿಸಬೇಕು. ಬ್ರಾಹ್ಮಿ ಮಹಿಳಾ ಸಂಘ ನಿರಂತರವಾಗಿ ಈ ಪದ್ಧತಿಯನ್ನು ಬೆಳೆಸಿಕೊಂಡು ಬರುತ್ತಿರುವುದು ಬಹಳ ಸಂತೋಷ ತಂದಿದೆ ಎಂದರು.

ಕಾರ್ಯಕ್ರಮದಲ್ಲಿ ನವಕನ್ನಿಕೆಯರಾಗಿ ಮಕ್ಕಳಾದ ಲಹರಿ, ವರ್ಷಿಣಿ, ಯೋಗಶ್ರೀ, ಸುಮನ ,ದೃತಿ ,ಪನ್ನಗ, ಬೃಹತಿ, ಪ್ರಾರ್ಥನಾ, ಧರಿತ್ರಿ, ಬ್ರಾಹ್ಮಿ ಮಹಿಳಾ ಸಂಘದ ವತ್ಸಲಾರಾಜಗೋಪಾಲ್, ಭಾನುಮತಿ, ರೇಖಾ, ವಿಜಯಲಕ್ಷ್ಮಿ, ಪಾರ್ವತಿ, ರಾಧಾ, ಋಗ್ವೇದಿ ಯೂತ್ ಕ್ಲಬ್ ಕುಸುಮ ಋಗ್ವೇದಿ, ಶರಣ್ಯ , ಶ್ರಾವ್ಯ, ಸುಪ್ರಿಯಾ, ಮೇಘನಾ, ಮುಂತಾದವರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular