ಚಾಮರಾಜನಗರ: ಜಿಲ್ಲಾ ಬ್ರಾಹ್ಮಣ ಸಂಘದ ವತಿಯಿಂದ ನಗರಸಭೆಗೆ ನೂತನವಾಗಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಶ್ರೀಮತಿ ಮಮತಾ ಬಾಲಸುಬ್ರಹ್ಮಣ್ಯಂ ರವರನ್ನು ಅವರ ಸ್ವಗೃಹದಲ್ಲಿ ಗೌರವಿಸಿ ಅಭಿನಂದಿಸಲಾಯಿತು.
ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಜಿ ಎಂ ಹೆಗಡೆ ಮಾತನಾಡಿ ಬ್ರಾಹ್ಮಣ ಸಮುದಾಯಕ್ಕೆ ನಗರ ಸಭೆಯ ಉಪಾಧ್ಯಕ್ಷ ಸ್ಥಾನ ನೀಡಿ ಸಮಾಜ ಸೇವೆ ಮಾಡಲು ಅವಕಾಶ ನೀಡಿರುವುದು ಹೆಮ್ಮೆಯ ಸಂಗತಿ. ಸರ್ವೇ ಜನ ಸುಖಿನೋ ಭವಂತು ಬ್ರಾಹ್ಮಣ ಸಮುದಾಯದ ದಿವ್ಯ ಶಕ್ತಿಯಾಗಿದೆ. ಸರ್ವರ ಒಳಿತಿಗಾಗಿ ಬ್ರಾಹ್ಮಣ ಸಮುದಾಯ ಕಾರ್ಯ ನಿರ್ವಹಿಸಲಿ .ಸಮಾಜ ಉನ್ನತವಾಗಿ ಬೆಳೆಯಲಿ ಎಂದು ಫಲ ತಾಂಬೂಲ ನೀಡಿ ಅಭಿನಂದಿಸಿದರು.
ಜಿಲ್ಲಾ ಬ್ರಾಹ್ಮಣ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಸುರೇಶ್ ಎನ್ ಋಗ್ವೇದಿ ಮಾತನಾಡಿ ಚಾಮರಾಜನಗರ ಸಭೆಗೆ 50 ವರ್ಷಗಳ ನಂತರ ಬ್ರಾಹ್ಮಣ ಸಮುದಾಯದ ವ್ಯಕ್ತಿಗೆ ಉಪಾಧ್ಯಕ್ಷ ಸ್ಥಾನ ಸಿಕ್ಕಿರುವುದು ಸಂತೋಷ ತಂದಿದೆ. ಪ್ರತಿಯೊಬ್ಬರು ಸಮಾಜಕ್ಕಾಗಿ ,ರಾಷ್ಟ್ರಕ್ಕಾಗಿ ಸೇವೆಯನ್ನು ಸಲ್ಲಿಸುವ ಮೂಲಕ ಅಧಿಕಾರವನ್ನು ಸದುಪಯೋಗಪಡಿಸಿಕೊಂಡು ಅಭಿವೃದ್ಧಿಯ ದಿಕ್ಕಿನಲ್ಲಿ ಸಾಗುವ ಮೂಲಕ ಸಮಾಜಕ್ಕೆ ಹಾಗೂ ನಗರಕ್ಕೆ ಕೀರ್ತಿಯನ್ನು ತರುವಂತಹ ಕಾರ್ಯವಾಗಲಿ. ಸರ್ವರನ್ನು ಪ್ರೀತಿಸೋಣ ,ಸಮಾಜವನ್ನು ಬೆಳೆಸೋಣ ಎಂದರು.
ಜಿಲ್ಲಾ ಬ್ರಾಹ್ಮಣ ಸಂಘದ ಖಜಾಂಚಿ ಬಾಲಸುಬ್ರಹ್ಮಣ್ಯಂ, ಸುರೇಶ್ ಕೇಶವಮೂರ್ತಿ , ಲಕ್ಷ್ಮಿ, ನರಸಿಂಹ, ತಾಪ್, ಸತೀಶ್, ಚೈತನ್ಯ ಹೆಗಡೆ , ರಾಧಾಕೃಷ್ಣ , ಬಿಳಿಗಿರಿ ಶ್ರೀನಿವಾಸ್, ಶ್ರೀಮತಿ ವತ್ಸಲಾರಾಜಗೋಪಾಲ್, ನಾಗಶ್ರೀ ಉಪಸ್ಥಿತರಿದ್ದರು.