ಚಾಮರಾಜನಗರ: ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಕಂಡ ಅಪರೂಪದ ವ್ಯಕ್ತಿ ,ರಾಜಕೀಯ ಮುತ್ಸದಿ,ಮಾಜಿ ರಾಜ್ಯಪಾಲರಾದ ಬಿ.ರಾಚಯ್ಯನವರ 25ನೇ ಪುಣ್ಯಸ್ಮರಣೆ ಹಾಗೂ ಅವರ ಕೊಡುಗೆಗಳ ಕುರಿತು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸುರೇಶ್ ಎನ್ ಋಗ್ವೇದಿ ಅವರ ಭಾವಚಿತ್ರಕ್ಕೆ ಪುಷ್ಪವನ್ನು ಅರ್ಪಿಸಿ ಮಾತನಾಡುತ್ತಾ ಚಾಮರಾಜನಗರ ಜಿಲ್ಲೆಯಲ್ಲಿ ನಿಸರ್ಗ ರಮಣೀಯವಾದ ಆಲೂರು ಗ್ರಾಮದಲ್ಲಿ ಜನಿಸಿದವರು. ರಾಜಯ್ಯನವರು ರಾಜ್ಯ ಕಂಡ ಶ್ರೇಷ್ಠ ರಾಜಕಾರಣಿ. ಮಾನವೀಯ ಮೌಲ್ಯವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಶ್ರೇಷ್ಠ ಮಾರ್ಗದಲ್ಲಿ ನಡೆದು ಸರಳತೆ ಮತ್ತು ಸಜ್ಜನ ವ್ಯಕ್ತಿತ್ತ್ವ ದಿಂದ ರಾಷ್ಟ್ರಕ್ಕೆ ಮಾದರಿಯಾಗಿದ್ದಾರೆ. ವಿವಿಧ ಇಲಾಖೆಗಳ ಸಚಿವರಾಗಿ, ಮಾಜಿ ರಾಜ್ಯಪಾಲರಾಗಿ ಚಾಮರಾಜನಗರ ಜಿಲ್ಲೆಯ ಸಾವಿರಾರು ಜನರಿಗೆ ಉದ್ಯೋಗದಾತರಾಗಿ ,ನೀರಾವರಿ ಶಿಕ್ಷಣ, ಕೃಷಿ ,ಕೈಗಾರಿಕೆ, ಅರಣ್ಯ, ವಸತಿ ಮುಂತಾದ ಕ್ಷೇತ್ರಗಳಲ್ಲಿ ಅಪಾರ ಕೊಡುಗೆಯನ್ನು ನೀಡಿದ ಮಹಾನ್ ವ್ಯಕ್ತಿ ಎಂದರು.
ತಮಿಳು ಸಂಘದ ಅಧ್ಯಕ್ಷರಾದ ಜಗದೀಶನ್ ಮಾತನಾಡಿ ರಾಚಯ್ಯನವರಿಗೂ ನಮಗೂ ಅಪಾರವಾದ ಬಾಂಧವ್ಯ. ಬಹುದೊಡ್ಡ ವ್ಯಕ್ತಿಯಾಗಿ ರಾಜಕೀಯದ ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದರು. ಅವರ ಸರಳತೆಯನ್ನು ನಾವು ಮರೆಯಲಾಗದು. ಜಿಲ್ಲೆ ಹಾಗೂ ರಾಜ್ಯದ ಬಗ್ಗೆ ಅಭಿವೃದ್ಧಿಯ ಚಿಂತನೆ ದೂರದೃಷ್ಟಿ ನೀರಾವರಿಗೆ ನೀಡಿದ ಕೊಡುಗೆ ಕರ್ನಾಟಕ ಎಂದು ಮರೆಯಲಾಗದು. ಈ ರಾಚಯ್ಯನವರು ಅರಣ್ಯದ ಅಭಿವೃದ್ಧಿ ಮತ್ತು ಶಿಕ್ಷಣಕ್ಕೆ ಅಪಾರ ಕೊಡುಗೆಯನ್ನು ವಿಶೇಷವಾಗಿ ನೀಡಿದ್ದಾರೆ . ಪ್ರಾಮಾಣಿಕತೆ ಮತ್ತು ಉತ್ತಮ ನಡವಳಿಕೆಯಿಂದ ರಾಜಕೀಯ ಕ್ಷೇತ್ರಕ್ಕೆ ಗೌರವ ತಂದು ಕೊಟ್ಟವರು. ಬಿ. ರಾಚಯ್ಯ ಅವರ ಪ್ರೇರಣೆಯಿಂದ ಹಲವಾರು ಯುವಕರು ರಾಜಕೀಯ ಕ್ಷೇತ್ರವನ್ನು ಪ್ರವೇಶಿಸಿದ್ದರು ಎಂದರು.
ಬರಹಗಾರ ಲಕ್ಷ್ಮಿ ನರಸಿಂಹ ಮಾತನಾಡಿ ಚಾಮರಾಜನಗರದ ಪಾಲಿಟೆಕ್ನಿಕ್ ಇವರ ಕೊಡುಗೆ. ಇಂದು ಚಾಮರಾಜನಗರ ಜಿಲ್ಲೆಯ ಸ್ವರೂಪವನ್ನು ಹೊಂದಲು ಎಲ್ಲಾ ಕ್ಷೇತ್ರಗಳಲ್ಲೂ ಅಭಿವೃದ್ಧಿಯನ್ನು ಸಾಧಿಸುವ ದಿಕ್ಕಿನಲ್ಲಿ ಅವರ ದೂರ ದೃಷ್ಟಿ ಬಹಳ ಪರಿಣಾಮಕಾರಿಯಾಗಿದೆ. ಇವರ ಸನ್ನಡತೆ, ಮಾರ್ಗದರ್ಶನ ಹಾಗೂ ಕಾಳಜಿಯಿಂದ ಬಡವರ ಹಾಗೂ ಸಮಾಜದಲ್ಲಿ ತೊಂದರೆಗೆ ಒಳಗಾದ ಸರ್ವರನ್ನು ಉನ್ನತಕ್ಕೆ ಕೊಂಡೊಯ್ಯಲು ಹಲವು ಸಹಕಾರ ಮತ್ತು ಸಹಾಯ ಹಸ್ತ ನೀಡಿದ ರಾಚಯ್ಯನವರನ್ನು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಸ್ಮರಿಸಿಕೊಳ್ಳುವ ಮೂಲಕ ಜಿಲ್ಲೆಯ ಗೌರವಕ್ಕೆ ಪಾತ್ರವಾಗಿದೆ ಎಂದರು.
ಕನ್ನಡ ಹೋರಾಟಗಾರ ಶ್ರೀನಿವಾಸ ಗೌಡ ಮಾತನಾಡಿ ಬಿ ರಾಜಯ್ಯನವರು ಪ್ರಾಮಾಣಿಕ ವ್ಯಕ್ತಿ. ಅವರ ಕುಟುಂಬವೇ ರಾಜಕಾರಣದಲ್ಲಿ ಮುಂದುವರೆದು ಜಿಲ್ಲೆಗೆ ತಮ್ಮದೇ ಆದ ಕೊಡುಗೆಯನ್ನು ಇಂದಿಗೂ ನೀಡುತ್ತಿದೆ. ಕನ್ನಡ ಸಂಘಟನೆಗಳು ಸೇವೆಯನ್ನು ಪರಿಗಣಿಸಿ ಬೆಳ್ಳಿ ಕಿರೀಟವನ್ನು ಸಮರ್ಪಿಸಿ ಗೌರವ ಸಲ್ಲಿಸಲಾಗಿತ್ತು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ. ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾದ ರವಿಚಂದ್ರ ಪ್ರಸಾದ್, ಪದ್ಮ ಪುರುಷೋತ್ತಮ್, ಸರಸ್ವತಿ ,ಬಿಕೆ ಆರಾಧ್ಯ ,ಶಿವಲಿಂಗ ಮೂರ್ತಿ ಪ್ರಕಾಶ್, ಕಿರಣ್ ,ಸೂರ್ಯ ಮಹದೇವಯ್ಯ ಮುಂತಾದವರು ಉಪಸ್ಥಿತರಿದ್ದರು