ಚಾಮರಾಜನಗರ: ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಚಾಮರಾಜನಗರ ಜಿಲ್ಲಾ ಘಟಕದ ಉದ್ಘಾಟನಾ ಸಮಾರಂಭ ಹಾಗೂ ರಾಷ್ಟ್ರ ವೀರ ನೇತಾಜಿ ಸುಭಾಷ್ ಚಂದ್ರ ಬೋಸ್ ರವರ ಜನ್ಮ ದಿನಾಚರಣೆ ಕಾರ್ಯಕ್ರಮ 24ರ ಶುಕ್ರವಾರ ಸಂಜೆ 6.30 ನಗರದ ಪ್ರಕಾಶ ಭವನದಲ್ಲಿ ನಡೆಯಲಿದೆ.
ಕಾರ್ಯಕ್ರಮದ ದಿವ್ಯ ಅಧ್ಯಕ್ಷತೆಯನ್ನು ಪ್ರಜಾಪಿತ ಬ್ರಹ್ಮಾ ಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಮುಖ್ಯ ಸಂಚಾಲಕರು, ರಾಜ ಯೋಗಿನಿ ಬಿಕೆ ದಾನೇಶ್ವರಿ ಅಕ್ಕರವರು ವಹಿಸುವರು.
ಉದ್ಘಾಟನೆಯನ್ನು ದಕ್ಷಿಣ ಪ್ರಾಂತ್ಯ ಸಂಪರ್ಕ ಪ್ರಮುಖ ಹಾಗೂ ಶ್ರೀಗಂಧ ವಲಯದ ಪ್ರಮುಖರಾದ ಡಾ. ವಿ ರಂಗನಾಥ್ ರವರು ಉದ್ಘಾಟಿಸುವರು.
ನೇತಾಜಿ ಸುಭಾಷ್ ಚಂದ್ರ ಬೋಸ್ ರವರ ಕುರಿತು ಭಾಷಣವನ್ನು ಜೈ ಹಿಂದ್ ಪ್ರತಿಷ್ಠಾನದ ಅಧ್ಯಕ್ಷರು ಹಾಗೂ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಎನ್ ಋಗ್ವೇದಿ ನೆರವೇರಿಸುವರು.
ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಸಹ ಕಾರ್ಯದರ್ಶಿಗಳಾದ ಬಿ ಕೆ ಆರಾಧ್ಯರವರು ಕೋರಿದ್ದಾರೆ.