Monday, December 2, 2024
Google search engine

Homeಅಡುಗೆಚಂಪಾಕಲಿ ರೆಸಿಪಿ ನಿಮಗಾಗಿ

ಚಂಪಾಕಲಿ ರೆಸಿಪಿ ನಿಮಗಾಗಿ

ಸಿಹಿ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ……. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಪಂಚಪ್ರಾಣ….. ಸಿಹಿ ತಿನ್ಬೇಕು ಅಂದ್ರೆ ಹಬ್ಬ ಹರಿದಿನಗಳೇ ಆಗಬೇಕು ಅಂತ ಏನಿಲ್ಲ….. ಮನಸ್ಸು ಬಂದಾಗೆಲ್ಲ ಮನೇಲಿ ಸಿಹಿ ಇದ್ರೆ ತಿನ್ನಬಹುದು ಅಲ್ವಾ! ಏನಂತೀರಿ? ಅದಕ್ಕಾಗಿ ಇವತ್ತಿನ ನಮ್ಮ ರೆಸಿಪಿಯಲ್ಲಿ ಸಿಹಿಯಾದ ಚಂಪಾಕಲಿ ಸ್ವೀಟ್ ಯಾವ ರೀತಿ ತಯಾರಿಸುವುದು ಎಂಬುದನ್ನು ತಿಳಿಸಿಕೊಡುತ್ತಿದ್ದೇವೆ. ಹಾಗಿದ್ರೆ ಇದನ್ನು ಯಾವ ರೀತಿ ಮಾಡುವುದು ಎಂಬುದನ್ನು ತಿಳಿದುಕೊಳ್ಳಿ.

ಬೇಕಾಗುವ ಸಾಮಗ್ರಿಗಳು:

ಹಾಲು – ಒಂದು ಲೀಟರ್
ನಿಂಬೆ ಹಣ್ಣು – ಅರ್ಧ
ಮೈದಾ ಹಿಟ್ಟು – 1 ಟೀ ಸ್ಪೂನ್
ಸಕ್ಕರೆ – 1 ಕಪ್
ನೀರು – ಒಂದೂವರೆ ಕಪ್
ಸ್ವೀಟ್ ಖೋವ – ಸ್ವಲ್ಪ
ಚರ‍್ರಿ ಹಣ್ಣು – ಸ್ವಲ್ಪ
ಹಾಲಿನ ಪುಡಿ – ಸ್ವಲ್ಪ
ಏಲಕ್ಕಿ ಪುಡಿ – ಸ್ವಲ್ಪ
ಕೇಸರಿ – ಸ್ವಲ್ಪ

ಮಾಡುವ ವಿಧಾನ:

  • ಒಂದು ಲೀಟರ್ ಹಾಲನ್ನು ಚೆನ್ನಾಗಿ ಕಾಯಿಸಿ. ಅದಕ್ಕೆ ಅರ್ಧ ನಿಂಬೆ ಹಣ್ಣಿನ ರಸವನ್ನು ಸ್ವಲ್ಪ ಸ್ವಲ್ಪ ಹಾಕುತ್ತ ಹಾಲಿಗೆ ಕೈಯಾಡಿಸಿ. ಹಾಲು ಒಡೆಯುವವರೆಗೆ ಈ ರೀತಿ ಮಾಡಿ. ಈಗ ನೀರನ್ನು ಬೇರ್ಪಡಿಸಿ. ಕಾಟನ್ ಬಟ್ಟೆಯಲ್ಲಿ ಸೋಸುವ ಮೂಲಕ ನೀರನ್ನು ಸಂಪೂರ್ಣವಾಗಿ ಬೇರ್ಪಡಿಸಿ.
  • ಈಗ ಒಂದು ಪಾತ್ರೆಯಲ್ಲಿ ನೀರನ್ನು ಬೇರ್ಪಿಸಿದ ಹಾಲಿನ ಪನೀರ್ ಮತ್ತು ಮೈದಾ ಹಿಟ್ಟನ್ನು ತೆಗೆದುಕೊಂಡು ಚೆನ್ನಾಗಿ ಮಿಶ್ರಣ ಮಾಡಿ. ನಂತರ ಸ್ವಲ್ಪ ನೀರು ಸೇರಿಸಿ ಮತ್ತು ಹಿಟ್ಟನ್ನು ಬೆರೆಸಿಕೊಳ್ಳಿ.
  • ನಂತರ ಈ ಹಿಟ್ಟನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಕೈಗಳ ಸಹಾಯದಿಂದ ಉಂಡೆ ಮಾಡಿಕೊಳ್ಳಿ.
  • ಈಗ ಒಂದು ಬಾಣಲೆಯಲ್ಲಿ 4 ಕಪ್ ನೀರು ಮತ್ತು ಸಕ್ಕರೆಯನ್ನು ಒಟ್ಟಿಗೆ ಹಾಕಿ ಮತ್ತು ಕಡಿಮೆ ಉರಿಯಲ್ಲಿ ಸುಮಾರು 10 ನಿಮಿಷಗಳ ಕಾಲ ಕುದಿಯಲು ಬಿಡಿ. ನಿಧಾನವಾಗಿ ಅದರ ಸಕ್ಕರೆ ಪಾಕ ಸಿದ್ಧವಾಗುತ್ತದೆ.
  • ಈಗ ನಿಧಾನವಾಗಿ ಉಂಡೆ ಮಾಡಿದ ಚಂಪಾಕಲಿಯನ್ನು ಸಿರಪ್‌ನಲ್ಲಿ ಹಾಕಿ ಮತ್ತು 12 ರಿಂದ 15 ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಬೇಯಲು ಬಿಡಿ.
  • ಇದರ ನಂತರ, ಬೇಯಿಸಿದ ಚಂಪಾಕಲಿಯನ್ನು ಅನ್ನು ಪ್ಲೇಟ್‌ನಲ್ಲಿ ತೆಗೆದುಕೊಂಡು ಅದನ್ನು ತಣ್ಣಗಾಗಲು ಬಿಡಿ.
  • ಬಳಿಕ ಹಿಸುಕಿದ ಖೋಯಾ, ಸಕ್ಕರೆ, ಹಾಲಿನ ಪುಡಿ, ಏಲಕ್ಕಿ ಪುಡಿ ಮತ್ತು ಕೇಸರಿ ಹಾಲನ್ನು ಒಟ್ಟಿಗೆ ಪ್ಯಾನ್‌ನಲ್ಲಿ ಹಾಕಿ ಮತ್ತು ಅವುಗಳನ್ನು ಚೆನ್ನಾಗಿ ಮಿಶ್ರಣ ಮಾಡಿ.
  • ಈಗ ತಣ್ಣಗಾದ ಚಂಪಾಕಲಿಯ ಮಧ್ಯದಲ್ಲಿ ಚಾಕುವಿನಿಂದ ಕಟ್ ಮಾಡಿ, ನಂತರ ರೆಡಿ ಮಾಡಿದ ಮಿಶ್ರಣವನ್ನು ತುಂಬಿಸಿ.
  • ಈಗ ತಯಾರಾದ ಎಲ್ಲಾ ಚಂಪಾಕಲಿಯನ್ನು ಚರ‍್ರಿಯಿಂದ ಅಲಂಕರಿಸಿ ಸವಿಯಲು ಕೊಡಿ.
RELATED ARTICLES
- Advertisment -
Google search engine

Most Popular