Monday, October 6, 2025
Google search engine

Homeಸ್ಥಳೀಯಮೈಸೂರಿನಲ್ಲಿ ಚಾಮುಂಡೇಶ್ವರಿ ರಥೋತ್ಸವದ ಸಂಭ್ರಮ: ನಾಡದೇವತೆಯ ತೇರು ಎಳೆದ ಒಡೆಯರ್

ಮೈಸೂರಿನಲ್ಲಿ ಚಾಮುಂಡೇಶ್ವರಿ ರಥೋತ್ಸವದ ಸಂಭ್ರಮ: ನಾಡದೇವತೆಯ ತೇರು ಎಳೆದ ಒಡೆಯರ್

ಮೈಸೂರು : ನಾಡಹಬ್ಬ ದಸರಾ ಬಳಿಕ ಮೈಸೂರಿನ ಚಾಮುಂಡೇಶ್ವರಿ ಬೆಟ್ಟದಲ್ಲಿ ರಥೋತ್ಸವ ಸಂಭ್ರಮ ಮನೆಮಾಡಿದೆ.

ಸೋಮವಾರ ಚಾಮುಂಡೇಶ್ವರಿ ದೇವಿಯ ಭವ್ಯ ರಥೋತ್ಸವವು ಸಹಸ್ರಾರು ಭಕ್ತರ ಹರ್ಷೋದ್ಘಾರಗಳ ನಡುವೆ ಅದ್ದೂರಿಯಾಗಿ ನೆರವೇರಿದೆ. ಬೆಳಿಗ್ಗೆ 9.32 ರಿಂದ 9.52ರೊಳಗಿನ ಶುಭ ಲಗ್ನದಲ್ಲಿ ರಥೋತ್ಸವ ಆರಂಭಗೊಳ್ಳಬೇಕಿತ್ತು.ಆದರೆ 10:05 ಕ್ಕೆ ಆರಂಭಗೊಂಡ ದೇವಿಯ ರಥೋತ್ಸವ ಅದ್ದೂರಿಯಾಗಿ ಜರುಗಿದೆ. ದೇವಸ್ಥಾನದ ಸುತ್ತ ಪ್ರದಕ್ಷಿಣೆ ಹಾಕಲಾಗಿದ್ದು, ಭಕ್ತರು ಭಕ್ತಿ ಭಾವ ಮೆರೆದಿದ್ದಾರೆ.

ಚಾಮುಂಡೇಶ್ವರಿ ಅಮ್ಮನವರ ರಥೋತ್ಸವಕ್ಕೆ ರಾಜವಂಶಸ್ಥರು ಚಾಲನೆ ನೀಡಿದರು.ಶಕ್ತಿದೇವತೆ ಚಾಮುಂಡಿ ತಾಯಿಯ ಉತ್ಸವ ಮೂರ್ತಿಯನ್ನು ರಥದಲ್ಲಿಟ್ಟು ಮೆರವಣಿಗೆ ಮಾಡಲಾಯಿತು.

ರಥೋತ್ಸವದ ಅಂಗವಾಗಿ ಇಂದು ಬೆಳಗಿನ ಜಾವದಿಂದಲೇ ದೇವಾಲಯದಲ್ಲಿ ಚಾಮುಂಡಿ ತಾಯಿಗೆ ವಿಶೇಷ ಪೂಜೆ ನೆರವೇರಿಸಲಾಯ್ತು.ದೇವಾಲಯದ ಗರ್ಭಗುಡಿಯಲ್ಲಿ ವಿರಾಜಮಾನವಾಗಿರುವ ಚಾಮುಂಡೇಶ್ವರಿಯ ಮೂಲ ವಿಗ್ರಹಕ್ಕೆ ಸಿಂಹವಾಹಿನಿಯ ಅಲಂಕಾರ ಮಾಡಿ ಪೂಜೆ ಸಲ್ಲಿಕೆ ಮಾಡಲಾಗಿತ್ತು.ವಜ್ರಾಭರಣಗಳ ಅಲಂಕಾರದಿಂದ ಕಂಗೊಳಿಸಿದ ಚಾಮುಂಡಿ ತಾಯಿಯ ಉತ್ಸವಮೂರ್ತಿಯನ್ನು ಜನರು ಕಣ್ತುಂಬಿಕೊಂಡರು.

ರಥೋತ್ಸವದಲ್ಲಿ ರಾಜಮಾತೆ ಪ್ರಮೋದಾದೇವಿ ಒಡೆಯರ್, ಮಹಾರಾಜ ಯದುವೀರ್ ಒಡೆಯರ್ ಯದುವೀರ್ ಪತ್ನಿ ತ್ರಿಷಿಕಾಕುಮಾರಿ ಭಾಗಿಯಾಗಿ ವಿಶೇಷ ಪೂಜೆ ಸಲ್ಲಿಸಿದರು. ಸರ್ವಾಲಂಕೃತ ರಥವನ್ನೆಳೆದ ಯದುವೀರ್ ಒಡೆಯರ್ ರಥೋತ್ಸವದ ಸಂಭ್ರಮದಲ್ಲಿ ಭಾಗಿಯಾದರು.ಇನ್ನು, ರಥದ ಮೇಲೆ ಹಣ್ಣುಜವನ ಎಸೆದು ಭಕ್ತರು ಪುನೀತರಾದರು. ರಥೋತ್ಸವ ಹಿನ್ನೆಲೆ ಬೆಟ್ಟದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜನೆ ಮಾಡಲಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಸಕಲ ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿತ್ತು.

RELATED ARTICLES
- Advertisment -
Google search engine

Most Popular