Saturday, April 19, 2025
Google search engine

Homeಸ್ಥಳೀಯಚಾಮುಂಡೇಶ್ವರಿ ತಾಯಿಗೆ ಹಾಗೂ ಉತ್ತನಹಳ್ಳಿ ತ್ರಿಪುರ ಸುಂದರಿ ದೇವಿಗೆ ಕೆ. ಮರೀಗೌಡ ವಿಶೇಷ ಪೂಜೆ

ಚಾಮುಂಡೇಶ್ವರಿ ತಾಯಿಗೆ ಹಾಗೂ ಉತ್ತನಹಳ್ಳಿ ತ್ರಿಪುರ ಸುಂದರಿ ದೇವಿಗೆ ಕೆ. ಮರೀಗೌಡ ವಿಶೇಷ ಪೂಜೆ


ಮೈಸೂರು : ಮೈಸೂರು ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಕೆ.ಮರೀಗೌಡ ಅವರು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾಗಿ ಮೂಡಾ ಆಯುಕ್ತ ದಿನೇಶ್‌ಕುಮಾರ್ ರವರಿಂದ ಅಧಿಕಾರ ಸ್ವೀಕರಿಸಿದರು.

ಕೆ. ಮರೀಗೌಡ ಅವರು ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ತಾಯಿಗೆ ಹಾಗೂ ಉತ್ತನಹಳ್ಳಿ ತ್ರಿಪುರ ಸುಂದರಿ ದೇವಿಗೆ ಪತ್ನಿ ಜಯಶ್ರೀಯೊಂದಿಗೆ ಪೂಜೆ ಸಲ್ಲಿಸಿ ನಂತರ ಮೂಡಾದಲ್ಲಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು ಮಾತನಾಡಿದ ಅವರು ನನ್ನ ನೆಚ್ಚಿನ ನಾಯಕರಾದ ಮುಖ್ಯಮಂತ್ರಿ ಸಿದ್ದರಾಮಯ್ಯರವರ ಆಶೀರ್ವಾದದಿಂದ ಉಪಮುಖ್ಯಮಂತ್ರಿ ಪಿ.ಕೆ. ಶಿವಕುಮಾರ್ ಮಂತ್ರಿಗಳಾದ ಡಾ. ಹೆಚ್.ಸಿ ಮಹಾದೇವಪ್ಪ, ಕೆ.ವೆಂಕಟೇಶ್ ಹಾಗೂ ಶಾಸಕರ ಸಹಕಾರದಿಂದ ನಾನು ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡಿದ್ದೇನೆ. ಕಳೆದ ೪೦ ವರ್ಷದ ರಾಜಕಾರಣದಲ್ಲಿ ಗ್ರಾ.ಪಂ ನಿಂದ ಬಂದು ತಾ.ಪಂ ಅಧ್ಯಕ್ಷನಾಗಿ, ಜಿ.ಪಂ ಅಧ್ಯಕ್ಷನಾಗಿ, ಉಪಾಧ್ಯಕ್ಷನಾಗಿ, ಕೆಪಿಸಿಸಿ ಸದಸ್ಯನಾಗಿ ಸಿದ್ದರಾಮಯ್ಯನವರು ಹಾಗೂ ಪಕ್ಷ ಹೇಳಿದಂತೆ ಇದುವರೆಗೆ ಕೆಲಸ ಮಾಡಿಕೊಂಡು ಬಂದಿದ್ದೇನೆ. ಮೈಸೂರು ನಗರದ ಅಭಿವೃದ್ಧಿ ಸಿದ್ದರಾಮಯ್ಯರವರ ಕೊಡುಗೆ ಅಪಾರವಾಗಿದೆ. ಅದರಂತೆ ನಾನು ಸಹ ಮೂಡಾ ಅಧ್ಯಕ್ಷನಾಗಿ ಬಡವರಿಗೆ ಬೀದಿ, ಬದಿ ವ್ಯಾಪಾರಿಗಳಿಗೆ, ಕೂಲಿಕಾರ್ಮಿಕರಿಗೆ, ಆಟೋಚಾಲಕರಿಗೆ, ಡ್ರೈವರ್‌ಗಳಿಗೆ ಕೈಗೆಟುಕುವ ದರದಲ್ಲಿ ಸಾಮಾಜಿಕ ನ್ಯಾಯದಡಿಯಲ್ಲಿ ಸುಮಾರು ೨೫ ಸಾವಿರ ಮನೆಗಳನ್ನು ನಿರ್ಮಾಣ ಮಾಡುವ ಗುರಿ ಇಟ್ಟುಕೊಂಡಿದ್ದೇನೆ.

ಈಗಾಗಲೇ ಮೂಡಾದಿಂದ ಜಾಗವನ್ನು ಗುರುತಿಸಿದ್ದಾರೆ. ಬಂಡಿಪಾಳ್ಯ ಎಪಿಎಂಸಿ ಬಳಿ ಹಾಗೂ ಮಣಿಪಾಲ್ ಆಸ್ಪತ್ರೆ ಬಳಿ ಮೇಲುಸೇತುವೆ ನಿರ್ಮಾಣ ಹಾಗೂ ಖಾಸಗಿ ಬಡಾವಣೆ ಹಾಗೂ ಮೂಡಾ ಬಡಾವಣೆಗಳಿಗೆ ಮೂಲಭೂತ ಸೌಲಭ್ಯ ಒದಗಿಸುವುದರೊಂದಿಗೆ, ಮೈಸೂರು ನಗರದ ಸಮಗ್ರ ಅಭಿವೃದ್ಧಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯರವರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳವುದಾಗಿ ತಿಳಿಸಿದರು.


ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಡಾ. ತಿಮ್ಮಯ್ಯ, ಜಿಲ್ಲಾಕಾಂಗ್ರೆಸ್ ಅಧ್ಯಕ್ಷ ಡಾ. ಬಿ.ಜೆ. ವಿಜಯ್‌ಕುಮಾರ್, ಅಹಿಂದಾ ಮುಖಂಡ ಮಡೆ ಶಿವರಾಂ, ಮಂಜುಳಾ ಮಾನಸ, ಜಿ.ಪಂ ಮಾಜಿ ಸದಸ್ಯರಾದ ಪಟೇಲ್ ಜವರೇಗೌಡ, ಮಾರ್ಚಳ್ಳಿ ಶಿವರಾಮ್, ಜವರಪ್ಪ, ಕೆ.ಬಿ. ಸ್ವಾಮಿ, ಕೂರ್ಗಳ್ಳಿ ಮಹದೇವ್, ಹೇಮಾವತಿ ಶಿವಕುಮಾರ್, ನಾರಾಯಣ, ಕಾಂಗ್ರೆಸ್ ಸೇವಾದಳ ಮಾಜಿ ಅಧ್ಯಕ್ಷ ಜಯರಾಮೇಗೌಡ, ನಗರ ಪಾಲಿಕೆ ಮಾಜಿ ಸದಸ್ಯ ಶಿವಣ್ಣ, ಬಿ.ಎಂ ನಟರಾಜ್, ಗೋಪಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಗುರುಸ್ವಾಮಿ, ಎಪಿಎಂಸಿ ಮಾಜಿ ಅಧ್ಯಕ್ಷರಾದ ಹೊಸಹುಂಡಿ ರಘು, ಬಂಡಿಪಾಳ್ಯ ಬಸವರಾಜು, ಮೈದನಹಳ್ಳಿ ಶಿವಣ್ಣ, ತಾ.ಪಂ ಮಾಜಿ ಸದಸ್ಯರಾದ ಮಾರ್ಬಳ್ಳಿ ಕುಮಾರ್, ಎಂ.ಟಿ ರವಿಕುಮಾರ್, ಸಿ.ಎಂ ಸಿದ್ದರಾಮೇಗೌಡ, ಜಿ.ಕೆ ಬಸವಣ್ಣ, ಗ್ರಾ.ಪಂ ಅಧ್ಯಕ್ಷೆ ನಾಗಮ್ಮ, ಗ್ರಾ.ಪಂ ಮಾಜಿ ಅಧ್ಯಕ್ಷರಾದ ಭರತ್ ಕಾಳಯ್ಯ, ಉದ್ಬೂರು ಕೃಷ್ಣ, ಶಿವಣ್ಣ, ನಾಗವಾಲ ನರೇಂದ್ರ, ಮಾಕಿ ಮಹದೇವ್, ದೊಡ್ಡಹುಂಡಿ ಸೋಮಣ್ಣ, ಹಿನಕಲ್ ಹೊನ್ನಪ್ಪ, ಲಕ್ಷ್ಮಣ್ ಪ್ರಭು, ಕಾಮನಕೊಪ್ಪಲು ಕರೀಗೌಡ, ಮುಖಂಡರಾದ ಹರೀಶ್ ಮೊಗಣ್ಣ, ಜೆ.ಜೆ ಆನಂದ, ಶಾಂತಯ್ಯ, ರವಿ, ಕೃಷ್ಣಕುಮಾರ್ ಸಾಗರ್, ಹಿನಕಲ್ ಪ್ರಕಾಶ್, ಸಣ್ಣಸ್ವಾಮಿ, ನಾಡನಗಹಳ್ಳಿ ರವಿ, ಶಿಂಶಾ ದಿನೇಶ್, ದನಗಳ್ಳಿ ಬಸವರಾಜ್, ಅಕ್ಕಿ ಶಿವಣ್ಣ, ಓಲೆ ಸಿದ್ದು ಹಾಜರಿದ್ದರು.

RELATED ARTICLES
- Advertisment -
Google search engine

Most Popular