Wednesday, April 30, 2025
Google search engine

Homeಸ್ಥಳೀಯಚಾಮುಂಡೇಶ್ವರಿ ವೈಭವ 2025 – ಲೋಗೋ ಹಾಗೂ ಸ್ಮರಣಿಕೆ ವಿನ್ಯಾಸ ಆಹ್ವಾನ

ಚಾಮುಂಡೇಶ್ವರಿ ವೈಭವ 2025 – ಲೋಗೋ ಹಾಗೂ ಸ್ಮರಣಿಕೆ ವಿನ್ಯಾಸ ಆಹ್ವಾನ

ಮೈಸೂರು: ಶ್ರಿ ಚಾಮುಂಡೇಶ್ವರಿ ದೇವಿಯವರ ಕ್ಷೇತ್ರ ವೈಭವ ಬಿಂಬಿಸುವ ಲೋಗೋವನ್ನು ರಚಿಸಲು ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ದಿ ಪ್ರಾಧಿಕಾರ ಅರ್ಹರಿಂದ ಅರ್ಜಿ ಅಹ್ವಾನಿಸಿದೆ.

ಶ್ರೀ ಚಾಮುಂಡೇಶ್ವರಿ ದೇವಿಯ ಕ್ಷೇತ್ರದ ಮಹತ್ವ ಸಾರುವ ಲೋಗೋ ರಚಿಸಬೇಕು. ಸ್ಪರ್ಧೆ ಒಂದರಲ್ಲಿ ಒಂದು ಆಕರ್ಷಕ ಲೋಗೋ+ಒಂದು ಸಾಲುನುಡಿ ಮತ್ತು ಸ್ಪರ್ಧೆ ಎರಡರಲ್ಲಿ ವಿಭಿನ್ನವಾದ ಸ್ಮರಣಿಕೆ.

ಪ್ರತಿ ಸ್ಪರ್ಧೆಗೆ ನಗದು ಬಹುಮಾನವಿದ್ದು ಪ್ರಥಮ 20 ಸಾವಿರ ರೂ. ದ್ವಿತೀಯ ಬಹುಮಾನ 10 ಸಾವಿರ ರೂ. ತೃತೀಯ ಬಹುಮಾನ 5 ಸಾವಿರ ರೂ. ಹಾಗೂ ಭಾಗವಹಿಸಿದ ಪ್ರತಿ ಸ್ಪರ್ಧಿಗಳಿಗೂ ಪ್ರಮಾಣ ಪತ್ರ ನೀಡಲಾಗುತ್ತದೆ. ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ 28-05-2025 ಆಗಿರುತ್ತದೆ. QR ಕೋರ್ಡ್ ಬಳಸಿ ಅರ್ಜಿ ಸಲ್ಲಿಸಬಹುದು.

RELATED ARTICLES
- Advertisment -
Google search engine

Most Popular