Saturday, August 30, 2025
Google search engine

Homeಸ್ಥಳೀಯಚಾಮುಂಡಿ ಬೆಟ್ಟ ಹಿಂದೂಗಳದ್ದೇ; ರಾಜಕಾರಣಿಗಳು ಏನು ಹೇಳಿದರೂ ಎಲ್ಲವೂ ಆಗಲ್ಲ: ಪ್ರಮೋದಾ ದೇವಿ ಒಡೆಯರ್

ಚಾಮುಂಡಿ ಬೆಟ್ಟ ಹಿಂದೂಗಳದ್ದೇ; ರಾಜಕಾರಣಿಗಳು ಏನು ಹೇಳಿದರೂ ಎಲ್ಲವೂ ಆಗಲ್ಲ: ಪ್ರಮೋದಾ ದೇವಿ ಒಡೆಯರ್

ಮೈಸೂರು: ಚಾಮುಂಡಿ ಬೆಟ್ಟ ಹಿಂದೂಗಳಿಗೆ ಸೇರಿದ್ದು ರಾಜಕಾರಣಿಗಳು ಏನು ಬೇಕಾದರೂ ಹೇಳಲಿ. ರಾಜಕಾರಣಿಗಳು ಹೇಳಿದ ತಕ್ಷಣ ಎಲ್ಲವೂ ಆಗಲ್ಲ ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್, ಚಾಮುಂಡಿ ಬೆಟ್ಟ ಹಿಂದೂಗಳಿಗೆ ಸೇರಿದ್ದು  ಚಾಮುಂಡೇಶ್ವರಿ  ಹಿಂದೂ ದೇವರು. ಯದುವಂಶಕ್ಕೆ ಚಾಮುಂಡಿ ದೇವಿ ಧಾರ್ಮಿಕ ತಾಯಿ ಇದ್ದಂತೆ.  ಹಿಂದೂ ಧಾರ್ಮಿಕ ವಿಧಿ ವಿಧಾನದಿಂದ ಪೂಜೆ ನಡೆಯುತ್ತದೆ ರಾಜಕಾರಣಿಗಳು ಏನು ಬೇಕಾದರೂ ಹೇಳಲಿ. ರಾಜಕಾರಣಿಗಳು ಹೇಳಿದ ತಕ್ಷಣ ಎಲ್ಲವೂ  ಆಗಲ್ಲ ದೇವಸ್ಥಾನ ವಿಚಾರದಲ್ಲಿ ಕೋರ್ಟ್ ನಲ್ಲಿ ಹೋರಾಟ ನಡೆಯುತ್ತಿದೆ ಪ್ರಾಧಿಕಾರ ರಚನೆ ಆದರೂ ಅದು ಅಧಿಕೃತ ಅಲ್ಲ. ಕೋರ್ಟ್ ಆದೇಶ ಬಂದ ಮೇಲೆ ಅಷ್ಟೆ ಎಲ್ಲವೂ ಸ್ಪಷ್ಟವಾಗುವುದು.  70 ವರ್ಷಗಳಿಂದ ಈ ಹೋರಾಟ ನ್ಯಾಯಾಲಯದಲ್ಲಿದೆ.   ದೇವಸ್ಥಾನವನ್ನ ರಾಜಕೀಯಕ್ಕೆ ಬಳಸಿಕೊಂಡಿದ್ದಕ್ಕೆ ಬೇಸರವಿದೆ ಎಂದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರ ಬದಲಾಗುತ್ತದೆ. ದಸರಾಗೆ ಕರೆದವರು ಕರೆಸಿಕೊಂಡವರಿಗಷ್ಟೆ ಗೊತ್ತು  ಸರ್ಕಾರ ದಸರಾ ನಮ್ಮ ಪರಂಪರೆಯ ಭಾಗ ಅಲ್ಲ.  ಪ್ರಜಾಪ್ರಭುತ್ವ ವ್ಯವಸ್ಥೆಯ ಸರ್ಕಾರಗಳು ಬದಲಾಗುತ್ತವೆ.  ದಸರ ಉದ್ಘಾಟಕರ ವಿಚಾರದಲ್ಲಿ ನನ್ನ ಅಭಿಪ್ರಾಯ ಇಲ್ಲ , ಸರ್ಕಾರ ಅವರಿಗೆ ಬೇಕಾದ ರೀತಿ ದಸರಾ ಮಾಡುತ್ತಾರೆ ಎಂದು ಪ್ರಮೋದಾ ದೇವಿ ಒಡೆಯರ್ ಹೇಳಿದರು.

RELATED ARTICLES
- Advertisment -
Google search engine

Most Popular