Monday, April 7, 2025
Google search engine

Homeರಾಜ್ಯಸುದ್ದಿಜಾಲಆತ್ಮಹತ್ಯೆ ಪ್ರಕರಣ:ನಾಯಕ ಸಮಾಜದ ಮುಖಂಡರೊoದಿಗೆ ಅನಿಲ್‌ಚಿಕ್ಕಮಾದು ಭೇಟಿ; ನೊಂದ ಕುಟುಂಬಕ್ಕೆ ಸಾಂತ್ವನ

ಆತ್ಮಹತ್ಯೆ ಪ್ರಕರಣ:ನಾಯಕ ಸಮಾಜದ ಮುಖಂಡರೊoದಿಗೆ ಅನಿಲ್‌ಚಿಕ್ಕಮಾದು ಭೇಟಿ; ನೊಂದ ಕುಟುಂಬಕ್ಕೆ ಸಾಂತ್ವನ

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ: ತಾಲೂಕಿನ ಚಂದಗಾಲು ಗ್ರಾಮದ ಮಹದೇವನಾಯಕನ ಕುಟುಂಬದ ಆತ್ಮಹತ್ಯೆ ಪ್ರಕರಣ ಬಹಳ ಅಮಾನವೀಯ ಘಟನೆಯಾಗಿದ್ದು, ಈ ವಿಚಾರದಲ್ಲಿ ಕ್ಷೇತ್ರದ ಶಾಸಕ ಡಿ.ರವಿಶಂಕರ್ ತುಂಬಾ ಮುತುವರ್ಜಿ ವಹಿಸಿ ನೊಂದ ಕುಟುಂಬದೊ0ದಿಗೆ ಇದ್ದಾರೆ ಎಂದು ಹೆಚ್.ಡಿ.ಕೋಟೆ ಕ್ಷೇತ್ರದ ಶಾಸಕ ಅನಿಲ್‌ಚಿಕ್ಕಮಾದು ಹೇಳಿದರು.

ಶನಿವಾರ ಸಂಜೆ ಶಾಸಕ ಡಿ.ರವಿಶಂಕರ್ ಸೇರಿದಂತೆ ನಾಯಕ ಸಮಾಜದ ಮುಖಂಡರೊoದಿಗೆ ಚಂದಗಾಲು ಗ್ರಾಮಕ್ಕೆ ಭೇಟಿ ನೀಡಿ ನೊಂದ ಕುಟುಂಬಕ್ಕೆ ಸಾಂತ್ವನ ಹೇಳಿದ ಅನಿಲ್‌ಚಿಕ್ಕಮಾದು ಆನಂತರ ಗ್ರಾಮದ ನಾಯಕರ ಸಮುದಾಯ ಭವನದಲ್ಲಿ ಸಮಾಜದ ಮುಖಂಡರಿಗೂ ಧೈರ್ಯ ತುಂಬಿದರು.

ಶಾಸಕ ಡಿ.ರವಿಶಂಕರ್ ಮತ್ತು ಅವರ ಕುಟುಂಬ ಹಿಂದುಳಿದ ಮಹದೇವನಾಯಕರಂತಹ ಬಡಜನತೆಯ ಪರವಾಗಿದ್ದು, ಅವರ ಸಮಸ್ಯೆಗೆ ಸಕಾಲದಲ್ಲಿ ಸ್ಪಂದಿಸುತ್ತಾರೆ. ಆತ್ಮಹತ್ಯೆ ಪ್ರಕರಣದಲ್ಲಿ ರಾಜಕೀಯ ಲಾಭ ಗಳಿಸಬಾರದೆಂಬ ಉದ್ಧೇಶದಿಂದ ನಾನು ಈವರೆಗೂ ಭೇಟಿ ನೀಡಿರಲಿಲ್ಲ ಎಂದು ಸ್ಪಷ್ಟಪಡಿಸಿದರು.

ಜೆಡಿಎಸ್ ಪಕ್ಷದವರು ಈ ಪ್ರಕರಣವನ್ನುಮುಂದಿಟ್ಟುಕೊAಡು ಸಾವಿನ ಮುಂದೆ ರಾಜಕೀಯ ಲಾಭ ಗಳಿಸಲು ಹೋರಾಟ ಮಾಡಿದ್ದು, ನಾಚಿಕಗೇಡಿನ ಸಂಗತಿ. ಈ ಸಂದರ್ಭದಲ್ಲಿ ನಾನು ವಿದೇಶ ಪ್ರವಾಸದಲ್ಲಿದ್ದ ಕಾರಣ ಚಂದಗಾಲು ಗ್ರಾಮಕ್ಕೆ ಭೇಟಿ ನೀಡಲು ಸಾಧ್ಯವಾಗಲಿಲ್ಲ. ಸಂಕಷ್ಟದಲ್ಲಿರುವ ಕುಟುಂಬಕ್ಕೆ ಸಾಂತ್ವಾನ ಹೇಳಿ ಪರಿಹಾರ ಕೊಡಿಸುವ ಕೆಲಸ ಮಾಡಬೇಕು. ಇಂತಹ ವಿಚಾರವನ್ನು ಯಾರೂ ಕೂಡ ರಾಜಕೀಯವಾಗಿ ಬಳಸಿಕೊಳ್ಳಬಾರದೆಂದು ಸಲಹೆ ನೀಡಿದರು.

ಶಾಸಕ ಡಿ.ರವಿಶಂಕರ್ ವೈಯಕ್ತಿಕವಾಗಿ ಆರ್ಥಿಕ ಸಹಾಯ ಮಾಡಿರುವುದರ ಜತೆಗೆ ಸರ್ಕಾರದಿಂದಲೂ ಬರುವಂತಹ ಸಹಾಯಧನವನ್ನು ಸಕಾಲದಲ್ಲಿ ಮಹದೇವನಾಯಕನ ಕುಟುಂಬಕ್ಕೆ ಕೊಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಗಳ ವಿಶೇಷ ಅನುದಾನ ಸೇರಿದಂತೆ ವಿವಿಧ ಇಲಾಖೆಗಳಿಂದ ಸುಮಾರು ೩೮ ಲಕ್ಷದಷ್ಟು ಪರಿಹಾರ ಧನ ಕೊಡಿಸುವ ಭರವಸೆ ನೀಡಿದರು.

ಪರಿಶಿಷ್ಟಜಾತಿ ಮತ್ತು ಪಂಗಡ ಸೇರಿದಂತೆ ಹಿಂದುಳಿದ ಸಮಾಜಗಳ ಹಿತ ಕಾಯುವುದರ ಜತೆಗೆ ಅವರ ಹಿತರಕ್ಷಣೆಗೆ ಬದ್ಧವಾಗಿರುವ ಶಾಸಕ ಡಿ.ರವಿಶಂಕರ್ ಅವರ ಬಗ್ಗೆ ಯಾರೂ ಅನುಮಾನಪಡಬಾರದು. ಇದರ ಜತೆಗೆ ವಿರೋಧ ಪಕ್ಷದವರು ಮಾಡುವ ಅಪಪ್ರಚಾರಕ್ಕೂ ಕಿವಿಗೊಡದೆ ಶಾಸಕರೊಂದಿಗೆ ಇರಬೇಕು ಎಂದು ಮನವಿ ಮಾಡಿದರು.

ಶಾಸಕ ಡಿ.ರವಿಶಂಕರ್ ನಮ್ಮ ಸಮಾಜದ ಸ್ವಾಮೀಜಿಯವರು, ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ, ಕೆ.ವೆಂಕಟೇಶ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಆಸ್ಪತ್ರೆಗೆ ಭೇಟಿ ಮಾಡಿಸಿ ಕುಟುಂಬದವರಿಗೆ ಉತ್ತಮ ಚಿಕಿತ್ಸೆ ಕೊಡಿಸಿದ್ದಾರೆ. ಇದಕ್ಕೆ ಸಮಾಜದ ಪರವಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಈ ಸಂದರ್ಭದಲ್ಲಿ ಗ್ರಾಮದ ಹಲವು ಮುಖಂಡರು ಹಾಜರಿದ್ದು ಶಾಸಕ ಡಿ.ರವಿಶಂಕರ್ ಈವರೆಗೂ ನಮ್ಮ ಪರವಾಗಿ ಇದ್ದಾರೆ. ಇದೇ ರೀತಿ ನಮ್ಮಂತ ನೊಂದ ಕುಟುಂಬದ ರಕ್ಷಣೆ ಮಾಡುವುದರ ಜತೆಗೆ ಅವರ ಪರವಾಗಿರಬೇಕೆಂದು ಕೋರಿದರು.

ಗ್ರಾಮ ಪಂಚಾಯ್ತಿ ಅಧ್ಯಕ್ಷ ನೇತ್ರಾವತಿಸತೀಶ್, ಪುರಸಭೆ ಸದಸ್ಯ ಶಿವಕುಮಾರ್, ತಾಲೂಕು ಕುರುಬರ ಸಂಘದ ಅಧ್ಯಕ್ಷ ಜೆ.ಶಿವಣ್ಣ, ರಾಜ್ಯ ಕಾಂಗ್ರೆಸ್ ಪರಿಶಿಷ್ಟ ಪಂಗಡ ವಿಭಾಗದ ಉಪಾಧ್ಯಕ್ಷ ಜೆ.ಶ್ರೀನಿವಾಸ್, ತಾಲೂಕು ಉಪ್ಪಾರ ಸಂಘದ ಅಧ್ಯಕ್ಷ ಮಹದೇವ, ಮುಖಂಡರಾದ ನಾಗರಾಜನಾಯಕ, ರಾಜನಾಯಕ, ಎಂ.ಆರ್.ಮಹದೇವನಾಯಕ, ಮೀನುಗಾರರ ಸಂಘದ ತಾಲೂಕು ಅಧ್ಯಕ್ಷ ಬೋರನಾಯಕ, ಸಾಲಿಗ್ರಾಮ ತಾಲೂಕು ಸಂಘದ ಅಧ್ಯಕ್ಷ ಉದೇಶನಾಯಕ, ಮಂಜನಾಯಕ, ಕೆ.ಹೆಚ್.ಬುಡೀಗೌಡ, ಡಿ.ವಿ.ಗುಡಿನಂದೀಶ್, ನಟರಾಜ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಎಸ್.ಮಹದೇವ, ಸಾಲಿಗ್ರಾಮ ತಾಲೂಕು ಎಸ್‌ಟಿ ಘಟಕದ ಅಧ್ಯಕ್ಷ ನರಸಿಂಹನಾಯಕ, ಉದಯಶಂಕರ್, ತಾಲೂಕು ವಕ್ತಾರ ಸೈಯದ್‌ಜಾಬೀರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

RELATED ARTICLES
- Advertisment -
Google search engine

Most Popular