ಗದಗ: ಚಂದ್ರಯಾನ 03 ರ ಯಶಸ್ವಿಗಾಗಿ ಶ್ರಮಿಸಿದ ಗದಗ ಜಿಲ್ಲೆಯ ಹೆಮ್ಮೆಯ ಪುತ್ರ ಇಸ್ರೋ ವಿಜ್ಞಾನಿ ಸುಧೀಂದ್ರ ಬಿಂದಗಿ ಅವರಿಗೆ ಪಗದಗ ನಗರದ ಕನಕದಾಸ ಶಿಕ್ಷಣ ಸಂಸ್ಥೆಯಿಂದ ಸನ್ಮಾನ ಮಾಡಿ ಆಡಳಿತ ಮಂಡಳಿ ಹಾಗೂ ವಿದ್ಯಾರ್ಥಿಗಳು ಅದ್ದೂರಿಯಾಗಿ ಸ್ವಾಗತ ಮಾಡಿಕೊಂಡರು.
ವಿಜ್ಞಾನಿ ಸುಧೀಂದ್ರ ಬಿಂದಗಿ ಅವರು ಗದಗದಲ್ಲಿ ಪ್ರಾಥಮಿಕ, ಮಾಧ್ಯಮಿಕ,ಪಿಯುಸಿಯವರಿಗೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಮುಗಿಸಿ ಇಸ್ರೋದಲ್ಲಿ ಸುಮಾರು 37 ವರ್ಷ ಸೇವೆ ಮಾಡಿ ಜುಲೈ 31ಕ್ಕೆ ನಿವೃತ್ತಿಯಾದರು. ಚಂದ್ರಯಾನ 03 ಯಲ್ಲಿ ಉಷ್ಣ ನಿಯಂತ್ರಣ ವಿಭಾಗದ ಸಮೂಹ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದು , ಚಂದ್ರಯಾನ 03 ರ ಮಾಹಿತಿ ನೀಡಿ ಮಾತನಾಡಿದ ವಿಜ್ಞಾನಿ ಚಂದ್ರಯಾನ 03ನ್ನು ನಾಲ್ಕು ವರ್ಷ ಹಗಲಿರುಳು ಎನ್ನದೆ ಕೆಲಸ ಮಾಡಿದ್ದೇವೆ. ಚಂದ್ರನ ಮೇಲಿನ ಖನಿಜ ಸಂಪತ್ತಿನ ಕುರಿತು ಮಾಹಿತಿ ಕಳಿಸಿದೆ, ಕ್ರೋಮಿಯಂ, ಟೈಟಾನಿಯಂ, ಆಕ್ಸಿಜನ್, ಅದರ ಜೊತೆಗೆ ಸಲ್ಫರ್ ಹೆಚ್ಚಿನ ಪ್ರಮಾಣದಲ್ಲಿದೆ. ಚಂದ್ರನ ಹುಟ್ಟು ಹಾಗೂ ಚಂದ್ರನ ವಿಕಸನದ ಕುರಿತು ಹೆಚ್ಚಿನ ಮಾಹಿತಿ ನೀಡುತ್ತೇ. ಈ ವಿಚಾರ ಕೇಳಿದಾಗ ನನಗೆ ಇನ್ನೂ ಹೆಮ್ಮೆ ಅನಿಸಿದೆ.
ಜಾಗತಿಕ ಮಟ್ಟದಲ್ಲಿ ನಮ್ಮ ಚಂದ್ರಯಾನ 03 ಹೆಚ್ಚಿನ ಅಂಶಗಳನ್ನು ತಿಳಿಸುತ್ತಿದೆ. ಇನ್ನೂ ಆರು ದಿನಗಳ ಕಾಲ ವಿಕ್ರಮ ಸಾಕಷ್ಟು ಮಾಹಿತಿ ನೀಡುತ್ತದೆ. ಚಂದ್ರಯಾನ ಹಾಗೇ ಸೂರ್ಯಯಾನ ಕೂಡಾ ಯಶಸ್ವಿಯಾಗುತ್ತೇ ಎಂದು ಇಸ್ರೋ ವಿಜ್ಞಾನಿ ಸುಧೀಂದ್ರ ಬಿಂದಗಿ ಮಾಹಿತಿ ನೀಡಿದರು.