ಚಾಮರಾಜನಗರ: ಚಂದ್ರಯಾನ 3 ವಿಕ್ರಂ ಚಂದ್ರನ ಪರಿಶೋಧನೆಯತ್ತ ಮಹತ್ವದ ದಾಪುಗಾಲು ಇರಿಸಿ ಯಶಸ್ವಿಯಾಗುತ್ತಿರುವ ಶುಭ ಸಂದರ್ಭದಲ್ಲಿ ಮಹತ್ವದ ವೈಜ್ಞಾನಿಕ ಸಾಧನೆ ಹಾಗೂ ಭಾರತದ ಶ್ರೇಷ್ಠತೆಯನ್ನು ವಿಶ್ವಮಾನ್ಯಗೊಳಿಸುತ್ತಿರುವ ಸರ್ವರಿಗೂ ಶುಭ ಕೋರಿ ಹಾಗೂ ಅಂತಿಮ ಕ್ಷಣದ ಯಶಸ್ವಿಗಾಗಿ ಆಗಸ್ಟ್ 23ರ ಸಂಜೆ 6 ಗಂಟೆಗೆ ಶ್ರೀ ಚಾಮರಾಜೇಶ್ವರ ದೇವಸ್ಥಾನದಲ್ಲಿ ಪ್ರಾರ್ಥಿಸುವ ಮೂಲಕ ಅಂತಿಮ ಯಶಸ್ಸಿಗೆ ಭಗವಂತನ ಕೃಪೆಯನ್ನು ಕೋರಲಾಗುವುದು ಎಂದು ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತ, ಜೈ ಹಿಂದ್ ಪ್ರತಿಷ್ಠಾನದ ಅಧ್ಯಕ್ಷ ಸುರೇಶ್ ಎನ್ ಋಗ್ವೇದಿ ತಿಳಿಸಿದ್ದಾರೆ.

ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ನಂತರ ನಡೆಯುತ್ತಿರುವ ವಿಶ್ವ ಮಾನ್ಯ ಸಾಧನೆಗಾಗಿ ಹಾಗೂ ಭಾರತದ ಮಹಾನ್ ಶಕ್ತಿಯ ಪ್ರದರ್ಶನದ ಅಂತಿಮ ಕ್ಷಣದ ಸಂತೋಷಕ್ಕಾಗಿ ಸರ್ವರೂ ಆರು ಗಂಟೆಗೆ ಆಗಮಿಸಬೇಕಾಗಿ ಋಗ್ವೇದಿರವರು ಮನವಿ ಮಾಡಿದ್ದಾರೆ.