Friday, April 11, 2025
Google search engine

Homeಸ್ಥಳೀಯಚನ್ನಮ್ಮನ ಸಾಹಸ ಅಮರ-ತ್ಯಾಗ ಬಲಿದಾನದಿಂದ ದಕ್ಕಿದ ಸ್ವಾತಂತ್ರ್ಯ: ಎಲ್ ನಾಗೇಂದ್ರ

ಚನ್ನಮ್ಮನ ಸಾಹಸ ಅಮರ-ತ್ಯಾಗ ಬಲಿದಾನದಿಂದ ದಕ್ಕಿದ ಸ್ವಾತಂತ್ರ್ಯ: ಎಲ್ ನಾಗೇಂದ್ರ

ವೀರರಾಣಿ ಕಿತ್ತೂರು ರಾಣಿ ಚೆನ್ನಮ್ಮನವರ ಜಯಂತಿ ಅಂಗವಾಗಿ ಶ್ರೀ ಭುವನೇಶ್ವರಿ ಸೇವಾ ಟ್ರಸ್ಟ್ ವತಿಯಿಂದ
ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರುವ ಸ್ವತಂತ್ರ್ಯ ಹೋರಾಟಗಾರರ ಉದ್ಯಾನವನದಲ್ಲಿ ವಿವಿಧ ಜಾತಿಯ ಗಿಡಗಳನ್ನು ನೆಟ್ಟು ಸಿಹಿ ವಿತರಿಸಿ ಜಯಂತಿ ಆಚರಿಸಲಾಯಿತು.

ನಂತರ ಮಾತನಾಡಿದ ಬಿಜೆಪಿ ನಗರ ಅಧ್ಯಕ್ಷ ಎಲ್ ನಾಗೇಂದ್ರ ಚನ್ನಮ್ಮ ಒಂದು ಜಾತಿಗೆ ಸೀಮಿತವಾಗದೆ ದೇಶದ ಪ್ರತಿಯೊಬ್ಬರು ಚನ್ನಮ್ಮನನ್ನು ಸ್ಮರಣೆ ಮಾಡಬೇಕು. ಹಿರಿಯ ಹೋರಾಟಗಾರರ ತ್ಯಾಗ ಬಲಿದಾನದಿಂದ ಸ್ವಾತಂತ್ರ್ಯ ಸಿಕ್ಕಿದೆ , ಸಮಾಜಕ್ಕೆ ಕೊಡುಗೆ ನೀಡಿದ ಮಹನೀಯರನ್ನು ಸ್ಮರಿಸಬೇಕು. ಚನ್ನಮ್ಮನ ಸಾಹಸ ಅಮರ ‘ದೇಶದ ಸ್ವಾತಂತ್ರ್ಯಕ್ಕಾಗಿ ಚನ್ನಮ್ಮ ಮಾಡಿದ ಹೋರಾಟ ಎಂದಿಗೂ ಮರೆಯಲು ಸಾಧ್ಯವಿಲ್ಲ. ಸಾವಿರಾರು ವೀರಯೋಧರೊಂದಿಗೆ ಬ್ರಿಟಿಷರನ್ನು ಹಿಮ್ಮೆಟ್ಟಿಸಿದ ಚನ್ನಮ್ಮನ ಸಾಹಸ ಎಂದೆಂದಿಗೂ ಅಮರ. ಮಕ್ಕಳಲ್ಲಿ ಚನ್ನಮ್ಮನ ಆದರ್ಶಗಳನ್ನು ಬೆಳೆಸಲು ಪಾಲಕರು ಮುಂದಾಗಬೇಕು’ ಎಂದರು.

ನಂತರ ಮಾತನಾಡಿದ ಹಿರಿಯ ಸಮಾಜ ಸೇವಕರಾದ ಕೆ ರಘುರಾಮ್ ವಾಜಪೇಯಿ ಕಿತ್ತೂರು ರಾಣಿ ಚೆನ್ನಮ್ಮ ಒಬ್ಬ ವೀರ ವನಿತೆ. ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿ ಇಂದು ಚರಿತ್ರೆಯ ಪುಟಗಳಲ್ಲಿ ಅಜಾರಾಮರವಾಗಿದ್ದಾರೆ. ಇವರ ಸಾಧನೆ ಸ್ಮರಣೀಯ ಎಂದರು.

ಬಿಜೆಪಿ ನಗರ ಅಧ್ಯಕ್ಷ ನಾಗೇಂದ್ರ, ಹಿರಿಯ ಸಮಾಜ ಸೇವಕರಾದ ಕೆ ರಘುರಾಮ್ ವಾಜಪೇಯಿ,
ಮಾಜಿನಗರ ಪಾಲಿಕಾ ಸದಸ್ಯರಾದ ಪ್ರಮೀಳಾ ಭರತ್, ಜಗದೀಶ್, ಶ್ರೀ ಭುವನೇಶ್ವರಿ ಸೇವಾ ಟ್ರಸ್ಟ್ ಅಧ್ಯಕ್ಷರಾದ ನಾಗಶ್ರೀ ಸುಚಿಂದ್ರ, ಅಪೂರ್ವ ಸುರೇಶ್, ಅಂಬಾಭವಾನಿ ಸಮಾಜ ಮಹಿಳಾ ಅಧ್ಯಕ್ಷರಾದ ಸವಿತಾ ಘಾಟ್ಕೆ, ಸಮಾಜ ಸೇವಕರಾದ ವಿದ್ಯಾ, ಮಂಜುನಾಥ್, ವಿಘ್ನೇಶ್ವರ ಭಟ್, ಸುದರ್ಶನ್, ಶ್ರೀನಿವಾಸ್, ವಿನೋದ್ ಅರಸು, ಚರಣ್, ರಂಗನಾಥ,ಗೋಪಿ ,ರಾಮು, ಪ್ರವೀಣ್, ಪಾಪಣ್ಣ, ಸುಕನ್ಯಾ, ಗೀತಾ, ಆದರ್ಶ್, ನಾಗೇಶ್,
ಹಾಗೂ ಇನ್ನಿತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular