ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಸಾಲಿಗ್ರಾಮ ತಾಲೂಕಿನ ಚನ್ನಂಗೆರೆ ಕೃಷಿ ಪತ್ತಿನ ಸಹಕಾರ ಸಂಘವು ರೈತರಿಗೆ ನೀಡಲಾಗುತ್ತಿರುವ ಕೆ.ಸಿ.ಸಿ.ಬೆಳೆ ಸಾಲವನ್ನು 6 ಕೋಟಿ ರೂಗಳಿಗೆ ಏರಿಸಲು ಸಂಘದ ಆಡಳಿತ ಮಂಡಳಿ ಯೋಜನೆ ರೂಪಿಸುತ್ತಿದೆ ಎಂದು ಸಂಘದ ಅಧ್ಯಕ್ಷ ಎರೆಮನುಗನಹಳ್ಳಿ ವೈ.ಎಸ್. ನಟರಾಜ್ ಹೇಳಿದರು.
ಬುಧವಾರ ನಡೆದ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು 2024-25 ನೇ ಸಾಲಿನಲ್ಲಿ ರೈತರಿಗೆ ಕೆಸಿಸಿ ಸಾಲವಾಗಿ 3.16 ಕೋಟಿ ರೂ, ಸೌದೆ ಸಾಲವಾಗಿ 6.40ಲಕ್ಷ, ದ್ವಿಚಕ್ರ ವಾಹನ ಸಾಲವಾಗಿ 1.90ಲಕ್ಷ ಸಾಲವನ್ನು ನೀಡಲಾಗಿದೆ.
ಸಂಘವು 203-24 ರಲ್ಲಿ ನೀಡಿರುವ ಸಾಲದಲ್ಲಿ ಶೇ.93 ರಷ್ಟು ಸಾಲವಸೂಲಾತಿ ಪ್ರಗತಿಯಲ್ಲಿದ್ದು ಈ ಮೂಲಕ ಷೇರುದಾರ ರೈತರ ಸಹಕಾರ ದಿಂದ ಸಂಘವು 3.65 ಲಕ್ಷ ರೂಗಳನ್ನು ಲಾಭಗಳಿಸಿದೆ ಸದ್ಯ ಇರುವ 60 ಲಕ್ಷರೂ ಷೇರು ಬಂಡವಾಳವನ್ನು 70 ಲಕ್ಷ ರೂಗಳಿಗೆ ಏರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ನಟರಾಜು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಬ್ಯಾಂಕಿನ ಪ್ರತಿನಿಧಿ ಮೂಡಲ ಕೊಪ್ಪಲು ಎನ್ .ದಿನೇಶ್ ಮಾತನಾಡಿ ಸಾಲವನ್ನು ಪಡೆದ ರೈತರು ಸಕಾಲದಲ್ಲಿ ಮರುಪಾವತಿಸಿ ಸಂಘದ ಅಭಿವೃದ್ದಿಗೆ ಸಹಕಾರ ನೀಡಿ ಎಂದರಲ್ಲದೆ ಜಿಲ್ಲಾ ಸಂಘದ ದಿಂದ ರೈತರಿಗೆ ಸಿಗುತ್ತಿರುವ ಸಾಲ ಮತ್ತು ಸೌಲಭ್ಯದ ಕುರಿತು ಮಾಹಿತಿ ನೀಡಿದರು.
ಸಂದೇ ಸಂದರ್ಭದಲ್ಲಿ ಜಿಲ್ಲಾ ಬ್ಯಾಂಕಿನ ಪ್ರತಿನಿಧಿ ಮೂಡಲ ಕೊಪ್ಪಲು ಎನ್ .ದಿನೇಶ್ ಮತ್ತು ಹೊಸೂರು ಶಾಖೆಯ ವ್ಯವಸ್ಥಾಪಕ ಆಯಿರಹಳ್ಳಿ ಪ್ರತಾಪ್ ಅವರನ್ನು ಅಭಿನಂಧಿಸಲಾಯಿತು
ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಶಂಕರನಾಯಕ, ಸಂಘದ ಸಿಇಓ ಮಂಜುನಾಥ್, ಸಿಬ್ಬಂದಿಗಳಾದ ರಾಜೇಶ್ ಧನಲಕ್ಷ್ಮಿ , ಡೈರಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ್, ಮಾಸ್ಟರ್ ಪ್ರಭು, ರೈತರಾದ ರಘುನಾಥ್, ಪ್ರಕಾಶ್, ಸಿ.ಎಂ.ರಾಜೇಗೌಡ,ನಾಗರಾಜು, ಎ.ಟಿ.ಮಂಜು, ಜಗಣ್ಣ, ನಾರಾಯಣ್ ಗೌಡ, ರಮೇಶ್, ಚನ್ನಕೇಶವ್, ಗಾರೆ ಮಲ್ಲೇಶ್, ಕೋಟೆಶಂಕರ್ ಸೇರಿದಂತೆ ಮತ್ತಿತರರು ಹಾಜರಿದ್ಧರು.