ರಾಮನಗರ: ಚನ್ನಪಟ್ಟಣ ಉಪಚುನಾವಣೆಗೆ JDS ಪಕ್ಷದ ಅಭ್ಯರ್ಥಿಯೇ ಸ್ಪರ್ಧಿಸುವುದು ಫಿಕ್ಸ್ ಎಂಬ ಮಾಹಿತಿ ಹೊರ ಬಿದ್ದಿತ್ತು. ಆದರೆ ಇದೀಗ ಬಿಜೆಪಿ MLC ಯೋಗೇಶ್ವರ್ ರಾಮನಗರದಲ್ಲಿ ಹೇಳಿಕೆ ನೀಡಿದ್ದು ಚುನಾವಣೆ ನಿಲ್ಲಲೇಬೇಕಿರುವ ಒತ್ತಡ ಕಾರ್ಯಕರ್ತರು ಹಾಕಿದ್ದಾರೆ. ಬಹುತೇಕ ಸ್ಪರ್ಧೆ ಮಾಡಲೇಬೇಕು ಅಂತ ಅನ್ಕೊಂಡಿದ್ದೀನಿ. ಚಿಹ್ನೆ ಯಾವುದಾದ್ರೂ ಇರಲಿ, ಸ್ಪರ್ಧೆ ಮಾಡುವೆ ಎಂದಿದ್ದಾರೆ.
ಚುನಾವಣೆಗೆ ಸ್ಪರ್ಧಿಸಲು ಕಾರ್ಯಕರ್ತರು ಒತ್ತಡ ಹಾಕಿದ್ದಾರೆ. ಬಹುತೇಕ ಸ್ಪರ್ಧೆ ಮಾಡಲೇಬೇಕು ಅಂತಾ ಅಂದುಕೊಂಡಿದ್ದೇನೆ. ಚಿಹ್ನೆ ಯಾವುದಾದ್ರೂ ಇರಲಿ, ಸ್ಪರ್ಧೆ ಮಾಡುವ ಇಂಗಿತ ಇದೆ. ಎಲ್ಲವನ್ನೂ ಪಕ್ಷದ ವರಿಷ್ಠರಿಗೆ ಬಿಟ್ಟಿದ್ದೇನೆ. ಪಕ್ಷದ ಮುಖಂಡರ ಆದೇಶದ ಮೇಲೆ ತೀರ್ಮಾನ ಮಾಡ್ತೇನೆ. ಸ್ಪರ್ಧೆ ಮಾಡಲೇಬೇಕು ಅಂತಾ ನಾನು ದಿಟ್ಟವಾಗಿ ಹೇಳುತ್ತಿದ್ದೆ. ಈಗಲೂ ಅದೇ ನಿಲುವಿಗೆ ನಾನು ಬದ್ಧನಾಗಿದ್ದೇನೆ. ಎರಡೂ ಪಕ್ಷಗಳ ಮುಖಂಡರು ಕುಳಿತು ತೀರ್ಮಾನ ಹೇಳಲಿ. ಉಪಚುನಾವಣೆಗಾಗಿ ನನ್ನ ನಿಲುವು ಯಾಕೆ ಬದಲಾಯಿಸಿಕೊಳ್ಳಲಿ. ನನ್ನ ಮೊದಲನೇ ಚುನಾವಣೆ ರಿಸಲ್ಟ್ ಬಂದು 26 ವರ್ಷ ಆಯ್ತು.
ನನಗೆ ಆದಂತಹ ಬೆಂಬಲ ಕ್ಷೇತ್ರದಲ್ಲಿದೆ. ಹೆಗಲಿಗೆ ಹೆಗಲು ಕೊಟ್ಟವರು ಚುನಾವಣೆಗೆ ಸ್ಪರ್ಧಿಸಿ ಅಂತಿದ್ದಾರೆ. ನಾನೂ ಕೂಡ ಚುನಾವಣೆಗಳಿಂದ ಬೇಸತ್ತಿದ್ದೇನೆ. ಎನ್ಡಿಎ ಮೈತ್ರಿಕೂಟಕ್ಕೆ ನನ್ನಿಂದ ತೊಂದರೆ ಆಗಬಾರದು. ಮೈತ್ರಿ ಮುರಿದ ಎಂಬ ಅಪಕೀರ್ತಿ ಬರಬಾರದು ಎಂದು ರಾಮನಗರದಲ್ಲಿ ಬಿಜೆಪಿ MLC ಯೋಗೇಶ್ವರ್ ತಿಳಿಸಿದ್ದಾರೆ.