Thursday, April 17, 2025
Google search engine

Homeರಾಜ್ಯಚನ್ನಪಟ್ಟಣ ಉಪಚುನಾವಣೆ ಕುಟುಂಬ ರಾಜಕಾರಣಕ್ಕೆ ಅಂತ್ಯ ಹಾಡಲಿದೆ: ಪೊನ್ನಣ್ಣ ಕಿಡಿ

ಚನ್ನಪಟ್ಟಣ ಉಪಚುನಾವಣೆ ಕುಟುಂಬ ರಾಜಕಾರಣಕ್ಕೆ ಅಂತ್ಯ ಹಾಡಲಿದೆ: ಪೊನ್ನಣ್ಣ ಕಿಡಿ

ಮಡಿಕೇರಿ: ಚನ್ನಪಟ್ಟಣ ಉಪ ಚುನಾವಣೆ ಕುಟುಂಬ ರಾಜಕಾರಣಕ್ಕೆ ಅಂತ್ಯ ಹಾಡಲಿದೆ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಶಾಸಕ ಎಎಸ್ ಪೊನ್ನಣ್ಣ ಜೆಡಿಎಸ್ ವಿರುದ್ಧ ಕಿಡಿ ಕಾರಿದ್ದಾರೆ.

ಈ ಬಗ್ಗೆ ಮಡಿಕೇರಿಯಲ್ಲಿ ಮಾತಾನಾಡಿದ ಅವರು, ಕುಟುಂಬ ರಾಜಕಾರಣ ಇದೆ ಅಲ್ಲ. ಸ್ವಾರ್ಥದ ಕಡೆಗೆ ಹೋದಾಗ ಅದು ಅಂತ್ಯವಾಗುತ್ತದೆ. ಇದರ ಅಂತ್ಯವನ್ನು ನಾವು ಚನ್ನಪಟ್ಟಣದಲ್ಲಿ ಕಾಣುತ್ತೇವೆ. ಯೋಗೇಶ್ವರ್ ಅವರು ತಳಮಟ್ಟದಿಂದ ಜನರೊಂದಿಗೆ ಸಂಪರ್ಕವನ್ನು ಇಟ್ಟುಕೊಂಡು ಅಲ್ಲಿನ ಜನರ ಬಾಂಧವ್ಯ ಇಟ್ಟುಕೊಂಡಿರುವ ರಾಜಕಾರಣಿ. ಅವರು ಅವಕಾಶವಾದಿ ಅಲ್ಲ. ಅವರು ಅವಕಾಶಕ್ಕಾಗಿ ರಾಜಕಾರಣ ಮಾಡುತ್ತಿರುವ ವ್ಯಕ್ತಿಯೂ ಅಲ್ಲ. ಯಾರು ಅವಕಾಶದ ರಾಜಕಾರಣ ಮಾಡುತ್ತಿದ್ದಾರೆ ಅಂತ ಅಲ್ಲಿನ ಜನರು ಗಮನಿಸುತ್ತಿದ್ದಾರೆ. ಈಗಾಗಲೇ ತಕ್ಕ ಪಾಠವನ್ನು ಕಲಿಸಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಎಲ್ಲೋ ಒಂದು ಕಡೆ ಅಧಿಕಾರದ ಚುಕ್ಕಾಣಿಯನ್ನು ಹಿಡಿಯಲು ಪ್ರಯತ್ನಗಳು ನಡೆದು ಕೆಲವು ಸಂದರ್ಭದಲ್ಲಿ ಯಶಸ್ಸು ಆದರೂ ಕೂಡ ಈ ಚುನಾವಣೆಯಲ್ಲಿ ಇದು ಮುಗಿಯುತ್ತದೆ. ಮೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಾರೆ. ಮತ್ತಷ್ಟು ಬಲವಾಗಿ ರಾಜ್ಯ ಸರ್ಕಾರ ಮುಂದಿನ ದಿನಗಳಲ್ಲಿ ತನ್ನ ಕೆಲಸವನ್ನು ಮಾಡುತ್ತದೆ. ಚನ್ನಪಟ್ಟಣದಲ್ಲಿ ಜೆಡಿಎಸ್ ಸೋಲು ಖಚಿತ. ನಿಖಿಲ್ ಕುಮಾರಸ್ವಾಮಿ ಒಬ್ಬ ಅಭ್ಯರ್ಥಿ ಅಷ್ಟೇ. ಜೆಡಿಎಸ್‌ನ ರಾಜಕಾರಣವನ್ನು ಅಲ್ಲಿನ ಜನರು ಗುರುತಿಸಿ ಅವರನ್ನು ಸೋಲಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

RELATED ARTICLES
- Advertisment -
Google search engine

Most Popular