ಮಂಡ್ಯ: ಚನ್ನಪಟ್ಟಣ ಜನ ದಡ್ಡರಲ್ಲ, ಯೋಗೇಶ್ವರ್ ಗೆಲುವು ನಿಶ್ಚಿತ ಎಂದು ಮಾಜಿ ಸಂಸದ ಶಿವರಾಮೇಗೌಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಂಡ್ಯದ ನಾಗಮಂಗಲದಲ್ಲಿ ಮಾತನಾಡಿದ ಅವರು, ಡಾ.ಮಂಜುನಾಥ್ ಅಭ್ಯರ್ಥಿ ಮಾಡಲು ಯೋಗೇಶ್ವರ್ ಶ್ರಮವಹಿಸಿದರು. ಆದರೆ, ಚನ್ನಪಟ್ಟಣದಲ್ಲಿ ಯೋಗೇಶ್ವರ್‌ರನ್ನೇ ಬಲಿ ಪಡೆದಿದ್ದಾರೆ. ತಮ್ಮ ಕುಟುಂಬದವರನ್ನ ಅಧಿಕಾರಕ್ಕೆ ತರಲು ದೇವೇಗೌಡರ ಕುಟುಂಬ ಒಂದೊಂದು ನರಬಲಿ ಪಡೆಯುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ನಿಖಿಲ್ ಅಲ್ಲ ಕುಮಾರಸ್ವಾಮಿ ನಿಂತರೂ ಏನು ಮಾಡಲಾಗಲ್ಲ. ಯೋಗೇಶ್ವರ್ ಆಚೆ ಕಳುಹಿಸಲು ವಿಜಯೇಂದ್ರ, ಯಡಿಯೂರಪ್ಪ ಕಾರಣ. ಬಿಜೆಪಿ ಪಕ್ಷದ ಗುಂಪುಗಾರಿಕೆಯಿಂದ ಯೋಗೇಶ್ವರ್ ಆಚೆ ಹೋದರು. ಪಾಪ ಈಗ ನಿಖಿಲ್‌ನನ್ನ ಚುನಾವಣಾ ಆಹುತಿ ಮಾಡ್ತಿದ್ದಾರೆ ಎಂದು ವ್ಯಂಗ್ಯ ವಾಡಿದ್ದಾರೆ.