ತುಮಕೂರು: ತಿಪಟೂರು ತಾಲೂಕಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳ ಪಾಡು ಕೇಳೋರಿಲ್ಲ. ಇತ್ತ ವೈದ್ಯರು ಇಲ್ಲ, ಅತ್ತ ಸಿಬ್ಬಂದಿಗಳು ಇಲ್ಲ. ಇದರಿಂದಾಗಿ ಗಾಯಾಳುಗಳು ಸ್ವಯಂ ಚಿಕಿತ್ಸೆ ಮಾಡಿಕೊಳ್ಳುತ್ತಿರುವುದು ಕಂಡುಬಂದಿದೆ.
ಕೆಲಸದ ಸಮಯದಲ್ಲಿ ಸಿಬ್ಬಂದಿ ಕಳ್ಳಾಟವಾಡುತ್ತಿದ್ದು, ಕಿರು ಶಸ್ತ್ರ ಚಿಕಿತ್ಸೆ ಕೊಠಡಿಯಲ್ಲಿ ಸಿಬ್ಬಂದಿಗಳೇ ಇಲ್ಲ. ಗಾಯಾಳುಗಳು. ತುರ್ತು ಚಿಕಿತ್ಸಾ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ಮಾಡಿಕೊಳ್ಳುತ್ತಿದ್ದಾರೆ.
ವೈದ್ಯರಿಗಾಗಿ ಓಪಿಡಿ ಚೀಟಿ ಪಡೆಯಲು ರೋಗಿಗಳು ಸಾಲುಗಟ್ಟಿ ನಿಂತಿದ್ದಾರೆ. ಈ ಸಂಬಂಧ ಸಾರ್ವಜನಿಕರೇ ಮಾಡಿದ ವೀಡಿಯೋ ವೈರಲ್ ಆಗಿದೆ.
ಆರೋಗ್ಯ ಸಚಿವರು ಇತ್ತ ಗಮನ ಹರಿಸಿ, ಆಸ್ಪತ್ರೆಯಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಿಕೊಡಲು ಕ್ರಮ ಕೈಗೊಳ್ಳಬೇಕಾಗಿದೆ.