ಬೆಂಗಳೂರು: ಚೆಕ್ ಬೌನ್ಸ್ ಪ್ರಕರಣದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ದಂಡ ವಿಧಿಸಿ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಆದೇಶಿಸಿದೆ.
ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಬರೋಬ್ಬರಿ 6 ಕೋಟಿ 96 ಲಕ್ಷ 70 ಸಾವಿರ ರೂ. ದಂಡವನ್ನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ವಿಧಿಸಿದೆ. ದಂಡ ಪಾವತಿಸದೇ ಇದ್ದರೇ 6 ತಿಂಗಳು ಸೆರೆವಾಸ ಅನುಭವಿಸುವಂತೆ ಆದೇಶಿಸಿದೆ.
ದಂಡದ ಹಣದಲ್ಲಿ 6,96,60,000 ಹಣವನ್ನು ದೂರುದಾರರಿಗೆ ಪರಿಹಾರವಾಗಿ ನೀಡಬೇಕು. ಅಲ್ಲದೇ 10 ಸಾವಿರ ರೂ. ಹಣವನ್ನು ಸರ್ಕಾರಕ್ಕೆ ದಂಡವನ್ನು ನೀಡುವಂತೆ ಆದೇಶಿಸಿದೆ.
ರಾಜೇಶ್ ಎಕ್ಸ್ ಪೋರ್ಟ್ ಸಂಸ್ಥೆ 6.60 ಕೋಟಿ ರೂ. ಚೆಕ್ ಬೌನ್ಸ್ ಕೇಸ್ ಹಾಕಿತ್ತು. ಸಚಿವ ಮಧು ಬಂಗಾರಪ್ಪ ಆಕಾಶ್ ಆಡಿಯೋ ಕಂಪನಿ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ಈ ನಡುವೆ ದೂರುದಾರ ಕಂಪನಿಗೆ ಬಾಕಿ ಪಾವತಿಗೆ ಮಧು ಬಂಗಾರಪ್ಪ 6.60 ಕೋಟಿ ರೂ.ನ ಚೆಕ್ ನೀಡಿದ್ದರು. ಆದರೆ 2011ರಲ್ಲಿ ಚೆಕ್ ಬೌನ್ಸ್ ಆಗಿತ್ತು. ಖಾತೆಯಲ್ಲಿ ಹಣವಿಲ್ಲದೇ ಚೆಕ್ ಬೌನ್ಸ್ ಆದ ಕಾರಣ ಚೆಕ್ ಬೌನ್ಸ್ ಪ್ರಕರಣ ದಾಖಲಾಗಿತ್ತು.