Sunday, April 20, 2025
Google search engine

Homeಸ್ಥಳೀಯಚೆಸ್, ಕೇರಂ ಸ್ಪರ್ಧೆ

ಚೆಸ್, ಕೇರಂ ಸ್ಪರ್ಧೆ


ಮೈಸೂರು: ಜಯಚಾಮರಾಜೇಂದ್ರ ವಿಜ್ಞಾನ ಮತ್ತು ತಾಂತ್ರಿಕ ವಿಶ್ವ ವಿದ್ಯಾನಿಲಯದ ವತಿಯಿಂದ ಜೂ.೨೨ರಂದು ಚೆಸ್ ಹಾಗೂ ಕೇರಂ ಸ್ಪರ್ಧೆಗಳನ್ನು ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದೆ ಎಂದು ಆಯೋಜಕ ವಿದ್ಯಾರ್ಥಿ ಶಶಿಕುಮಾರ್ ತಿಳಿಸಿದರು.
ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಸ್ಪರ್ಧೆಗಳಲ್ಲಿ ರಾಜ್ಯದಾದ್ಯಂತದಿಂದ ವಿದ್ಯಾರ್ಥಿಗಳು ಪಾಲ್ಗೊಳ್ಳಬಹುದಾಗಿದೆ. ವಿಜೇತರಿಗೆ ಆಕರ್ಷಕ ಬಹುಮಾನಗಳಿವೆ. ಎರಡೂ ರೀತಿಯ ಸ್ಪರ್ಧೆಗಳು ಕಾಲೇಜು ಆವರಣದಲ್ಲಿನ ಪ್ರತ್ಯೇಕ ಸ್ಥಳಗಳಲ್ಲಿ ನಡೆಯಲಿವೆ. ಪಾಲ್ಗೊಳ್ಳಲಿಚ್ಛಿಸುವವರು ಹೆಚ್ಚಿನ ಮಾಹಿತಿಗೆ ದೂ. ೮೦೮೮೫ ೨೨೩೪೬, ೯೩೫೩೯ ೪೫೪೮೬ನ್ನು ಸಂಪರ್ಕಿಸಬಹುದು ಎಂದರು.
ಗೋಷ್ಠಿಯಲ್ಲಿ ವಿದ್ಯಾರ್ಥಿ ಆಯೋಜಕರಾದ ಹಿಶಾಮ್, ದರ್ಶನ್, ಕೃಪಾಕರ್ ಇದ್ದರು.

RELATED ARTICLES
- Advertisment -
Google search engine

Most Popular