ಮೈಸೂರು: ನಗರದ ಕುವೆಂಪು ನಗರದಲ್ಲಿರುವ ಕರುಣೆ ಸೇವಾ ಟ್ರಸ್ಟ್ ಹಾಗೂ ಅಥರ್ವ ಲೈಫ್ ಸ್ಕಿಲ್ಸ್ ಫೌಂಡೇಶನ್ ವತಿಯಿಂದ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಹುಟ್ಟುಹಬ್ಬದ ಅಂಗವಾಗಿ ಮಕ್ಕಳಿಗೆ ನಡೆಸಿದ ಚದುರಂಗ ಪಂದ್ಯಾವಳಿಯಲ್ಲಿ 30ಕ್ಕೂ ಹೆಚ್ಚು ಮಕ್ಕಳು ಸ್ಪರ್ಧಿಸಿದ್ದು ಸ್ಪರ್ಧೆಯಲ್ಲಿ ವಿಜೇತರಾದ ಪ್ರಥಮ ಸ್ಥಾನ ಯತ್ವಿಕ್
ದ್ವಿತೀಯ ಸ್ಥಾನ ಫೋರ್ಜಿತ್, ತೃತೀಯ ಸ್ಥಾನ ಸಾನ್ವಿ ಮತ್ತು ವಿಪತ್ರ ರವರಿಗೆ ಬಹುಮಾನ ವಿತರಿಸಲಾಯಿತು.
ನಂತರ ಸ್ಪರ್ಧಿಸಿದ ಎಲ್ಲಾ ಸ್ಪರ್ಧಾಳುಗಳಿಗೆ ನೆನಪಿನ ಪತ್ರ ನೀಡಲಾಯಿತು. ನಂತರ ಮಾತನಾಡಿದ ಕರುಣೆ ಸೇವಾ ಟ್ರಸ್ಟ್ ಅಧ್ಯಕ್ಷರಾದ ರುಕ್ಮಿಣಿ ಚಿತ್ರನಟ ದರ್ಶನ ಅಭಿಮಾನಿಗಳು ಕೇವಲ ಮನರಂಜನೆಗೆ ಸೀಮಿತವಾಗದ ಸಾಮಾಜಿಕ ಕೆಲಸಗಳ ಮೂಲಕ ಸಹಾಯ ನೀಡುತ್ತಿರುವ ಶ್ಲಾಘನೀಯ ಕೆಲಸ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕರುಣೆ ಟ್ರಸ್ಟ್ ಅಧ್ಯಕ್ಷರಾದ ರುಕ್ಮಿಣಿ, ಅಥರ್ವ ಲೈಫ್ ಸ್ಕಿಲ್ಸ್ ಫೌಂಡೇಶನ್ ಅಧ್ಯಕ್ಷರಾದ ಪುಷ್ಪಲತಾ, ಶ್ವೇತಾ, ಮಮತಾ, ನಂದನ್ ಕುಮಾರ್, ಹಾಗೂ ಇನ್ನಿತರರು ಹಾಜರಿದ್ದರು.