Friday, April 4, 2025
Google search engine

Homeರಾಜ್ಯಸುದ್ದಿಜಾಲಚಿಬುಕಹಳ್ಳಿ ಕೃಷಿಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಸಿ.ಎಂ.ಶಿವಕುಮಾರ್ , ಉಪಾಧ್ಯಕ್ಷರಾಗಿ ನಂಜೇಗೌಡ ಆಯ್ಕೆ

ಚಿಬುಕಹಳ್ಳಿ ಕೃಷಿಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಸಿ.ಎಂ.ಶಿವಕುಮಾರ್ , ಉಪಾಧ್ಯಕ್ಷರಾಗಿ ನಂಜೇಗೌಡ ಆಯ್ಕೆ

ವರದಿ:ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ : ತೀವ್ರ ಕೂತುಹಲ ಕೆರಳಿಸಿದ್ದ ಸಾಲಿಗ್ರಾಮ ತಾಲೂಕಿನ ಚಿಬುಕಹಳ್ಳಿ ಕೃಷಿಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಕಾಂಗ್ರೇಸ್ ಬೆಂಬಲಿತ ಸಿ.ಎಂ.ಶಿವಕುಮಾರ್ ಮತ್ತು ಉಪಾಧ್ಯಕ್ಷರಾಗಿ ನಂಜೇಗೌಡ ಅವಿರೋಧವಾಗಿ ಆಯ್ಕೆಯಾದರು.

ಸಂಘದ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸಿ.ಎಂ.ಶಿವಕುಮಾರ್ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನಂಜೇಗೌಡ ಅವರನ್ನು ಹೊರತು ಪಡಿಸಿ ಬೇರೆಯಾರು ನಾಮಪತ್ರ ಸಲ್ಲಿಸ ಕಾರಣ ಅವಿರೋಧ ಆಯ್ಕೆಯನ್ನು ಕೆ.ಆರ್.ನಗರ ಸಹಕಾರ ಇಲಾಖೆಯ ಸಿಡಿಓ ರವಿ ಅವರು ಪ್ರಕಟಿಸಿದರು.

ಚುನಾವಣಾ ಸಭೆಯಲ್ಲಿ ಜಿಲ್ಲಾ ಬ್ಯಾಂಕಿನ ಮೇಲ್ವಿಚಾರಕ ಮೂಡಲಕೊಪ್ಪಲು ದಿನೇಶ್,
ಸಂಘದ ನಿರ್ದೇಶಕರಾದ ಎಚ್.ಎಸ್.ವೆಂಕಟೇಶ್, ಬಿ.ಜಿ.ಪ್ರಶನ್ನ, ಶಿವರಾಜು, ರಮೇಶ್, ಗಣೇಶ್ ,ಮಂಜುಳಾ, ವೀಣಾ, ಎಚ್.ಬಿ.ಸಚಿನ್, ಸ್ವಾಮ್ಯಯ್ಯ, ನಿಂಗರಾಜು, ಸಂಘದ ಕಾರ್ಯದರ್ಶಿ ಕೃಷ್ಣೇಗೌಡ ಇದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ನೂತನ ಅಧ್ಯಕ್ಷ ಸಿ.ಎಂ.ಶಿವಕುಮಾರ್ ಶಾಸಕ ಡಿ.ರವಿಶಂಕರ್ ಮತ್ತು ಕಾಂಗ್ರೇಸ್ ಮುಖಂಡ ದೊಡ್ಡಸ್ವಾಮೇಗೌಡ ಅವರ ಮಾರ್ಗದರ್ಶನದಲ್ಲಿ ಸಂಘದ ನೂತನ ಕಟ್ಟಣ ನಿರ್ಮಾಣ ಮಾಡುವುದರ ಜತಗೆ ಸಕಾಲದಲ್ಲಿ ರೈತರಿಗೆ ಬೆಳೆ ಸೇರಿದಂತೆ ಇನ್ನಿತರ ಸಾಲ ವಿತರಣೆಯ ಜತಗೆ
ಹೊಸದಾಗಿ ರೈತರಿಗೆ ರಿಯಾಯಿತಿ ದರದಲ್ಲಿ ರಸಗೊಬ್ಬರ ಮತ್ತು ಬಿತ್ತನೆ ಬೀಜಗಳನ್ನು ವಿತರಣೆಗೆ ಅದ್ಯತೆ ನೀಡಲಾಗುವುದು ಎಂದರು.

ನಂತರ ಅಧ್ಯಕ್ಷ -ಉಪಾಧ್ಯಕ್ಷರ ಆಯ್ಕೆ ಪ್ರಕಟಿಸುತ್ತಿದ್ದಂತೆಯೇ ತಾ.ಪಂ.ಮಾಜಿ ಸದಸ್ಯ ಚಿಕ್ಕೇಗೌಡ,ಹೊಸಕೋಟೆ
ಗ್ರಾ.ಪಂ‌.ಮಾಜಿ ಅಧ್ಯಕ್ಷರಾದ ಸಿ.ಕೆ.ಬಸವರಾಜು, ನಿಂಗರಾಜು, ಉಪಾಧ್ಯಕ್ಷೆ ಸುಧಾಶಂಕರಪ್ಪ, ಸದಸ್ಯೆ ರತ್ನಜಯಣ್ಣ,ಮುಖಂಡರಾದ ಹೊಸಕೋಟೆ ಚೆಲುವರಾಜ್, ಆರ್.ಮಹೇಶ್,ಸಿ.ಟಿ.ಶಿವರಾಜು, ಸೋಮಶೇಖರ್,ಸಿ.ಟಿರಾಮು, ಸಿ.ಕೆ.ಮಹೇಶ್,ಮೋಹನ್ ಕುಮಾರ್, ಸಿ.ಎಸ್.ಶಿವರಾಜ್,
ಮಂಜೇಶ್, ಹೊಸಕೋಟೆಕೊಪ್ಪಲುಜಗದೀಶ್, ಮಹದೇವ್, ಮಾಜಿ ಅಧ್ಯಕ್ಷರಾದ ಸಿ.ಕೆ.ಜವರಯ್ಯ,ರಾಮೆಗೌಡ,ನಿರ್ದೇಶಕ ಸೋಮಶೇಖರ್, ಕೊಪ್ಪಲು ಪಾಟೀಲ್, ಪುನೀತ್, ಶ್ರೀನಿವಾಸ್ , ಪ್ರಭಾಕರ್ ,ಯಜಮಾನ್ ಬೀರೇಗೌಡ ಸೇರಿದಂತೆ ಮತ್ತಿತರು ಅಭಿನಂಧಿಸಿದರು.

RELATED ARTICLES
- Advertisment -
Google search engine

Most Popular