ಹೊಸೂರು: ಸಾಲಿಗ್ರಾಮ ತಾಲೂಕಿನ ಚಿಬುಕಹಳ್ಳಿ ಕೃಷಿಪತ್ತಿನ ಸಹಕಾರ ಸಂಘವು 2022-23ನೇ ಸಾಲಿನಲ್ಲಿ 3.60 ಲಕ್ಷ ರೂ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಸಿ.ಎಂ.ಗಣೇಶ್ ಹೇಳಿದರು.
ಸಂಘದ 2022-23ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಮಹಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು
ವ್ಯಾಪಾರ ಲಾಭದಿಂದ 2.47 ಲಕ್ಷ ರೂ ಲಾಭ ಬಂದಿದೆ 519 ಮಂದಿ ಸದಸ್ಯರಿಂದ ಸಂಘಕ್ಕೆ ವಿವಿಧ ಸಾಲವಾಗಿ ನೀಡಿರುವ 519 ಲಕ್ಷ ಸಾಲ ವಾಪಸ್ ಬರಬೇಕಿದೆ ಎಂದು ತಿಳಿಸಿದರು.
ಸಂಘದ ವತಿಯಿಂದ 2023-24ನೇ ಸಾಲಿನಲ್ಲಿ 246 ಮಂದಿ ಷೇರುದಾರ ರೈತರಿಗೆ 336.53 ಕೆಸಿಸಿ ಬೆಳೆ ಸಾಲವನ್ನು ವಿತರಿಸಿದ್ದು ಈ ಸಾಲವನ್ನು 7 ಕೋಟಿರೂಗಳಿಗೆ ಹೆಚ್ಚಿಸಿ ಸಾಲ ವಿತರಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ಸಹಕಾರ ಬ್ಯಾಂಕಿನ ನಿರ್ದೇಶಕ ಎಚ್.ಸುಬ್ಬಯ್ಯ ಮಾತನಾಡಿ ಚಿಬುಕಹಳ್ಳಿ ಸಹಕಾರ ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ ಅಪೆಕ್ಸ್ ಬ್ಯಾಂಕಿನಿಂದ 10 ಲಕ್ಷ ರೂಗಳನ್ನು ಮಂಜೂರು ಮಾಡಿಸಿರುವುದಾಗಿ ಹೇಳಿದರು.
ಸಂಘದ ಸಿಇಓ ಕೃಷ್ಣೇಗೌಡ ಮಾತನಾಡಿ ಮುಂದಿನ ದಿನಗಳಲ್ಲಿ ಹೈನುಗಾರಿಕೆ ಸಾಲವನ್ನು ವಿತರಿಸಲು ಕ್ರಮಕೈಗೊಳ್ಳುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಟಿಎಪಿಸಿಎಂಎಸ್ ನಿರ್ದೇಶಕ ಆಶೋಕ್ ನಾಮದಾರಿ, ಸಂಘದ ಮಾಜಿ ಉಪಾಧ್ಯಕ್ಷ ಬೆಣಗನಹಳ್ಳಿ ಕೃಷ್ಣೇಗೌಡ, ನಿರ್ದೇಶಕರಾದ ಎಚ್.ಎಸ್.ವೆಂಕಟೇಶ್, ಜಯಣ್ಣ, ಭಾರತಿ, ಕೆ.ಶ್ವೇತಾ, ಸಿ.ಕೆ.ಮಹೇಶ್, ಎಚ್.ಬಿ.ಗೋವಿಂದರಾಜು, ಕೆ.ಎನ್.ತಮ್ಮಣ್ಣೇಗೌಡ, ನಿಂಗರಾಜು, ಹೊಸಕೋಟೆ ಗ್ರಾ.ಪಂ.ಮಾಜಿ ಅಧ್ಯಕ್ಷ ಸಿ.ಕೆ.ಬಸವರಾಜು ಇದ್ದರು.