ಬೇಕಾಗುವ ಪದಾರ್ಥಗಳು:
ಚಿಕನ್- 1 ಕೆಜಿ, ನಿಂಬೆ ರಸ- 1 ಚಮಚ, ಅರಿಶಿನ-ಸ್ವಲ್ಪ, ಉಪ್ಪು- ರುಚಿಗೆ ತಕ್ಕಷ್ಟು, ಮೊಸರು- 1 ಬಟ್ಟಲು
ಎಣ್ಣೆ- ಸ್ವಲ್ಪ, ತುಪ್ಪ- 200 ಎಂಎಲ್, ದನಿಯಾ- 1.5 ಚಮಚ, ಕಾಳುಮೆಣಸು- 1 ಚಮಚ, ಒಣಗಿದ ಮೆಣಸಿನ ಕಾಯಿ- 5, ಕಾಶ್ಮೀರಿ ಚಿಲ್ಲಿ- 5, ,ಜೀರಿಗೆ- 1 ಚಮಚ,ಮೆಂತ್ಯೆ-1/4 ಚಮಚ , ಬೆಳ್ಳುಳ್ಳಿ- ಸ್ವಲ್ಪ, ಹುಣಸೆ ರಸ- 1 ಚಮಚ, ಬೆಲ್ಲ-ಸ್ವಲ್ಪ, ಕರಿಬೇವು-ಸ್ವಲ್ಪ
ರುಚಿಕರವಾದ ಚಿಕನ್ ಘೀರೋಸ್ಟ್ ಮಾಡುವ ವಿಧಾನ
- ಮೊದಲಿಗೆ ಒಂದು ಪಾತ್ರೆಗೆ ಚೆನ್ನಾಗಿ ತೊಳೆದ ಚಿಕನ್, ನಿಂಬೆರಸ, ಅರಿಶಿನದ ಪುಡಿ, ಉಪ್ಪು ಹಾಗೂ ಮೊಸರು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಅರ್ಧಗಂಟೆ ನೆನೆಯಲು ಬಿಡಿ.
- ಇದೀಗ ಒಲೆಯ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಗೂ 150 ಎಂಎಲ್ ತುಪ್ಪ ಹಾಕಿ. ಕಾದ ನಂತರ ಇದಕ್ಕೆ ಚಿಕನ್ ಪೀಸ್ ಗಳನ್ನು ಹಾಕಿ ಬೇಯಲು ಬಿಡಿ.
- ಇದೀಗ ಒಲೆಯ ಮೇಲೆ ಪ್ಯಾನ್ ಇಟ್ಟು ಅದಕ್ಕೆ ದನಿಯಾ, ಕಾಳುಮೆಣಸು, ಒಣಗಿದ ಮೆಣಸಿನ ಕಾಯಿ, ಕಾಶ್ಮೀರಿ ಚಿಲ್ಲಿ, ಜೀರಿಗೆ ಹಾಗೂ ಮೆಂತ್ಯೆ ಹಾಕಿ ಕೆಂಪಗೆ ಹುರಿದುಕೊಳ್ಳಿ. ಇದು ತಣ್ಣಗಾದ ಬಳಿಕ ಮಿಕ್ಸಿ ಜಾರ್’ಗೆ ಹಾಕಿಕೊಳ್ಳಿ. ಬಳಿಕ ಸ್ವಲ್ಪ ಬೆಳ್ಳುಳ್ಳಿ, ಹುಣಸೆ ರಸ, ಬೆಲ್ಲ ಹಾಗೂ ಸ್ವಲ್ಪ ನೀರು ಹಾಕಿ ಪೇಸ್ಟ್ ರೀತಿ ರುಬ್ಬಿಕೊಳ್ಳಿ.
- ಇದೀಗ ಅದಾಗಲೇ ಬೇಯಲು ಬಿಟ್ಟಿದ್ದ ಚಿಕನ್ ಪೀಸ್ ಗಳನ್ನು ಒಂದು ಪ್ಲೇಟ್ ನಲ್ಲಿ ತೆಗೆದಿಟ್ಟುಕೊಳ್ಳಿ. ಚಿಕನ್ ಬೇಯಿಸಿಕೊಂಡ ಬಾಣಲೆಗೇ ರುಬ್ಬಿಕೊಂಡ ಮಸಾಲೆಯನ್ನು ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ಮಸಾಲೆಯಿಂದ ಎಣ್ಣೆ ಬಿಡುವವರೆಗೆ ಕುದಿಸಿ. ಬಳಿಕ ಬೇಯಿಸಿದ ಚಿಕನ್ ಪೀಸ್ ಹಾಕಿ. 10 ನಿಮಿಷದ ಬಳಿಕ ಉಳಿದ 50 ಎಂಎಲ್ ತುಪ್ಪ ಹಾಕಿ. 3 ನಿಮಿಷದ ಬಳಿಕ ಕರಿಬೇವು ಹಾಕಿ, 2 ನಿಮಿಷ ಕುದಿಯಲು ಬಿಟ್ಟರೆ ರುಚಿಕರವಾದ ಚಿಕನ್ ಘೀರೋಸ್ಟ್ ಸವಿಯಲು ಸಿದ್ಧವಾಗುತ್ತದೆ.