Thursday, April 10, 2025
Google search engine

Homeರಾಜ್ಯಸುದ್ದಿಜಾಲಹಿಂದುಳಿದ ವರ್ಗಗಳ ಪರವಾಗಿ ಸದಾ ಚಿಂತಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲರಿಗೂ ಮಾದರಿ: ಶಾಸಕ ಡಿ.ರವಿಶಂಕರ್

ಹಿಂದುಳಿದ ವರ್ಗಗಳ ಪರವಾಗಿ ಸದಾ ಚಿಂತಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲರಿಗೂ ಮಾದರಿ: ಶಾಸಕ ಡಿ.ರವಿಶಂಕರ್

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ: ಸವಿತಾ ಸಮಾಜದ ಏಳಿಗೆಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು ಅವರ ಬೆನ್ನ ಹಿಂದೆ ನಿಂತಿದೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.

ಪಟ್ಟಣದ ಶ್ರೀ ಕೃಷ್ಣಮಂದಿರದಲ್ಲಿ ಸಾಲಿಗ್ರಾಮ ಮತ್ತು ಕೆ.ಆರ್.ನಗರ ತಾಲೂಕು ಸವಿತಾ ಮಂಗಳವಾದ್ಯ ಕಲಾವಿದರ ಸಂಘದ ವತಿಯಿಂದ ನಡೆದ ತ್ಯಾಗರಾಜಸ್ವಾಮಿ ಆರಾಧನ ಮಹೋತ್ಸವ ಮತ್ತು ಶ್ರೀ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಹಿಂದುಳಿದ ವರ್ಗಗಗಳ ಪರವಾಗಿ ಸದಾ ಚಿಂತಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎಲ್ಲರಿಗೂ ಮಾದರಿ ಎಂದರು. ಈ ಹಿಂದೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿದ್ದಾಗ ಸವಿತಾ ಸಮಾಜದ ಅಭಿವೃದ್ದಿ ನಿಗಮ ಸ್ಥಾಪಿಸುವುದರ ಜತೆಗೆ ಸವಿತಾ ಮಹರ್ಷಿ ಹಾಗೂ ಹಡಪದ ಅಪ್ಪಣ್ಣನವರ ಜಯಂತಿಗಳ ಆಚರಣೆಯನ್ನು ಸರ್ಕಾರದ ವತಿಯಿಂದಲೇ ಮಾಡುವ ಘೋಷಣೆ ಮಾಡಿದ್ದರು ಎಂದು ತಿಳಿಸಿದರು.

ಸಮಸ್ತ ಹಿಂದುಳಿಗೆ ಶುಭ ಸಂಕೇತವಾಗಿರುವ ಮಂಗಳವಾದ್ಯ ನುಡಿಸುವ ಕಲಾವಿದರಾಗಿರುವ ಸವಿತಾ ಸಮಾಜದವರ ವೃತ್ತಿ ಅತ್ಯಂತ ಶ್ರೇಷ್ಟವಾಗಿದ್ದು ಅದಕ್ಕಾಗಿ ಅವರು ಹೆಮ್ಮೆ ಪಡಬೇಕು ಎಂದರಲ್ಲದೆ
ಸರ್ವರೂ ಆ ಸಮಾಜದಲ್ಲಿ ಕಾಯಕ ಮಾಡುವವರನ್ನು ಗೌರವಿಸಬೇಕು ಎಂದು ನುಡಿದರು.

ವೃತ್ತಿಯ ಜತೆಗೆ ಸವಿತಾ ಸಮಾಜದ ಬಾಂಧವರು ತಮ್ಮ ಮಕ್ಕಳಿಗೆ ಉತ್ತಮ ಮತ್ತು ಉನ್ನತ ಶಿಕ್ಷಣ ಕೊಡಿಸಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕು ಎಂದು ಸಲಹೆ ನೀಡಿದರಲ್ಲದೆ ಸಾಲಿಗ್ರಾಮ ಮತ್ತು ಕೆ.ಆರ್.ನಗರ ತಾಲೂಕುಗಳಲ್ಲಿ ಸಮಾಜದ ಸಮುದಾಯ ಭವನ ನಿರ್ಮಾಣ ಮಾಡಿಕೊಳ್ಳಲು ಸರ್ಕಾರದ ವತಿಯಿಂದ ನಿವೇಶನ ಕೊಡಿಸುವ ಭರವಸೆ ನೀಡಿದರು.

ನನ್ನ ಅಧಿಕಾರವಧಿಯಲ್ಲಿ ಸದಾ ಶೋಷಿತ ಸಮಾಜಗಳನ್ನು ಮೇಲೆತ್ತುವ ಕೆಲಸ ಮಾಡಲು ಮೊದಲ ಆಧ್ಯತೆ ನೀಡಲಿದ್ದು ಅವರೊಂದಿಗೆ ಸದಾ ಸಹೋದರನಾಗಿ ಇರುತ್ತೇನೆಂದರಲ್ಲದೆ ಸವಿತ ಸಮಾಜದ ಜಿಲ್ಲಾಧ್ಯಕ್ಷ ಎನ್.ಆರ್.ನಾಗೇಶ್ ಅವರಿಗೆ ನಿಗಮ ಮತ್ತು ಮಂಡಳಿಯಲ್ಲಿ ಉತ್ತಮ ಸ್ಥಾನ ನೀಡುವಂತೆ ಈಗಾಗಲೇ ನಾನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮತ್ತು ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರಸಿದ್ದರಾಮಯ್ಯ ಅವರಿಗೆ
ಮನವಿ ಮಾಡಿದ್ದೇನೆ ಎಂದು ಮಾಹಿತಿ ನೀಡಿದರು.

ಸಾಲಿಗ್ರಾಮ ತಾಲೂಕಿನ ಹೊಸಕೋಟೆ ಮತ್ತು ಚನ್ನಂಗೆರೆ ಗ್ರಾಮಗಳಿಗೆ ಸವಿತಾ ಸಮಾಜದ ಸಮುದಾಯ ಭವನ ನಿರ್ಮಾಣ ಮಾಡಲು ಶಾಸಕರ ನಿಧಿಯಿಂದ ೮ ಲಕ್ಷ ಅನುದಾನ ನೀಡಲಾಗಿದ್ದು ಉಳಿದಂತೆ ಆಧ್ಯತೆಯ ಮೇರೆಗೆ ಸಮುದಾಯದ ಅಭಿವೃದ್ದಿಗೆ ಸರ್ಕಾರದ ಅನುದಾನದ ಜತೆಗೆ ಶಾಸಕರ ನಿಧಿ ಮತ್ತು ವೈಯುಕ್ತಿಕವಾಗಿ ಸಹಾಯ
ಮಾಡುವ ಮಾತುಗಳನ್ನಾಡಿದರು.

ಈ ಸಂಧರ್ಭದಲ್ಲಿ ಸಮಾಜದ ಸಾಧಕರನ್ನು ಸನ್ಮಾನಿಸುವುದರ ಜತೆಗೆ ಹೆಸರಾಂತ ಮಂಗಳವಾದ್ಯ ಕಲಾವಿದರಿಂದ ವಾದ್ಯಗೋಷ್ಠಿ ನಡೆಸಲಾಯಿತಲ್ಲದೆ ಕಾರ್ಯಕ್ರಮದ ಆರಂಭಕ್ಕೂ ಮೊದಲು ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಬಳಿಯಿಂದ ವಿವಿಧ ಕಲಾತಂಡಗಳೊoದಿಗೆ ಸವಿತಾಮಹರ್ಷಿ, ಹಡಪದ ಅಪ್ಪಣ್ಣ, ತ್ಯಾಗರಾಜರ ಭಾವಚಿತ್ರಗಳನ್ನು ಬೆಳ್ಳಿ ಪಲ್ಲಕ್ಕಿಯಲ್ಲಿ ಮೆರವಣಿಗೆ ಮಾಡಲಾಯಿತು.

ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಮಾತನಾಡಿ ಸಮಾಜವನ್ನು ಮುನ್ನಡೆಸಿ ಸರಿದಾರಿಯಲ್ಲಿ ನಡೆಸಲು ಸ್ವಾಮೀಜಿಗಳ ಅವಶ್ಯಕತೆ ತುಂಬಾ ಇದ್ದು ಸವಿತಾ ಸಮಾಜದ ಬಾಂಧವರು ಅವರ ಮಾರ್ಗದರ್ಶನದಲ್ಲಿ ಮುನ್ನಡೆದು ಉತ್ತಮ ಬದುಕು ರೂಪಿಸಿಕೊಳ್ಳಬೇಕು ಸವಿತಾ ಸಮಾಜದವರು ಕಾಯಕ ಜೀವಿಗಳಾಗಿದ್ದು ಅವರ
ಸೇವೆ ಎಲ್ಲರಿಗೂ ಅಗತ್ಯವಾಗಿದೆ ಎಂದರು.

ಹಿಂದುಳಿದ ವರ್ಗವಾಗಿರುವ ಸವಿತಾ ಸಮಾಜದ ಬಾಂಧವರಿಗೆ ಈವರೆಗೂ ಆಳುವ ಸರ್ಕಾರಗಳು ಮೀಸಲಾತಿ ನೀಡಿರುವುದರಿಂದ ಅವರು ರಾಜಕೀಯ ಮತ್ತು ಆರ್ಥಿಕವಾಗಿ ಹಿಂದುಳಿದಿದ್ದು ಈ ವಿಚಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ.ಮಹದೇವಪ್ಪ ಗಂಭೀರವಾಗಿ ಪರಿಗಣಿಸಿ ಅವರಿಗೆ ಮೀಸಲಾತಿ ಕೊಡಿಸಬೇಕು ಎಂದರು.

ಮೀಸಲಾತಿ ಇಲ್ಲದಿದ್ದರೆ ಉದ್ಯೋಗ ಮತ್ತು ಸರ್ಕಾರಿ ಕೆಲಸಗಳಲ್ಲಿ ಆದ್ಯತೆ ಸಿಗುವುದಿಲ್ಲ ಜತೆಗೆ ಶಿಕ್ಷಣದಿಂದಲೂ ವಂಚಿತರಾಗಬೇಕಿದ್ದು ಮುಂದಾದರೂ ಸವಿತಾ ಸಮಾಜದವರು ಕಾರ್ಯಕ್ರಮ ಮಾಡಿ ಭಾಷಣ ಮಾಡಿಸಲು ಸೀಮಿತವಾಗದೆ ಮೀಸಲಾತಿಗಾಗಿ ಹೋರಾಟ ಮಾಡಬೇಕು ಎಂದು ಕರೆ ನೀಡಿದರು.

ಪುರಸಭೆ ಅಧ್ಯಕ್ಷ ಶಿವುನಾಯಕ್, ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಎನ್.ಆರ್.ನಾಗೇಶ್, ನವ ನಗರ ಬ್ಯಾಂಕ್
ಅಧ್ಯಕ್ಷ ಕೆ.ಎನ್.ಬಸಂತ್, ಬಿಇಒ ಆರ್.ಕೃಷ್ಣಪ್ಪ, ಕರ್ಪೂರಿ ಠಾಕೂರ್ ಒಬಿಸಿ ಜಿಲ್ಲಾಧ್ಯಕ್ಷ ಕೆ.ಎಸ್.ಭಾಸ್ಕರ್,
ಸವಿತಾ ಮಂಗಳವಾದ್ಯ ಸಂಘದ ತಾಲೂಕು ಅಧ್ಯಕ್ಷ ಕೆ.ಪಿ.ನಾರಾಯಣ, ಸಮಾಜದ ಮುಖಂಡರ ಚಿಕ್ಕಮಾಧು ಮಾತನಾಡಿದರು.

ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಸ್.ಮಹೇಶ್, ಪುರಸಭೆ ಸದಸ್ಯರಾದ ಮಂಜುಳಚಿಕ್ಕವೀರು, ಶಂಕರ್‌ಸ್ವಾಮಿ, ನಟರಾಜು, ಶಂಕರ್, ಮಾಜಿ ಸದಸ್ಯ ಕೆ.ವಿನಯ್, ತಾ.ಪಂ. ಮಾಜಿ ಅಧ್ಯಕ್ಷ ಹಾಡ್ಯಮಹದೇವಸ್ವಾಮಿ, ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿ.ಪಿ.ರಮೇಶ್‌ಕುಮಾರ್, ಕಾಂಗ್ರೆಸ್ ಮುಖಂಡರಾದ ಜಿ.ವೆಂಕಟೇಶ್, ಮಂಗಳವಾದ್ಯ ಕಲಾವಿದರ ಸಂಘದ ಗೌರವಾಧ್ಯಕ್ಷ ಹೆಚ್.ಎಂ.ಮಹದೇವ,
ಉಪಾಧ್ಯಕ್ಷರಾದ ರಾಜಯ್ಯ, ಲೋಲಾ, ಕಾರ್ಯದರ್ಶಿ ಜಿ.ಕೆ.ವಿನಯ್‌ಕುಮಾರ್, ಸಹಕಾರ್ಯದರ್ಶಿ ಸಂತೋಷ್,
ಪದಾಧಿಕಾರಿಗಳಾದ ಹೆಚ್.ಎಂ.ಮoಜುನಾಥ್, ವಿ.ಕುಮಾರ್, ಚನ್ನಪ್ಪ ಮತ್ತಿತರರು ಇದ್ದರು.

RELATED ARTICLES
- Advertisment -
Google search engine

Most Popular