ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೈಸೂರಿನಿಂದ ಹಾಸನ ಜಿಲ್ಲೆಯ ಶಿರಾಡಿಘಾಟ್ ಭೂ ಕುಸಿತ ಪ್ರದೇಶಗಳಿಗೆ ಭೇಟಿ ನೀಡಿ ವೀಕ್ಷಣೆ ಮಾಡುವ ಹಿನ್ನಲೆಯಲ್ಲಿ ಮಾರ್ಗಮಧ್ಯೆ ಕೆ.ಆರ್.ನಗರ ಪಟ್ಟಣಕ್ಕೆ ಆಗಮಿಸಿದಾಗ ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಮುಖ್ಯಮಂತ್ರಿಗಳನ್ನು ಅದ್ದೂರಿಯಾಗಿ ಸ್ವಾಗತಿಸಿದರು.
ನಗರದ ಪುರಸಭೆ ವೃತ್ತದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮತ್ತು ಶಾಸಕ ಡಿ.ರವಿಶಂಕರ್ ಅವರಿಗೆ ಜಯಕಾರ ಕೂಗಿದರು.
ಕೆಪಿಸಿಸಿ ಕಾರ್ಯಕಾರಿಣಿ ಸದಸ್ಯ ದೊಡ್ಡಸ್ವಾಮೇಗೌಡ, ತಾಲೂಕು ಕುರುಬರ ಸಂಘದ ಅಧ್ಯಕ್ಷ ಚರ‍್ನಹಳ್ಳಿ ಶಿವಣ್ಣ ಮತ್ತಿತರಮುಖಂಡರು ಬೃಹತ್ ಗಾತ್ರದ ಹೂ ಮಾಲೆ ಹಾಕಿ, ಹೂವಿನ ಮಳೆ ಸುರಿಸಿ ಶುಭಕೋರಿದರು. ಈ ಸಂದoರ್ಭದಲ್ಲಿ ಯುವ ಕಾಂಗ್ರೆಸ್ ಪದಾಧಿಕಾರಿಗಳು ಸೇರಿದಂತೆ ಪಕ್ಷದ ನಾನಾ ವಿಭಾಗಗಳ ಪದಾಧಿಕಾರಿಗಳು ಹಾಜರಿದ್ದು ಬಿತ್ತಿ ಪತ್ರಗಳನ್ನು ಹಿಡಿದು ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಪಕ್ಷಗಳು ಮೂಡಾ ವಿಚಾರದಲ್ಲಿ ಮಾಡುತ್ತಿರುವ ಪಾದಯಾತ್ರೆಯ ವಿರುದ್ದ ಧಿಕ್ಕಾರ ಕೂಗಿದ್ದಲ್ಲದೆ ಇದು ಮೈತ್ರಿ ಪಕ್ಷದ ಪಿತ್ತೂರಿ ಎಂದು ಧಿಕ್ಕಾರದ ಘೋಷಣೆಗಳನ್ನು ಮೊಳಗಿಸಿದರು.
ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜೇಂದ್ರ ವಿರುದ್ದ ಧಿಕ್ಕಾರ ಕೂಗಿದ ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಎನ್‌ಡಿಎ ಪಕ್ಷದ ಏಜೆಂಟ್‌ರoತೆ ವರ್ತಿಸುತ್ತಿರುವ ರಾಜ್ಯಪಾಲರು ಕೂಡಲೇ ತಮ್ಮ ತಪ್ಪುಗಳನ್ನು ತಿದ್ದುಕೊಂಡು ಚುನಾಯಿತ ಸರ್ಕಾರ ಸುಭೀಕ್ಷವಾಗಿ ಆಡಳಿತ ನಡೆಸಲು ಅವಕಾಶ ನೀಡಬೇಕೆಂದು ಒತ್ತಾಯಿಸಿದರು.
ಅಹಿಂದ ನಾಯಕ, ಸಂವಿಧಾನ ರಕ್ಷಕ, ಹಾಗೂ ಬಡವರ ಪರವಾದ ಹಲವು ಯೋಜನೆಗಳ ಭಾಗ್ಯವಿದ್ದಾತರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ದ ನಡೆಸುತ್ತಿರುವ ಷಡ್ಯಂತರವನ್ನು ಸಹಿಸಲು ಸಾಧ್ಯವಿಲ್ಲ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿ ಎನ್‌ಡಿಎ ವರಿಷ್ಠರ ವಿರುದ್ದ ಧಿಕ್ಕಾರದ ಘೋಷಣೆಗಳನ್ನು ಕೂಗಿ, ಮುಖ್ಯಮಂತ್ರಿಗಳಿಗೆ ಜಯಕಾರ ಕೂಗಿದರು.
ಜಿ.ಪಂ. ಮಾಜಿ ಸದಸ್ಯರಾದ ಜಿ.ಆರ್.ರಾಮೇಗೌಡ, ಮಾರ್ಚಳ್ಳಿಶಿವರಾಮು, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಗಡ್ಡಮಹೇಶ್, ನಿರ್ದೇಶಕರಾದ ಸರಿತಾಜವರಪ್ಪ, ಸೈಯದ್‌ಜಾಬೀರ್, ಪುರಸಭೆ ಸದಸ್ಯರಾದ ಕೋಳಿಪ್ರಕಾಶ್, ಶಿವಕುಮಾರ್, ಶಂಕರ್, ಸೈಯದ್‌ಸಿದ್ದಿಕ್, ಜಾವಿದ್‌ಪಾಷ, ಮುಖಂಡರಾದ ಮಿರ್ಲೆನಾಗರಾಜು, ಸುಧಾಕರ್, ಕಲ್ಲಹಳ್ಳಿಶ್ರೀನಿವಾಸ್, ರಾಜನಾಯಕ, ಎಂ.ಎಸ್.ಅನoತು, ಕೆ.ಪಿ.ಜಗದೀಶ್, ಕೆ.ಎಂ.ಶ್ರೀನಿವಾಸ್, ರಾಜಯ್ಯ, ಮಹೇಶ್, ಬಿ.ಎಂ.ಗಿರೀಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಎಸ್.ಮಹದೇವ್, ಉದಯಶಂಕರ್, ನಗರಾಧ್ಯಕ್ಷ ಎಂ.ಜೆ.ರಮೇಶ್ ಮತ್ತಿತರರು ಹಾಜರಿದ್ದರು.