ಹುಣಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ೧೪ನೇ ಬಜೆಟ್‌ನ್ನು ವಿಧಾನ ಸದಾ ಅಧಿವೇಶನದಲ್ಲಿ ಶುಕ್ರವಾರ ಮಂಡಿಸಿದ ಹಿನ್ನೆಲೆಯಲ್ಲಿ ಹುಣಸೂರು ನಗರದ ಕಾಂಗ್ರೆಸ್ ಕಾರ್ಯಕರ್ತರು ಹುಣಸೂರು ಕಾಂಗ್ರೆಸ್ ಕಚೇರಿ ಮುಂಭಾಗ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಶುಭ ಕೋರಿದ ದೊಡ್ಡ ಫ್ಲೆಕ್ಸ್ ಅಳವಡಿಸಿ ಸಾರ್ವಜನಿಕರಿಗೆ ಸಿಹಿ ವಿತರಿಸಿ ಸಂತಸ ಹಂಚಿಕೊಂಡರು.
ಈ ವೇಳೆ ನಗರ ಕಾಂಗ್ರೆಸ್ ನ ನಗರ ಕಾರ್ಯಧ್ಯಕ್ಷ ವಕೀಲ ಪುಟ್ಟರಾಜ ಮಾತನಾಡಿ ನುಡಿದಂತೆ ನಡೆದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ೧೪ನೇ ಬಜೆಟ್ ನ್ನು ಮಂಡಿಸುತ್ತಿರುವುದು ಸಂತಸದ ವಿಷಯವಾಗಿದೆ ಅವರು ಈ ಚುನಾವಣೆಯಲ್ಲಿ ಕೊಟ್ಟ ಭರವಸೆಯನ್ನು ಈಡೇರಿಸಿ ಬಡವರ ಶ್ರಮಿಕರ ದೀನದಲಿತರ ಬಡವರ ರೈತ ಪರವಾಗಿ ಬಜೆಟ್ ಮಂಡಿಸಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು. ಈ ವೇಳೆ ನಗರ ಕಾಂಗ್ರೆಸ್ ಅಧ್ಯಕ್ಷ ಕಲ್ಕುಣಿಕೆ ರಮೇಶ್, ನಗರಸಭಾ ಸದಸ್ಯ ಸ್ವಾಮಿಗೌಡ, ವೆನ್ನಿ ತೋಮಸ್, ಹರೀಶ್, ಯುವ ಮುಖಂಡರಾದ ಕಲ್ಕುಣಿಕೆ ರಾಘು, ಸಂತೋಷ್, ಮಂಜು, ಚೆಲುವಾಚಾರಿ ವಿನೋಬ ಕಾಲೋನಿ ರಾಮಯ್ಯ ಶಿವಮಲ್ಲಯ್ಯ ಕಲ್ಕುಣಿಕೆ ನಾಗಣ್ಣ ಮಾದೇವಮ್ಮ, ಬಾಲಾಜಿ, ಗುಂಡ ಸೇರಿದಂತೆ ಇತರರು ಇದ್ದರು.