ಹನೂರು: ತಾಲೂಕಿನ ಚಿಕ್ಕಮಾಲಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಚಾಮಮ್ಮ ಉಪಾಧ್ಯಕ್ಷರಾಗಿ ಚೆನ್ನಯ್ಯ ಅವಿರೋಧ ಆಯ್ಕೆಯಾದರು.
ಚಿಕ್ಕ ಮಾಲಾಪುರ ಗ್ರಾಮ ಪಂಚಾಯಿತಿಯಲ್ಲಿ 15 ಸದಸ್ಯರ ಸಂಖ್ಯೆ ಬಲವಿದ್ದು 10 ಕಾಂಗ್ರೆಸ್ ಬೆಂಬಲಿತ ಸದಸ್ಯರುರು ಹಾಗೂ ಐದು ಜನ ಬಿಜೆಪಿ ಬೆಂಬಲಿತರು ಸದಸ್ಯರು ಆಯ್ಕೆಯಾಗಿದ್ದರು.
ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲಿತ ಸದಸ್ಯ ಚಾಮಮ್ಮ ಹಾಗೂ ಚೆನ್ನಯ್ಯ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾ ಅಧಿಕಾರಿಯಾಗಿದ್ದ ಗಂಗಾಧರ್ ರವರು ಅವಿರೋಧ ಆಯ್ಕೆಯನ್ನು ಘೋಷಣೆ ಮಾಡಿದರು.
ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರುಗಳು, ಚೆನ್ನಾಲಿಂಗನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಂಘದ ಅಧ್ಯಕ್ಷ ಕೆ ಸಿ ಮಾದೇಶ್, ಮುಖಂಡರಾದ ನಂಜುಂಡ ಶೆಟ್ಟಿ, ಅಂಕರಾಜು ಹಾಜರಿದ್ದರು.
ವಿವಿಧ ಗ್ರಾಮ ಪಂಚಾಯಿತಿಗಳಿಗೆ ಅಧ್ಯಕ್ಷ ಉಪಾಧ್ಯಕ್ಷರ ನೇಮಕ: ಎಲ್ಲೇಮಾಳ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಕಮಲಮ್ಮ ಉಪಾಧ್ಯಕ್ಷರಾಗಿ ಮಹದೇವಪ್ಪ, ಶೆಟ್ಟಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ರೂಪ ಉಪಾಧ್ಯಕ್ಷರಾಗಿ ಸಿದ್ದರಾಜು, ದಿನಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಪಾರ್ವತಿ ಬಾಯಿ ಉಪಾಧ್ಯಕ್ಷರಾಗಿ ರಾಮಕೃಷ್ಣ, ಮಿಣ್ಯಂ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಚಂದ್ರಮತಿ ಉಪಾಧ್ಯಕ್ಷರಾಗಿ ಶ್ವೇತಾ, ದೊಡ್ಡಲತ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಪ್ರೇಮ ಉಪಾಧ್ಯಕ್ಷರಾಗಿ ಕುಮಾರ್, ಹೂಗ್ಯಂ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಮುರುಗಮ್ಮ ಉಪಾಧ್ಯಕ್ಷರಾಗಿ ರಾಜಮ್ಮ ಆಯ್ಕೆಯಾಗಿದ್ದಾರೆ.