ಚಿಕ್ಕೋಡಿ: ಕೊನೆಯ ಭಾಗಕ್ಕೆ ಬಾರದ ಕಾಲುವೆ ನೀರು
ವರದಿ :ಸ್ಟೀಫನ್ ಜೇಮ್ಸ್.
ಚಿಕ್ಕೋಡಿ: ಕಾಲುವೆಯಲ್ಲಿ ಮಲಗೆ ರೈತರ ಪ್ರತಿಭಟನೆಚಿಕ್ಕೋಡಿ: ಕೊನೆಯ ಭಾಗಕ್ಕೆ ಬಾರದ ಕಾಲುವೆ ನೀರು.ಚಿಕ್ಕೋಡಿ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ಡೊಣವಾಡಗ್ರಾಮದ ಮಹಾಂತ ನಗರ ಸೇರಿ ವಿವಿಧ ತೋಟದ ವಸತಿ ಪ್ರದೇಶದ ಜನರು ಶುಕ್ರವಾರ ನೀರಾವರಿ ಕಾಲುವೆಯಲ್ಲೇ ಅಡ್ಡಲಾಗಿ ಮಲಗಿ, ಪ್ರತಿಭಟನೆ ಮಾಡಿದರು.ಕೊಟಬಾಗಿ ಏತ ನೀರಾವರಿಯ ಕಾಲುವೆಗೆ ನೀರು ಹರಿಸದ ಕಾರಣ ಪ್ರತಿ ವರ್ಷ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಆಗುತ್ತದೆ. ಕೂಡಲೇ ಕೊನೆಯ ಭಾಗದವರೆಗೆ ನೀರು ಹರಿಸಿ’ ಎಂದು ಆಗ್ರಹಿಸಿದರು.ಕರ್ನಾಟಕ ನೀರಾವರಿ ನಿಗಮ ನಿಯಮಿತದಿಂದ ನಿರ್ವಹಣೆ ಆಗುವ 17 ಕಿ.ಮೀ ಉದ್ದದ ಕಾಲುವೆಯಲ್ಲಿ 178.62 ಕ್ಯೂಸೆಕ್ ನೀರು ಹರಿಯಬೇಕಿತ್ತು ಎಂದು ಪ್ರತಿಪಾದಿಸಿದರು.“ಉದ್ಯೋಗ ಖಾತ್ರಿ ಯೋಜನೆಯಡಿ ಕಾಲುವೆಯ ಹೂಳು ತೆರವು ಮಾಡಲಾಗಿದೆ. ಆದರೆ, ಅಧಿಕಾರಿಗಳು ನೀರು ಬಿಡುಗಡೆಗೆ ಮೀನ-ಮೇಷ ತೋರುತ್ತಿದ್ದಾರೆ’ ಎಂದು ರೈತ ಮುಖಂಡ ರಾಚಪ್ಪ ಶಿವಾಪೂರೆ ಆರೋಪಿಸಿದರು.’ಕೆಲವೆಡೆ ಕಾಲುವೆ ನೀರನ್ನು ಹಳ್ಳಕ್ಕೆ ಬಿಡಲಾಗುತ್ತಿದೆ. ಕಾಲುವೆ ಕೊನೆವರೆಗೆ ನೀರು ಹರಿಯುತ್ತಿಲ್ಲ. ಕಾಲುವೆಯ ಕೊನೆ ಭಾಗದ ರೈತರು ನೀರು ಇಲ್ಲದೇ ಬೆಳೆಯನ್ನು ಹೇಗೆ ಉಳಿಸಿಕೊಳ್ಳುವುದು ಹೇಗೆ? ಜನ ಜಾನುವಾರುಗಳಿಗೆ ಕುಡಿಯುವ ನೀರು ಇಲ್ಲದೇ ತೊಂದರೆ ಅನುಭವಿಸುವಂತಾಗಿದೆ’ ಎಂದು ರೈತ ಬಾಬು ಮಗದುಮ್ಮ ತಿಳಿಸಿದರು.



