ಕೊಳ್ಳೇಗಾಲ: ಕಬ್ಬು ಕಟಾವು ಮಾಡುವ ವೇಳೆ ತಾಟಿನಲ್ಲಿ ಮಲಗಿದ್ದ ಮಗುವಿಗೆ ಹಾವು ಕಡಿದು ಮಗು ಮೃತಪಟ್ಟಿರುವ ಘಟನೆ ತಾಲ್ಲೂಕಿನ ತೇರಂಬಳ್ಳಿ ಗ್ರಾಮದಲಿ ನಿನ್ನೆ ನಡೆದಿದೆ.
ಎರಡು ವರ್ಷದ ಗಂಡು ಮಗು ಮೃತಪಟ್ಟಿದ್ದು, ಮಗುವು ಬಳ್ಳಾರಿ ಜಿಲ್ಲೆಯ ಹೊಸಪೇಟೆ ನಗರದ ಶ್ರೀಧರ್ ಎಂಬುವರದ್ದು ಎಂದು ತಿಳಿದು ಬಂದಿದೆ. ಬಳ್ಳಾರಿ ಜಿಲ್ಲೆಯಿಂದ ಕಬ್ಬು ಕಟಾವು ಮಾಡಲು ಬಂದಿದ್ದ ಶ್ರೀಧರ್ ಕುಟುಂಬ ಕುಳ್ಳೇಗೌಡ ಅವರ ಜಮೀನಿನಲ್ಲಿ ಕಟಾವು ಮಾಡುತ್ತಿದ್ದಾಗ ಈ ದುರ್ಘಟನೆ ನಡೆಯಿತು.
ನಗರದ ಸರ್ಕಾರಿ ಉಪ ವಿಭಾಗ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಕಾಮಗೆರೆಯ ಹೋಲಿಕ್ರಾಸ್ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಮಗು ಮೃತಪಟ್ಟಿತ್ತು ಎಂದು ವೈದ್ಯರು ತಿಳಿಸಿದ್ದಾರೆ. ಅಗರ ಮಾಂಬಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.