Tuesday, April 22, 2025
Google search engine

Homeರಾಜ್ಯಸುದ್ದಿಜಾಲಮಕ್ಕಳು ಶಿಕ್ಷಕರ ಮಾರ್ಗದರ್ಶನ ಪಡೆದು ಉತ್ತಮ ವ್ಯಕ್ತಿಗಳಾಗಲಿ:ಸುರೇಶ್ ಎನ್ ಋಗ್ವೇದಿ

ಮಕ್ಕಳು ಶಿಕ್ಷಕರ ಮಾರ್ಗದರ್ಶನ ಪಡೆದು ಉತ್ತಮ ವ್ಯಕ್ತಿಗಳಾಗಲಿ:ಸುರೇಶ್ ಎನ್ ಋಗ್ವೇದಿ

ಚಾಮರಾಜನಗರ: ಮಕ್ಕಳು ಬಾಲ್ಯದಿಂದಲೂ ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳುವ ಮೂಲಕ ಗುರು ಹಿರಿಯರು ಶಿಕ್ಷಕರ ಮಾರ್ಗದರ್ಶನದಲ್ಲಿ ಉತ್ತಮ ವ್ಯಕ್ತಿಗಳಾಗಿ ಹೊರಹೊಮ್ಮಿ ಭಾರತದ ಕೀರ್ತಿಯನ್ನು ವಿಶ್ವದಲ್ಲೆಡೆ ಹರಡುವ ಕೀರ್ತಿ ಶಾಲಿಗಳಾಗಿ ಎಂದು ಜೈ ಹಿಂದ್ ಪ್ರತಿಷ್ಠಾನದ ಅಧ್ಯಕ್ಷ ಸುರೇಶ್ ಎನ್ ಋಗ್ವೇದಿ ತಿಳಿಸಿದರು. ಅವರು ಜೆಎಸ್‌ಎಸ್ ಪ್ರೌಢಶಾಲಾ ಆವರಣದಲ್ಲಿ ನಡೆದ ಮಕ್ಕಳ ದಿನಾಚರಣೆಯ ಉದ್ಘಾಟನಾ ಕಾರ್ಯಕ್ರಮ ಹಾಗೂ ಬಹುಮಾನ ವಿತರಣೆ ಮಾಡಿ ಮಾತನಾಡಿ ಬಾಲ್ಯದ ಸಮಯ ಉತ್ತಮವಾಗಿದ್ದು ಪಾಠದೊಂದಿಗೆ ಆಟ ,ಆಟದಲ್ಲಿ ಪಾಠ ಹಾಗೂ ಉತ್ತಮ ಸ್ನೇಹಿತರ ಸಹವಾಸದಿಂದ ಶ್ರೇಷ್ಠ ವ್ಯಕ್ತಿಗಳಾಗಿ ಬೆಳೆಯಬೇಕು .

ಅಧ್ಯಯನದಲ್ಲೂ ಯೋಚನೆ , ಯೋಜನೆ,ಸಾಧನೆ ಮಾರ್ಗಸೂಚಿಗಳನ್ನು ರೂಡಿಸಿಕೊಂಡು, ಪ್ರಾರ್ಥನೆ, ಯೋಗ, ಕ್ರೀಡೆ ,ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗಿಯಾಗುವ ಮೂಲಕ ಸಮಗ್ರ ವ್ಯಕ್ತಿತ್ವ ವಿಕಾಸಕ್ಕೆ ಅವಕಾಶ ಮಾಡಿಕೊಳ್ಳಬೇಕು. ಮಕ್ಕಳು ಸರಳತೆ ,ಸಾಂಸ್ಕೃತಿಕ ಮೌಲ್ಯಗಳು, ಸಹಕಾರ ಭಾವನೆ ಧೈರ್ಯ ,ದೇಶಭಕ್ತಿ, ಕರ್ತವ್ಯ ನಿಷ್ಠೆ, ತಾಳ್ಮೆ, ಪ್ರಾಮಾಣಿಕತೆ ಭಾವನೆಯನ್ನು ಹಾಗೂ ಸಮಾಜಕ್ಕೆ ಅರ್ಪಿಸಿಕೊಳ್ಳುವ, ಗುರು ಹಿರಿಯರನ್ನು ಗೌರವಿಸುವ, ಉತ್ತಮ ಭಾವನೆಗಳನ್ನು ಬಾಲ್ಯದಿಂದಲೂ ಮೈಗೂಡಿಸಿಕೊಳ್ಳಿ. ಸಮಾಜಕ್ಕೆ ಶಕ್ತಿಯಾಗಿ, ಕುಟುಂಬಕ್ಕೆ ಗೌರವ ಹಾಗೂ ತಂದೆ ತಾಯಿಗಳಿಗೆ ವಿಶ್ವಾಸ ಉಂಟು ಮಾಡುವ ಮಕ್ಕಳಾಗಬೇಕು.

ಮಕ್ಕಳ ದಿನಾಚರಣೆಯನ್ನು ಪ್ರತಿ ವರ್ಷ ನವೆಂಬರ್ ೧೪ರಂದು ಭಾರತದಲ್ಲಿ ಭಾರತದ ಮೊಟ್ಟ ಮೊದಲ ಪ್ರಧಾನಿ ಜವಹರ್ ಲಾಲ್ ನೆಹರುರವರ ಜನ್ಮದಿನದ ಅಂಗವಾಗಿ ಆಚರಿಸಿ ಕೋಟ್ಯಾಂತರ ಮಕ್ಕಳಲ್ಲಿ ನವ ಚೈತನ್ಯ ,ಸ್ಪೂರ್ತಿ ಮತ್ತು ಅವರ ಸಾಂಸ್ಕೃತಿಕ ಮತ್ತು ಕ್ರೀಡಾ ಪ್ರಜ್ಞೆಯನ್ನು ಹೆಚ್ಚಿಸುತ್ತಿರುವ ಅನೇಕ ಕಾರ್ಯಕ್ರಮಗಳನ್ನು ರೂಪಿಸಿ ಆತ್ಮ ಗೌರವದ ಪ್ರತೀಕವಾಗಿ ಇಡೀ ದೇಶದಲ್ಲಿ ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಮಕ್ಕಳು ರಾಷ್ಟ್ರದ ಆಸ್ತಿ. ಮಕ್ಕಳನ್ನು ಉತ್ತಮ ಸಂಸ್ಕಾರ ಸಂಸ್ಕೃತಿ ಪರಂಪರೆ ರಾಷ್ಟ್ರೀಯ ಮೌಲ್ಯ ಸಾಮಾಜಿಕ ಮೌಲ್ಯ ಹಾಗೂ ವೈಯಕ್ತಿಕ ಮೌಲ್ಯಗಳ ತಿಳುವಳಿಕೆಯ ಪೂರಕ ವಾತಾವರಣವನ್ನು ಸೃಷ್ಟಿ ಮಾಡಿ ಶ್ರೇಷ್ಠ ಭಾರತೀಯರನ್ನಾಗಿ ರೂಪಿಸುವ ಅವಶ್ಯಕತೆ ಇದೆ ಎಂದು ಋಗ್ವೇದಿ ತಿಳಿಸಿದರು.

ಜೆಎಸ್‌ಎಸ್ ಸಂಸ್ಥೆ ಮೈಸೂರು ಪ್ರಾಂತ್ಯ ಹಾಗೂ ವಿವಿಧಡೆ ಶಿಕ್ಷಣ ನೀಡುವ ಮೂಲಕ ಪಕ್ಷಾಂತರ ಜನರ ಬದುಕಿಗೆ ಮಾರ್ಗದರ್ಶನ ನೀಡುತ್ತಿದೆ. ಚಾಮರಾಜನಗರದ ಶಿಕ್ಷಣದ ಕ್ರಾಂತಿಗೆ ಕಾರಣವಾದ ಜೆಎಸ್‌ಎಸ್ ಸಂಸ್ಥೆಗೆ ನಾವೆಲ್ಲರೂ ಸದಾ ಋಣಿಯಾಗಬೇಕು ಎಂದು ತಿಳಿಸಿದರು. ಹಲವಾರು ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ನೀಡಿ ಗೌರವಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಮುಖ್ಯ ಶಿಕ್ಷಕರದ ಸಿದ್ದಪ್ಪನವರು ವಹಿಸಿ ಮಾತನಾಡಿ ವಿದ್ಯಾರ್ಥಿಗಳು ಸ್ಪೂರ್ತಿಯನ್ನು ತುಂಬಿಸಿಕೊಂಡು ಗುರು ಹಿರಿಯರ ಮಾರ್ಗದರ್ಶನದಲ್ಲಿ ಉತ್ತಮ ವ್ಯಕ್ತಿಗಳಾಗಿ ಮಕ್ಕಳ ಮನಸ್ಸು ಮೃದು. ಆಟದೊಂದಿಗೆ ಸಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿ ಸಾಧನೆಯ ಹಾದಿಯಲ್ಲಿ ಸಾಧಕರಾಗಬೇಕೆಂದರು. ಶಾಲಾ ವಿದ್ಯಾರ್ಥಿ ಸಂಘದ ರಂಗನಾಥ್ ಹಾಗೂ ಪ್ರೀತಮ್ ಶಿಕ್ಷಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular