Friday, April 4, 2025
Google search engine

Homeರಾಜ್ಯಸುದ್ದಿಜಾಲಮಕ್ಕಳು ಪರಿಸರ ಪ್ರೇಮ ಬೆಳೆಸಿಕೊಳ್ಳಿ: ಆರ್.ಕೆ.ಮಧು

ಮಕ್ಕಳು ಪರಿಸರ ಪ್ರೇಮ ಬೆಳೆಸಿಕೊಳ್ಳಿ: ಆರ್.ಕೆ.ಮಧು

ಗುಂಡ್ಲುಪೇಟೆ: ಮಕ್ಕಳು ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವ ಮೂಲಕ ಪರಿಸರ ಪ್ರೇಮ ಬೆಳೆಸಿಕೊಳ್ಳಬೇಕೆಂದು ವನ್ಯಜೀವಿ ಛಾಯಾಗ್ರಾಹಕ ಆರ್.ಕೆ.ಮಧು ಸಲಹೆ ನೀಡಿದರು.

ತಾಲೂಕಿನ ತೆರಕಣಾಂಬಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದ ವಿಶ್ವ ಪರಿಸರ ದಿನ ಹಾಗು ಮಾಸ್ತಿ ವೆಂಕಟೇಶ ಅಯ್ಯಂಗಾರ್ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿ, ಭಾರತದಲ್ಲಿ ಪರಿಸರ ದಿನಕ್ಕಾಗಿ 1700ನೇ ಇಸವಿಯಲ್ಲೇ ಮೊದಲ ಹೋರಾಟ ಮಾಡಿದ ಬಿಷ್ಣೋಯಿ ಜನಾಂಗದ ಅಮೃತಾದೇವಿ ಮರ ಕಡಿಯಲು ಬಂದ ರಾಜನ ಸೈನಿಕರ ವಿರುದ್ಧ ಮರತಬ್ಬಿ ಪ್ರಾಣ ತ್ಯಾಗ ಮಾಡಿದ 363 ಜನ ಮಹಿಳೆಯರ ವೀರ ಹೋರಾಟದ ಕಥನವನ್ನು ಈಗ ಸ್ಮರಿಸುವುದು ಅತ್ಯಗತ್ಯವಾಗಿ ಎಂದರು.

50ನೇ ವರ್ಷದ ಪರಿಸರ ದಿನಾಚರಣೆಯನ್ನು ಸಂಭ್ರಮಕ್ಕಿಂತ ಪರಿಸರ ನಾಶವಾಗಲು ಆರಂಭವಾಗಿ 50 ವರ್ಷ ತುಂಬಿದ ಎಚ್ಚರಿಕೆಯ ದಿನವನ್ನಾಗಿ ಆಚರಿಸಬೇಕಾಗಿದೆ. ಪ್ಲಾಸ್ಟಿಕ್ ಪಿಡುಗಿನಿಂದ ಕೇವಲ ಮಾನವರು ಮಾತ್ರವಲ್ಲ ವನ್ಯಿಜೀವಿಗಳೂ ಜೀವಬಿಡುವ ಪರಿಸ್ಥಿತಿ ಬಂದೊದಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಪ್ರಾಂಶುಪಾಲರಾದ ಮಹದೇವಪ್ರಸಾದ್ ಮಾತನಾಡಿ, ಮಾಸ್ತಿ ವೆಂಕಟೇಶ ಅಯ್ಯಂಗಾರರು ಸಣ್ಣ ಕಥೆಗಳ ಜನಕ ಹಾಗೂ ಹಾಸ್ಯ ಪ್ರಜ್ಞೆ ಉಳ್ಳವರಾಗಿದ್ದರು. ಅವರ ಕಥೆಗಳು ನೀತಿ ಹಾಗೂ ಮಾರ್ಗದರ್ಶಕವಾಗಿದ್ದವು ಎಂದರು.

ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರು ಮತ್ತು ಮಕ್ಕಳು ಭಾಗವಹಿಸಿದ್ದರು.  

RELATED ARTICLES
- Advertisment -
Google search engine

Most Popular